ಮುಂಬೈ ಅದಮಾರು ಸ್ಕೂಲ್ ನಲ್ಲಿ ಸಾವಿರ ವಿದ್ಯಾರ್ಥಿಗಳಿಂದ ಕೋಟಿಗೀತಾ ಲೇಖನ ದೀಕ್ಷೆ ದಾಹಿಸರ್

ಮುಂಬೈ ಅಕ್ಟೋಬರ್ 10 ಉಡುಪಿ ಶ್ರೀ ಅದಮಾರು ಮಠದಿಂದ ಮುಂಬೈ ಶ್ರೀ ಪೂರ್ಣಪ್ರಜ್ಞ ಶಿಕ್ಷಣ ಕೇಂದ್ರಕ್ಕೆ ಭಾವೀ ಪರ್ಯಾಯ ಶ್ರೀಗಳಾದ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರನ್ನು ಹಾಗೂ ಕಿರಿಯ ಯತಿಗಳಾದ ಸುಶ್ರೀಂದ್ರ
ತೀರ್ಥ ಶ್ರೀಪಾದರನ್ನು ಆದರಿಂದ ಬರಮಾಡಿಕೊಂಡು ಗೌರವಿಸಿದರು ಹಾಗೂ ಸಾವಿರ ವಿದ್ಯಾರ್ಥಿಗಳನ್ನು ಕೋಟಿ ಗೀತಾ ಲೇಖನ ಯಜ್ಞಕ್ಕೆ ನೊಂದಾಯಿಸಲಾಯಿತು ಈ ಸಂದರ್ಭದಲ್ಲಿ ಕಿರಿಯ ಶ್ರೀಗಳಾದ ಸುಶ್ರೀಂದ್ರ ತೀರ್ಥ ಶ್ರೀಪಾದರು ಆಧ್ಯಾತ್ಮಿಕ ತಮ್ಮನ್ನು ಆಕರ್ಷಿಸಿ. ಜೀವನ ಪರಿವರ್ತನೆಮಾಡಿದ ಪರಿಯನ್ನು ವಿವರಿಸುತ್ತಾ ಭಗವದ್ಗೀತೆಯಿಂದ ವಿದ್ಯಾರ್ಥಿಗಳ ಜೀವನ ಉತ್ಕೃಷ್ಟವಾಗುವ ಬಗೆಯನ್ನು ವಿವರಿಸಿದರು ಹಾಗೂ ಶ್ರೀ ಪುತ್ತಿಗೆ ಮಠದ ಹಿರಿಯ ಶ್ರೀಗಳಾದ ಸುಗುಣೇಂದ್ರ ತೀರ್ಥ ಶ್ರೀ ಪಾದರು ಈ ಸಂದರ್ಭದಲ್ಲಿ ತಮ್ಮ ಉದ್ಧಾರಕರಾದ ಹಾಗೂ ಪೂರ್ಣಪ್ರಜ್ಞ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕರಾದ ಶ್ರೀ ಶ್ರೀ ವಿಭುದೇಶ ತೀರ್ಥ ಶ್ರೀಪಾದರನ್ನು ಸ್ಮರಿಸುತ್ತಾ ಅವರು ಪೂರ್ಣಪ್ರಜ್ಞ ಎಂಬ ಶುಭ ನಾಮವನ್ನು ಶೈಕ್ಷಣಿಕ ಕ್ಷೇತ್ರದ ಉತ್ಕೃಷ್ಟವಾದ ಬ್ರಾಂಡ್ ಆಗಿ ಬೆಳೆಸಿದರು ಎಂದು ಶ್ಲಾಘಿಸಿದರು. ಅದರಂತೆ ಅವರ ಶಿಷ್ಯರಾದ ಶ್ರೀ ವಿಶ್ವ ಪ್ರಿಯ ತೀರ್ಥಶ್ರೀಪಾದರ ಹಾಗೂ ಈಶಪ್ರಿಯ ತೀರ್ಥಶ್ರೀಪಾದರ ಸಾಧನೆಗಳ ಪುರೋಗಮನವನ್ನು ಪ್ರಶಂಶಿಸಿದರು..
ಜಗತ್ತಿನ ಮಾರ್ಗದರ್ಶಕ ಗ್ರಂಥವಾದ ಭಗವದ್ಗೀತೆಯ ವಿಶೇಷ ಅವಶ್ಯಕತೆಯನ್ನು ವಿದ್ಯಾರ್ಥಿಗಳಿಗೆ ವಿವರಿಸಿ ಗೀತೆ ಪ್ರತಿಯೊಬ್ಬರಿಗೂ ಗುರಿತಲುಪಿಸುವ GPS ಎಂದರು.
ಖಿನ್ನತೆ ಮಾನಸಿಕಕ್ಷೋಭೆ ಮೊದಲಾದ ಮನೋವ್ಯಾಧಿಗಳು ದಿನೇ ದಿನೇ ಚಿಕ್ಕ ಮಕ್ಕಳಲ್ಲಿಯೂ ಹರಡುತ್ತಿರುವ ಈ ಕಾಲಘಟ್ಟದಲ್ಲಿ ಗೀತೆಯೋಂದೇ ಅದಕ್ಕೆ ಸೂಕ್ತ ಪರಿಹಾರ ಎಂದು ನಿರೂಪಿಸಿದರು. ಶ್ರೀ ಪೂರ್ಣಪ್ರಜ್ಞ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರಾದ NR ರಾವ್ ಅವರು ಶ್ರೀಗಳನ್ನು ಸ್ವಾಗತಿಸಿ ಗೌರವಿಸಿದರು ಶ್ರೀ ಸರ್ವಜ್ಞ ಉಡುಪ ನಾಗೇಂದ್ರ ರಾವ್ ಮೊದಲಾದವರು ಗೌರವಿಸಿದರು. ಶ್ರೀಮತಿ ಅಪರ್ಣಾ ಅವರು ನಿರೂಪಿಸಿದರು.ಉಭಯ ಶ್ರೀಗಳ ಗೌರವಾರ್ಥವಾಗಿ ಭವ್ಯ ಮೆರವಣಿಗೆಯೊಂದಿಗೆ ವಿದ್ಯಾರ್ಥಿಗಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಮರ್ಪಿಸಿದರು..

 
 
 
 
 
 
 
 
 
 
 

Leave a Reply