ವಿವೇಕಾನಂದ ಯೋಗ ವಿಜ್ಞಾನ ಕೇಂದ್ರ ಉಡುಪಿ ಪುತ್ತೂರು ವಾರ್ಷಿಕೋತ್ಸವ ಸಮಾರಂಭ

ವಿವೇಕಾನಂದ ಯೋಗ ವಿಜ್ಞಾನ ಕೇಂದ್ರ ಉಡುಪಿ ಪುತ್ತೂರು ಶಾಖೆಯ ವಾರ್ಷಿಕೋತ್ಸವ ಸಮಾರಂಭವು  ಪುತ್ತೂರಿನ ಅಂಬೇಡ್ಕರ್ ಸಭಾಭವನದಲ್ಲಿ ಜರುಗಿತು. ವಾರ್ಷಿಕೋತ್ಸವ ಸಮಾರಂಭವನ್ನು ಎಲ್ಲ ಅತಿಥಿ ಅಭ್ಯಾಗತರು ಸೇರಿ ಸತ್ಸಂಪ್ರದಾಯದಂತೆ ದೀಪ ಬೆಳಗುವ ಮೂಲಕ ಉದ್ಘಾಟಿಸಿದರು. ಯೋಗ ತರಗತಿಯ ನೂತನ ಸಮವಸ್ತ್ರವಾದ ಟೀ- ಶರ್ಟ್ ಅನ್ನು ಹಸ್ತಾಂತರಿಸಲಾಯಿತು. ಯೋಗ ಬಂಧುಗಳಾದ ವಾಣಿ, ಶಕುಂತಲಾ ಶೆಟ್ಟಿ, ಸುಮಿತ್ರಾ, ಕುಶಲಾ ಶೆಟ್ಟಿ, ನೀತಾ ಶೆಟ್ಟಿ, ಸಂಧ್ಯಾ ಶೆಟ್ಟಿ ಇವರು  ಎಲ್ಲಾ ಯೋಗಬಂದುಗಳನ್ನು ಸಭೆಗೆ ಪರಿಚಯಿಸಿದರು. ಈ ಯೋಗ ತರಗತಿ ಯಾವುದೇ ತೊಂದರೆ ಇಲ್ಲದೆ ಸಮಯಕ್ಕೆ ಸರಿಯಾಗಿ ನಡೆಯುವಲ್ಲಿ ಸಹಕರಿಸುತ್ತಿರುವ ಕವಿತಾ ಇವರನ್ನು ಯೋಗ ತರಗತಿಯ ಪರವಾಗಿ ಸನ್ಮಾನಿಸಲಾಯಿತು. ವಾರ್ಷಿಕೋತ್ಸವದ ಪ್ರಯುಕ್ತ ನಡೆಸಿದ ಮೋಜಿನಾಟಗಳ ವಿಜೇತರಾದವರಿಗೆ  ಬಹುಮಾನವನ್ನು ವಿತರಿಸಲಾಯಿತು. ಭಾರತಿ ಇವರು ಬಹುಮಾನ ವಿಜೇತರ ಪಟ್ಟಿಯನ್ನು ವಾಚಿಸಿದರು.
ಯೋಗಾರ್ಥಿಗಳಾದ ಅಂಜಲಿ, ಸುಭದ್ರ, ಗಾಯತ್ರಿ, ಪ್ರಮೀಳಾ, ಚಂದ್ರಪತಿಮ, ಸಂಧ್ಯಾ ಶೇಟ್, ಸವಿತಾ ಮತ್ತು ಶ್ವೇತಾ ಶೆಟ್ಟಿ ಇವರು ಯೋಗ ತರಗತಿಯ ಬಗ್ಗೆ, ಯೋಗ ಅಭ್ಯಾಸದಿಂದ ಆದ ಪ್ರಯೋಜನದ ಬಗ್ಗೆ ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಮುಕ್ತವಾಗಿ ವ್ಯಕ್ತಪಡಿಸಿದರು.. ಮುಖ್ಯ ಅತಿಥಿಗಳಾದ ಗ್ರಾಮ ಲೆಕ್ಕಿಗ ಕುಮಾರಸ್ವಾಮಿ, ಪ್ರಮೋದ್ ತಂತ್ರಿ, ಲೀಲಾ ಭಟ್ ಸತೀಶ್ ಕುಂದರ್, ಹಾಗೂ ಪಿ.ವಿ.