ಹಿರಿಯ ನಾಗರಿಕರ ದಿನಾಚರಣೆಯ ಪ್ರಯುಕ್ತ ವೃದ್ದಾಶ್ರಮಗಳಲ್ಲಿ ಆರೋಗ್ಯ ತಪಾಸಣಾ ಶಿಬಿರ

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಉಡುಪಿ, ಜಿಲ್ಲಾಸ್ಪತ್ರೆ ಎನ್.ಸಿ.ಡಿ ವಿಭಾಗ, ಸಮುದಾಯ ವೈದ್ಯಕೀಯ ವಿಭಾಗ, ಕೆ.ಎಂ.ಸಿ. ಮಣಿಪಾಲ ಹಾಗೂ ದಂತ ಮಹಾ ವಿದ್ಯಾಲಯ ಇವರ ಸಹಯೋಗದೊಂದಿಗೆ ಹಿರಿಯ ನಾಗರಿಕರ ದಿನಾಚರಣೆಯ ಪ್ರಯುಕ್ತ ಉಡುಪಿ ಜಿಲ್ಲೆಯ ಶಿರಬೆಟ್ಟು ಬೆಳಕು ವೃದ್ದಾಶ್ರಮ, ಆರಾಧನಾ ವೃದ್ದಾಶ್ರಮ, ಆಶ್ರಯಗಿರಿ ವೃದ್ದಾಶ್ರಮ, ಅಂಬಲಪಾಡಿ ಕುಟೀರ ವೃದ್ದಾಶ್ರಮ, ಕಾರ್ಕಳ ತಾಲೂಕಿನ ರಂಗನ ಪಲ್ಕೆ ಹೊಸಬೆಳಕು ಆಶ್ರಮ ಹಾಗೂ ಕೃಷ್ಣಾಧಾಮ ವೃದ್ದಾಶ್ರಮಗಳಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವು ಅಕ್ಟೋಬರ್ ೪ ರಿಂದ ೭ ರ ವರೆಗೆ ೪ ದಿವಸ ನಡೆಯಿತು.
ಶಿಬಿರದಲ್ಲಿ ಒಟ್ಟು 214 ಜನರಿಗೆ ಉಚಿತ ಆರೋಗ್ಯ ತಪಾಸಣೆ ನಡೆಸಲಾಯಿತು. ಕೆ.ಎಂ.ಸಿ.
ಮಣಿಪಾಲದ ತಜ್ಞ ವೈದ್ಯರು ವೃದ್ದಾಶ್ರಮಗಳಿಗೆ ತೆರಳಿ ಆರೋಗ್ಯ ತಪಾಸಣಾ ಶಿಬಿರವನ್ನು
ನಡೆಸಿದರು.
ಶಿಬಿರದಲ್ಲಿ ರಕ್ತದೊತ್ತಡ ತಪಾಸಣೆ, ಮಧುಮೇಹ ಮಧುಮೇಹ ತಪಾಸಣೆ, ಇ.ಸಿ.ಜಿ. ಪರೀಕ್ಷೆ, ಕಣ್ಣಿನ ಪರೀಕ್ಷೆ, ದಂತ ಪರೀಕ್ಷೆ, ಪಿಸಿಯೋಥೆರಪಿ, ಯೋಗ, ಐಸಿಟಿಸಿ ಪರೀಕ್ಷೆ, ಆಪ್ತ ಸಮಾಲೋಚನೆ ಹಾಗೂ ಆರೋಗ್ಯ ಶಿಕ್ಷಣ ನಡೆಸಲಾಯಿತು.
ಶಿಬಿರದಲ್ಲಿ ಉಡುಪಿ ಜಿಲ್ಲೆಯ ಮಾನಸಿಕ ತಜ್ಞ ಡಾ. ಋತಿಕ್, ಕಸ್ತೂರ್ಬಾ ಆಸ್ಪತ್ರೆಯ ಡಾ.
ಗಾಯತ್ರಿ, ಡಾ. ಶ್ರೀಕ, ಡಾ. ರಮಿತ್, ಡಾ. ಜೀವನ, ಡಾ. ಮೇಘನ, ಬೈಲೂರು ಪ್ರಾಥಮಿಕ
ಆರೋಗ್ಯ ಕೇಂದ್ರದ ಡಾ. ಮಹಾಂತೇಶ ಹೆಗ್ಡೆ, ಉಡುಪಿ ಜಿಲ್ಲಾಸ್ಪತ್ರೆಯ ಆಪ್ತ
ಸಮಾಲೋಚಕರಾದ ಮನು ಮತ್ತಿತರರು ಭಾಗವಹಿಸಿದರು.
 
 
 
 
 
 
 
 
 
 
 

Leave a Reply