ಉಡುಪಿ ರೋಬೊಸಾಫ್ಟ್ ಟೆಕ್ನಲಾಜಿಸ್ ಜಪಾನ್ ಮೂಲದ ಐಟಿ ಸಂಸ್ಥೆಯ ಪಾಲಾಗಿದೆ.

ಉಡುಪಿ: ದೇಶದ ಉದ್ಯಮ ರಂಗದಲ್ಲಿ ಮಹತ್ವಪೂರ್ಣ ಬೆಳವಣಿಗೆಯಾಗಿದ್ದು, ಕರ್ನಾಟಕ ಕರಾವಳಿಯ ಮೊದಲ ಐಟಿ ಕಂಪನಿ, ಉಡುಪಿ ರೋಬೊಸಾಫ್ಟ್ ಟೆಕ್ನಲಾಜಿಸ್ ಜಪಾನ್ ಮೂಲದ ಐಟಿ ಸಂಸ್ಥೆಯ ಪಾಲಾಗಿದೆ. 800 ಕೋಟಿ ರೂ.ಗೆ ರೋಬೊಸಾಫ್ಟ್‌ನ ಶೇ.100 ಷೇರುಗಳನ್ನು ಜಪಾನ್ ಮೂಲದ ಟೆಕ್ನೋ ಪ್ರೊ ಹೋಲ್ಡಿಂಗ್ಸ್ ಕಂಪನಿ ಖರೀದಿಸಲು ಮುಂದಾಗಿದೆ. 
ರೋಬೊಸಾಫ್ಟ್ ಸಂಸ್ಥೆಯಲ್ಲಿ 800ಕ್ಕೂ ಅಧಿಕ ಸಾಫ್ಟ್‌ವೇರ್ ಇಂಜಿನಿಯರ್ಸ್‌ಗಳು ಕಾರ್ಯನಿರ್ವ ಹಿಸುತ್ತಿದ್ದು, ಈ ಹೊಸ ಒಪ್ಪಂದದಿಂದಾಗಿ ಕಂಪನಿಯೂ ಅಮೆರಿಕ, ಯುರೋಪ್, ಜಪಾನ್ ಸೇರಿ ದಂತೆ ಭಾರತದಲ್ಲಿ ಕಾರ್ಯವ್ಯಾಪ್ತಿ ವಿಸ್ತಾರಗೊಳ್ಳಲಿದೆ. 1996ರಲ್ಲಿ ಉಡುಪಿಯ ಸಂತೆ ಕಟ್ಟೆಯಲ್ಲಿ ಆರಂಭಗೊಂಡಿದ್ದು, ಭಾರತೀಯ ಮತ್ತು ಜಾಗತಿಕ ಮಟ್ಟದಲ್ಲಿ ಇಂಟರ್‌ನೆಟ್ ಬ್ರಾೃಂಡ್‌ಗಳಿಗೆ ಅಪ್ಲಿಕೇಶನ್ ಸಿದ್ಧಪಡಿಸುತ್ತಿತ್ತು. 
ಮೊಬೈಲ್ ಆ್ಯಪ್ಸ್, ಗೇಮಿಂಗ್ ಸಾಫ್ಟ್‌ವೇರ್ ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿದ್ದ ಐಟಿ ಸಂಸ್ಥೆ ರೋಬೊ ಸಾಫ್ಟ್‌ನ ವಾರ್ಷಿಕ ವಹಿವಾಟು 183 ಕೋಟಿ ರೂ ಇದೆ. ಸದ್ಯ ಜಪಾನ್‌ನ ಟೆಕ್ನೋ ಪ್ರೊ ಹೋಲ್ಡಿಂಗ್ಸ್ 800 ಕೋಟಿ ರೂಪಾಯಿಗೆ ಖರೀದಿ ಒಪ್ಪಂದ ಪ್ರಕ್ರಿಯೆ ನಡೆದಿದೆ. 
 
 
 
 
 
 
 
 
 
 
 

Leave a Reply