ಭಟ್ ಇವರನ್ನು ಸನ್ಮಾನಿಸಲಾಯಿತು. ಯೋಗಾರ್ಥಿಗಳಾದ ಲಕ್ಷ್ಮೀ ಟೀಚರ್, ಅನುಪಮಾ ಮತ್ತು ವೇದ ಎನ್. ಶೆಟ್ಟಿ ಅತಿಥಿಗಳನ್ನು ಪರಿಚಯಿಸಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಪುತ್ತೂರು ಗ್ರಾಮ ಲೆಕ್ಕಿಗ ಕುಮಾರಸ್ವಾಮಿ ಅವರು ಅಂಬೇಡ್ಕರ್ ಭವನದಲ್ಲಿ ನಡೆಸುತ್ತಿರುವ ಈ ಯೋಗ ತರಗತಿಗೆ ತನ್ನ ಸರ್ವ ಸಹಕಾರವನ್ನು ನೀಡುವುದಾಗಿ ತಿಳಿಸಿದರು. ಪ್ರಮೋದ್ ತಂತ್ರಿ ಅವರು ಮಾತನಾಡಿ ಈ ಯೋಗ ತರಗತಿ ಇಷ್ಟರಮಟ್ಟಿಗೆ ಬೆಳೆದುದು ತನಗೆ ಸಂತೋಷ ತಂದಿದೆ ಎಂದು ಪ್ರಶಂಸಿಸಿ ಮುಂದಿನ ದಿನಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ಪ್ರಯತ್ನಿಸುತ್ತೇನೆ ಎಂದು ಹೇಳಿದರು. ಲೀಲಾ ಭಟ್ ಇವರು ಮಾತನಾಡಿ ಯೋಗವು ಒಂದು ಅಭ್ಯಾಸ ಮಾತ್ರ ಆಗಿರದೆ ಅದೊಂದು ವಿಜ್ಞಾನ ಆಗಿದೆ. ಉತ್ತಮ ಮಾನಸಿಕ ಹಾಗೂ ದೈಹಿಕ ಆರೋಗ್ಯ ಹೊಂದಲು ನಿರಂತರ ಯೋಗ ಅಭ್ಯಾಸದಿಂದ ಸಾಧ್ಯ ಎಂದು ಅಭಿಪ್ರಾಯಪಟ್ಟರು. ಯೋಗ ಗುರುಗಳಾದ ಸತೀಶ್ ಕುಂದರ್ ಇವರು ಮಾತನಾಡಿ ಈಗಿನ ಮಕ್ಕಳಿಗೆ ತಾಯಂದಿರು ಸನಾತನ ಸಂಸ್ಕೃತಿ ಸಂಸ್ಕಾರ ವನ್ನು ಬಾಲ್ಯದಿಂದಲೇ ತಿಳಿಸುವ ಪ್ರಯತ್ನ ಆಗಬೇಕು. ಈ ಮೂಲಕ ಮುಂದಕ್ಕೆ ಅವರು ದೇಶದ ಉತ್ತಮ ಪ್ರಜೆಗಳಾಗಿ ಸದೃಢ ಸಮಾಜವನ್ನು ನಿರ್ಮಿಸಲು ಸಾಧ್ಯವಾಗುತ್ತದೆ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಯೋಗಾಚಾರ್ಯ ಶ್ರೀ ಪಿ.ವಿ. ಭಟ್ ಅವರು ಮಾತನಾಡಿ ಸುಮಾರು ಆರು ವರ್ಷಗಳ ಹಿಂದೆ ಪುತ್ತೂರಿನ ಬ್ರಾಹ್ಮಣ ಸಬಾದ ವತಿಯಿಂದ ನಡೆದ 21 ದಿನಗಳ ಶಿಬಿರದ ಮೂಲಕ ಪ್ರಾರಂಭವಾದ ಈ ಯೋಗ ತರಗತಿ ನಂತರ ನಿಂತ ನೀರಾಗದೆ ಹೆಮ್ಮರವಾಗಿ ಬೆಳೆದು ನಿಂತು ಈಗ ಸುಮಾರು 35 ಯೋಗ ಬಂಧುಗಳು ನಿರಂತರ ಯೋಗಭ್ಯಾಸದಲ್ಲಿ ತೊಡಗಿಸಿಕೊಂಡಿರುವುದು ನನ್ನ ಯೋಗ ಜೀವನದಲ್ಲೇ ಅತ್ಯಂತ ವಿಶಿಷ್ಟ ಹಾಗೂ ಬಹಳ ಅಪರೂಪದ ಘಟನೆ. ಇದಕ್ಕೆ ಕಾರಣರಾದ ಎಲ್ಲರೂ ಅಭಿನಂದನಾರ್ಹರು ಎಂದು ಮುಕ್ತ ಕಂಠದಿಂದ ಸಂತಸ ಹಾಗೂ ಶ್ಲಾಘನೆ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಯೋಗ ತರಗತಿಯನ್ನು ಯಾವುದೇ ಫಲಾಫೇಕ್ಷೆ ಇಲ್ಲದೆ ಉತ್ತಮವಾಗಿ ಎಲ್ಲರ ಸಹಕಾರದಿಂದ ನಡೆಸಿಕೊಂಡು ಬರುತ್ತಿರುವ ಶ್ರೀಮತಿ ಸುನಿತಾ ಚೈತನ್ಯ ಅವರನ್ನು ಯೋಗಾಚಾರ್ಯ ಪಿ.