ಪಿ.ಪಿ.ಸಿ.: ಪ್ರಧಾನಮಂತ್ರಿ ಕೌಶಲ್ಯ ವಿಕಾಸ ಯೋಜನಾ ಕೇಂದ್ರದ ಉದ್ಘಾಟನೆ

ಉಡುಪಿ ಪೂರ್ಣಪ್ರಜ್ಞ ಕಾಲೇಜಿನಲ್ಲಿ ಪ್ರಧಾನಮಂತ್ರಿ ಕೌಶಲ್ಯ ವಿಕಾಸ ಯೋಜನಾ ಕೇಂದ್ರದ ಉದ್ಘಾಟನೆಯು ದಿನಾಂಕ ೯ನೇ ಅಕ್ಟೋಬರ್‌ನಂದು ನಡೆಯಿತು. ಕೇಂದ್ರದ ಉದ್ಘಾಟನೆಯನ್ನು ನೆರವೇರಿಸಿದ  ಶ್ರೀ ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿಯವರು ಸ್ಥಾಪಕಾಧ್ಯಕ್ಷರಾದ ಪರಮಪೂಜ್ಯ ಶ್ರೀ ಶ್ರೀ ವಿಭುದೇಶ ತೀರ್ಥರ ಕನಸಿನಂತೆ ಕೌಶಲ್ಯ ಕೇಂದ್ರವನ್ನು ಪೂರ್ಣಪ್ರಜ್ಞ ಕಾಲೇಜಿ ನಲ್ಲಿ ಉದ್ಘಾಟಿಸಲಾಗಿದ್ದು, ಭಾರತದಂತಹ ಜನಬಾಹುಳ್ಯವಿರುವ ದೇಶದಲ್ಲಿ ಕೌಶಲ್ಯ ಹೊಂದಿದ ಮಾನವ ಸಂಪನ್ಮೂಲವು ಅಗತ್ಯವಾಗಿದೆ. 
ಹಾಗಾಗಿ ಪೂರ್ಣಪ್ರಜ್ಞ ಕಾಲೇಜಿನಲ್ಲಿ ಉದ್ಘಾಟನೆಯಾದಂತಹ ಕೌಶಲ್ಯ ಕೇಂದ್ರದ ಸದುಪಯೋಗವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಲಿ ಎಂದು ಹಾರೈಸಿದರು. ಉದ್ಘಾಟನಾ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಉಡುಪಿ ಜಿಲ್ಲಾ ಹೆಚ್ಚುವರಿ ಪೋಲಿಸ್ ವರಿಷ್ಠಾಧಿಕಾರಿಗಳಾದ ಶ್ರೀ ಎಸ್. ಟಿ. ಸಿದ್ದಲಿಂಗಪ್ಪ ಇವರು ಬದಲಾವಣೆ ಜಗದ ನಿಯಮ, ಈ ಸಮಯದಲ್ಲಿ ಹಲವು ವಿಷಯಗಳ ಅಧ್ಯಯನ ಹಾಗೂ ಸೂಕ್ತ ಕೌಶಲ್ಯವನ್ನು ಹೊಂದಿದಾಗ ಉನ್ನತ ಹುದ್ದೆಗಳು ಹಾಗೂ ಹೆಚ್ಚಿನ ಭತ್ಯೆಗಳನ್ನು ಪಡೆಯಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಮತ್ತೋರ್ವ ಅತಿಥಿಗಳಾದ ಶ್ರೀ ಸೂರಜ್ ನಾಡಿಗ್‌ರವರು ಪ್ರಧಾನಮಂತ್ರಿ ಕೌಶಲ್ಯ ವಿಕಾಸ ಯೋಜನೆ ಯ ಕುರಿತು ವಿಷದವಾಗಿ ಲಭ್ಯವಿರುವ ಕೋರ್ಸ್ಗಳ ಕುರಿತು ವಿವರವಾದ ಮಾಹಿತಿಯನ್ನು ನೀಡಿದರು. ಹಾಗೆಯೇ ಕೋರ್ಸ್ಗಳನ್ನು ಮುಗಿಸಿದ ವಿದ್ಯಾರ್ಥಿಗಳಿಗೆ ದೊರಕುವ ಹಣಕಾಸಿನ ಸಹಕಾರದ ಮೂಲಗಳ ಕುರಿತು ವಿವರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸಿ.ಎ. ಪ್ರಶಾಂತ್ ಹೊಳ್ಳರವರು ವಿದ್ಯಾರ್ಥಿಗಳಿಗೆ ಕೌಶಲ್ಯದ ಅಗತ್ಯತೆಯನ್ನು ಕುರಿತು ತಿಳಿಸಿದರು. ಕಾರ್ಯಕ್ರಮದಲ್ಲಿ ಪೂರ್ಣಪ್ರಜ್ಞ ಕಾಲೇಜಿನ ಪ್ರಾಂಶುಪಾಲರಾದ ಡಾ. ರಾಮು ಎಲ್, ಪೂರ್ಣಪ್ರಜ್ಞ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮಂಟ್‌ನ ನಿರ್ದೇಶಕರಾದ ಡಾ. ಭರತ್, ಅದಮಾರು ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಸಂಜೀವ ನಾಯಕ್ ಹಾಗೂ ಅತಿಥಿಗಳಾದ ಶ್ರೀ ಪ್ರಕಾಶ್ ಉಪಸ್ಥಿತರಿದ್ದರು. ಪೂರ್ಣಪ್ರಜ್ಞ ಪದವಿಪೂರ್ವ  ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಪ್ರತಿಮಾ ಬಾಳಿಗ ಸ್ವಾಗತಿಸಿ, ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನ ಪ್ರಾಂಶುಪಾಲರಾದ ಡಾ. ಸುಕನ್ಯಾ ಮೇರಿ ವಂದಿಸಿದರು. ಕಾರ್ಯಕ್ರಮವನ್ನು ಕುಮಾರಿ ರಚನಾ ನಿರೂಪಿಸಿದರು. ವೇದಿಕೆ ಕಾರ್ಯಕ್ರಮದ ನಂತರ ಕೌಶಲ್ಯ ಕೇಂದ್ರಕ್ಕೆ ಅಗತ್ಯವಾದ ಮೂಲಸೌಕರ್ಯದ ಕಟ್ಟಡವನ್ನು ಉದ್ಘಾಟಿಸಲಾಯಿತು.
 
 
 
 
 
 
 
 
 
 
 

Leave a Reply