ಮೊಬೈಲ್ ವಿಚಾರಕ್ಕೆ ಅತ್ತೆಯೊಂದಿಗೆ ಜಗಳ: ಕೋಪದಿಂದ ಮಕ್ಕಳನ್ನು‌ ಬಾವಿಗೆಸೆದು ಆತ್ಮಹತ್ಯೆಗೆ ಶರಣಾದ ಸೊಸೆ

ಭೋಪಾಲ್ : ಮೊಬೈಲ್ ವಿಚಾರಕ್ಕೆ ಅತ್ತೆಯೊಂದಿಗೆ ಜಗಳವಾಡಿದ ಸೊಸೆ ಸಿಟ್ಟಿನಿಂದ ತನ್ನ ಇಬ್ಬರು ಮಕ್ಕಳನ್ನು ಬಾವಿಗೆಸೆದು, ತಾನು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಮಧ್ಯಪ್ರದೇಶದ ಚತರ್ಪುರದ ಹಳ್ಳಿಯೊಂದರಲ್ಲಿ ಈ ಘಟನೆ ನಡೆದಿದ್ದು ತನ್ನ 10 ಮತ್ತು 4 ವರ್ಷದ ಇಬ್ಬರು ಹೆಣ್ಣುಮಕ್ಕಳನ್ನು ಬಾವಿಗೆ ಹಾಕಿ, ನಂತರ ತಾನು ನೇಣು ಬಿಗಿದುಕೊಂಡಿದ್ದಾಳೆ. ಅದೃಷ್ಟವಶಾತ್ ಆ ಇಬ್ಬರು ಹೆಣ್ಣುಮಕ್ಕಳು ಬಾವಿಯ ಕಲ್ಲಿನ ಸಂದಿಯಲ್ಲಿ ಸಿಕ್ಕಿಹಾಕಿಕೊಂಡು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಮೃತಳ ಅತ್ತೆ ಆಕೆಯ ಮೊಬೈಲ್ ಫೋನನ್ನು ಕಿತ್ತುಕೊಂಡಿದ್ದು ಇದರಿಂದ ಕೋಪಗೊಂಡಿದ್ದ ಸೊಸೆ ಅತ್ತೆಯೊಂದಿಗೆ ಜಗಳವಾಡಿದ್ದಳು. ಇದೇ ವಿಷಯ ದೊಡ್ಡದಾಗಿ ಕೋಪಗೊಂಡ ಆಕೆ ಮರುದಿನ ತನ್ನಿಬ್ಬರು ಮಕ್ಕಳನ್ನು ಕರೆದುಕೊಂಡು ತೋಟದ ಮನೆಗೆ ಹೋಗಿದ್ದಾಳೆ. ಅಲ್ಲಿ ಮಕ್ಕಳನ್ನು ಬಾವಿಗೆ ತಳ್ಳಿ ಬಳಿಕ ಮನೆಗೆ ಬಂದು ನೇಣು ಹಾಕಿಕೊಂಡಿದ್ದಾಳೆ ಎಂದು ಪೋಲೀಸರು ತಿಳಿಸಿದ್ದಾರೆ.

 
 
 
 
 
 
 
 
 
 
 

Leave a Reply