ಇಹಲೋಕ ತ್ಯಜಿಸಿದ ಪ್ರಣಬ್ ಮುಖರ್ಜಿ

ನವದೆಹಲಿ: ಭಾರತದ 13ನೇ ರಾಷ್ಟ್ರಪತಿ ಯಾಗಿ, ದೇಶದ ಆರ್ಥಿಕ ಸಚಿವರಾಗಿ ಕಾರ್ಯ ನಿರ್ವಹಿಸಿದ್ದ  ಭಾರತ ರತ್ನ ಪ್ರಶಸ್ತಿ ಪುರಸ್ಕೃತ ಪ್ರಣಬ್ ಮುಖರ್ಜಿ (84) ಸೋಮವಾರದಂದು ವಿಧಿವಶರಾದರು

ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಕೆಲವು ದಿನಗಳ ಹಿಂದೆ ಆರೋಗ್ಯ ತಪಾಸಣೆಗಾಗಿ ಆರ್ಮಿ ರಿಸರ್ಚ್ ಮತ್ತು ರೆಫರ್ರೆಲ್ ಆಸ್ಪತ್ರೆಗೆ ಭೇಟಿ ನೀಡಿದ್ದ ವೇಳೆ ಕೋವಿಡ್ 19 ಪಾಸಿಟಿವ್ ದೃಢಪಟ್ಟಿತ್ತು.

ಈ ಬಗ್ಗೆ ಸ್ವತಃ ಮುಖರ್ಜಿ ಅವರು ಟ್ವೀಟ್ ಮಾಡಿ ವಿಷಯ ಹಂಚಿಕೊಂಡು, ತನ್ನ ಸಂಪರ್ಕಕ್ಕೆ ಬಂದವರು ಐಸೋಲೇಶನ್ ಗೆ ಒಳಗಾಗು ವಂತೆ ಮನವಿ ಮಾಡಿ ಕೊಂಡಿದ್ದರು.

ಅವರ ಮೆದುಳಿನಲ್ಲಿ ಹೆಪ್ಪುಗಟ್ಟಿದ್ದ ಭಾರೀ ಪ್ರಮಾಣದ ರಕ್ತವನ್ನು ಶಸ್ತ್ರಚಿಕಿತ್ಸೆ ಮೂಲಕ ಹೊರತೆಗೆಯಲಾಗಿತ್ತು. ಬಳಿಕ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು. ಅಲ್ಲದೇ ಅವರನ್ನು ವೆಂಟಿಲೇಟರ್ ನಲ್ಲಿ ಇಟ್ಟು ನಿಗಾವಹಿಸಲಾಗಿತ್ತು.

ಕೊನೆಗೂ ಪ್ರಣಬ್ ಮುಖರ್ಜಿ ಅವರ ಆರೋಗ್ಯ ಸ್ಥಿತಿ ತೀರಾ ವಿಷಮ ಸ್ಥಿತಿಗೆ ಹೋಗಿದ್ದು, ಇಹಲೋಕ ತ್ಯಜಿಸಿರುವುದಾಗಿ ಆಸ್ಪತ್ರೆಯ ಮೂಲಗಳು ತಿಳಿಸಿವೆ.

 
 
 
 
 
 
 
 
 

Leave a Reply