ಉಡುಪಿ: “ಹಸಿರು ಹೊದಿಕೆ “ಕಾರ್ಯಕ್ರಮ

ಹೆಬ್ರಿ: ಇದೊಂದು ಅಪರೂಪದ ಕಾರ್ಯಕ್ರಮ.ಗಿಡ ನೆಡುವುದರ ಜೊತೆಗೆ ಪರಿಸರ ಜಾಗೃತಿ ಮೂಡಿಸುವ ವಿಶಿಷ್ಟ ಕಾರ್ಯಕ್ರಮ ಇವತ್ತು ಹೆಬ್ರಿ ಅರಣ್ಯ ವ್ಯಾಪ್ತಿಯ ಪೆರ್ಡೂರಿನಲ್ಲಿನಡೆಯಿತು.ವಕೀಲರು ,ನ್ಯಾಯಾಧೀಶರು ,ವಿದ್ಯಾರ್ಥಿಗಳ ಸಹಿತ ಪರಿಸರ ಪ್ರೇಮಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

ಉಡುಪಿ ವಕೀಲರ ಸಂಘ ,NECF ಮತ್ತು ಕಾನೂನು ಸೇವಾ ಪ್ರಾಧಿಕಾರ ಸಹಯೋಗದೊಂದಿಗೆ ಪಶ್ಚಿಮ ಘಟ್ಟಗಳ ಹಸಿರು ಹೊದಿಕೆ ಕಾರ್ಯಕ್ರಮವನ್ನು ಪೆರ್ಡೂರಿನಲ್ಲಿ ಹಮ್ಮಿಕೊಳ್ಳಲಾಗಿತ್ತು.ಪರಿಸರಾಸಕ್ತರಿಗೆ ಮತ್ತು ವಿದ್ಯಾರ್ಥಿಗಳಿಗೆ ಪರಿಸರದ ಬಗ್ಗೆ ಮಾಹಿತಿ ನೀಡಿ ಜಾಗೃತಿಮೂಡಿಸುವುದರೊಂದಿಗೆ 500 ಸಸಿ ನೆಡಲಾಯಿತು.ಮುಂದಿನ ತಲೆಮಾರಿಗೆ ಪರಿಸರವನ್ನು ಉಳಿಸಿ ಬೆಳೆಸುವ ಪಣ ತೊಡಲಾಯಿತು.

ವಕೀಲರ ಸಂಘದ ಅಧ್ಯಕ್ಷ ಬಿ.ನಾಗರಾಜ್ ಮತ್ತು ಹಿರಿಯ ಸಿವಿಲ್ ನ್ಯಾಯಾಧೀಶರಾದ ಶರ್ಮಿಲಾ ಎಸ್ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸ್ವತಃ ಗಿಡಗಳನ್ನು ನೆಟ್ಟರು.ಈ ಕಾರ್ಯಕ್ರಮವು ಮುಂದಿನ 10 ಭಾನುವಾರ ನಿರಂತರವಾಗಿ ಉಡುಪಿ ಮತ್ತು ಮಂಗಳೂರು ಜಿಲ್ಲೆಯ 10 ಅರಣ್ಯ ವಲಯಗಳಲ್ಲಿ ನಡೆಯಲಿವೆ.

ಉಪಸ್ಥಿತಿ

ಬಿ.ನಾಗರಾಜ್ , ವಕೀಲರ ಸಂಘದ ಅಧ್ಯಕ್ಷರು

ಶರ್ಮಿಲಾ ಎಸ್,ಹಿರಿಯ ಸಿವಿಲ್ ನ್ಯಾಯಾಧೀಶರು

ಶಶಿಧರ್ ಶೆಟ್ಟಿ ,ಎನ್ ಇಸಿಎಫ್ ಕಾರ್ಯದರ್ಶಿ

ಭಾನುವಾರ NECF ಪಶ್ಚಿಮ ಘಟ್ಟಗಳ ಹಸಿರು ಹೊದಿಕೆ ಕಾರ್ಯಕ್ರಮ ಉಡುಪಿ ಜಿಲ್ಲೆಯ ಹೆಬ್ರಿಯಲ್ಲಿ ಹೆಬ್ರಿ ಅರಣ್ಯ ಇಲಾಖೆಯ ಸಹಯೋಗದೊಂದಿಗೆ ನಡೆಯಲಿದ್ದು ಈ ಕಾರ್ಯಕ್ರಮದಲ್ಲಿ ಉಡುಪಿಯ ಜಿಲ್ಲಾ ನ್ಯಾಯಾಧೀಶರು ತಮ್ಮ ಸೆಷೆನ್ಸ ನ್ಯಾಯಾಧೀಶರು ನ್ಯಾಯವಾದಿಗಳು ಸೇರಿದಂತೆ 35 ಜನ ಕಾನೂನು ಸೇವಾ ತಂಡದವರು ಪಾಲ್ಗೊಳ್ಳಲಿದ್ದಾರೆ

ಈ ಕಾರ್ಯಕ್ರಮ ಮುಂದಿನ 10 ಭಾನುವಾರ ನಿರಂತರವಾಗಿ ಉಡುಪಿ ಮತ್ತು ಮಂಗಳೂರು ಜಿಲ್ಲೆಯ 10 ಅರಣ್ಯ ವಲಯಗಳಲ್ಲಿ ಅರಣ್ಯ ಇಲಾಖೆ ಮತ್ತು ತಾಲೂಕು & ಜಿಲ್ಲಾ ನ್ಯಾಯಾಧೀಶರ ನ್ಯಾಯವಾದಿಗಳ ಜಂಟಿ ಆಶ್ರಯದಲ್ಲಿ ನಡೆಯಲಿದ್ದು ಈ ಪ್ರಕ್ರಿಯೆಯು ಮುಂದಿನ ದಿನಗಳಲ್ಲಿ ಪರಿಸರ ರಕ್ಷಣೆಗೆ ಕಾನೂನಾತ್ಮಕ ಸಹಕಾರ ದೊರೆಯುವ ಭರವಸೆ ಮೂಡಿಸಲಿದೆ.

 
 
 
 
 
 
 
 
 
 
 

Leave a Reply