ವಿ. ಭಟ್ ಸರ್ ಅವರು ವಿವೇಕಾನಂದ ಯೋಗ ವಿಜ್ಞಾನ ಕೇಂದ್ರ ಪುತ್ತೂರು ಶಾಖೆಯ ಯೋಗ ಶಿಕ್ಷಕಿಯಾಗಿ ನಿಯುಕ್ತಿಗೊಳಿಸಿ ಅಧಿಕೃತ ಪ್ರಮಾಣ ಪತ್ರವನ್ನು ನೀಡಿದರು. ಎಲ್ಲಾ ಯೋಗ ಬಂಧುಗಳು ಹಾಗೂ ಯೋಗ ಗುರುಗಳು ಸೇರಿ ಈ ಸಂದರ್ಭದಲ್ಲಿ ಯೋಗ ಶಿಕ್ಷಕಿ ಸುನೀತಾ ಚೈತನ್ಯ ಅವರನ್ನು ಅಭಿನಂದನಾ ಪತ್ರ ನೀಡಿ ಸನ್ಮಾನಿಸಿ ಗೌರವಿಸಿದರು. ಸುನೀತಾ ಚೈತನ್ಯ ಅವರು ಅಭಿನಂದನೆ ಸ್ವೀಕರಿಸಿ ಮಾತನಾಡುತ್ತಾ ಯೋಗ ಶಿಕ್ಷಕಿಯಾಗಿ ನಿಯುಕ್ತಿಕೊಂಡಿರುವುದರಿಂದ ನನ್ನ ಜವಾಬ್ದಾರಿ ಇನ್ನೂ ಜಾಸ್ತಿಯಾಗಿದೆ. ಅನಿರೀಕ್ಷಿತವಾಗಿ ಒದಗಿದ ಈ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸಲು, ನಿಭಾಯಿಸಲು ಎಲ್ಲ ಗುರುಗಳ ಮತ್ತು ಯೋಗ ಬಂಧುಗಳ ಸಹಕಾರ ತುಂಬಾ ಅಗತ್ಯ.. ಯೋಗ ಗುರುಗಳಾದ ಪಿ.ವಿ. ಭಟ್ ಸರ್ ಮತ್ತು ಸತೀಶ್ ಸರ್ ಇವರ ಸಲಹೆ ಸೂಚನೆ ಮಾರ್ಗದರ್ಶನದಿಂದ ತನಗೆ ಈಗ ಬೇರೆಯವರಿಗೆ ಯೋಗವನ್ನು ಕಲಿಸುವಷ್ಟು, ಯೋಗ ತರಗತಿ ನಡೆಸುವಷ್ಟು ಧೈರ್ಯ, ಆತ್ಮವಿಶ್ವಾಸ ಬಂದಿದೆ. ಇದು ನನ್ನ ಜೀವನದ ಒಂದು ಮರೆಯಲಾಗದ ಅಪೂರ್ವ ಕ್ಷಣ ಎಂದು ಎಲ್ಲರಿಗೂ ಕೃತಜ್ಞತೆ ವ್ಯಕ್ತಪಡಿಸಿದರು. ಪತ್ರಿಕಾ ಛಾಯಾಗ್ರಾಹಕರಾಗಿ ಸಹಕರಿಸುತ್ತಿರುವ ಮೋಹನ ಉಡುಪ ಇವರಿಗೆ ಗೌರವ ಸಮರ್ಪಣೆ ಸಲ್ಲಿಸಲಾಯಿತು. ಯೋಗ ಶಿಕ್ಷಕಿ ಸುನಿತಾ ಚೈತನ್ಯ ಸ್ವಾಗತಿಸಿದರು.ರಾಜೇಶ್ವರಿ ಭಟ್ ಪ್ರಸ್ತಾವಿಸಿದರು. ಅನುಪಮಾ, ಶಕುಂತಲಾ ಶೆಟ್ಟಿ, ಕವಿತಾ ಸಹಕರಿಸಿದರು. ಸುನೀತ ಶೆಟ್ಟಿ ವಂದನಾರ್ಪಣೆಗೈದರು. ಹಿರಿಯ ಯೋಗಾರ್ಥಿ ಲಕ್ಷ್ಮೀ ಟೀಚರ್ ಕಾರ್ಯಕ್ರಮ ನಿರೂಪಿಸಿದರು.
ಸಭಾ ಕಾರ್ಯಕ್ರಮದ ಯೋಗ ಬಂಧುಗಳಿಂದ ಮನೋರಂಜನ ಕಾರ್ಯಕ್ರಮ ಜರಗಿತು.
 
 
 
 
 
 
 
 
 
 
 

Leave a Reply