ಮಣಿಪಾಲದ ಎಂಐಟಿ ಆವರಣದಲ್ಲಿ ವಿಶ್ವ ಭೂಮಿ ದಿನ- ಚಿತ್ರಕಲಾ, ಛಾಯಾಚಿತ್ರ ಸ್ಪರ್ಧೆ

ವಿಶ್ವ ಭೂಮಿ‌ ದಿನದ ಅಂಗವಾಗಿ ಎ.22 ರಂದು ಮಣಿಪಾಲದ ಎಂಐಟಿ, (ಎಬಿ 3) ಆವರಣದಲ್ಲಿ ಚಿತ್ರಕಲಾ ಸ್ಪರ್ಧೆ ನಡೆಯಲಿದೆ.

ಮಣಿಪಾಲ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಸಿವಿಲ್ ವಿಭಾಗ ಹಾಗೂ ಎನ್ನೆಸ್ಸೆಸ್ ಘಟಕಗಳ ವತಿಯಿಂದ ಆಯೋಜಿಸಲಾದ ಈ ಸ್ಪರ್ಧೆಯಲ್ಲಿ 

A. 1 ರಿಂದ 4 ನೇ ತರಗತಿ ಮಕ್ಕಳಿಗೆ (ಎ3 ಗಾತ್ರದ ಚಿತ್ರಕಲೆ ಹಾಳೆಗಳು)

B. 5 ರಿಂದ 8ನೇ ತರಗತಿ ವರೆಗೆ ಮಕ್ಕಳಿಗೆ (ಎ2 ಗಾತ್ರದ ಚಿತ್ರಕಲೆ ಹಾಳೆಗಳು)

C. 9 ರಿಂದ ದ್ವಿತೀಯ ಪಿಯುವರೆಗೆ (ಎ2 ಗಾತ್ರದ ಚಿತ್ರಕಲೆ ಹಾಳೆಗಳು)

 ಪ್ಲಾಸ್ಟಿಕ್ ಮುಕ್ತ ಭಾರತ್ ವಿಷಯದಲ್ಲಿ ಚಿತ್ರ ಬಿಡಿಸಬಹುದಾಗಿದೆ. 

ಸ್ಪರ್ಧೆಯ ಥೀಮ್ ಅನ್ನು ಬೆಳಗ್ಗೆ ತಿಳಿಸಲಾಗುವುದು ಹಾಗೂ ಸ್ಪರ್ಧೆ ಬೆಳಿಗ್ಗೆ 9.30ರಿಂದ 11.30 ವರೆಗೆ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ. ಚಿತ್ರಕಲೆ ಹಾಳೆಗಳನ್ನು ವಿತರಿಸಲಾಗುವುದು. ಉಳಿದ ಪರಿಕರಗಳನ್ನು ತಾವೇ ತರತಕ್ಕದ್ದು. ವಿಜೇತರಿಗೆ ಎ.22 ರಂದು ಸಂಜೆ ನಡೆಯುವ ಕಾರ್ಯಕ್ರಮದಲ್ಲಿ ನಗದು ಬಹುಮಾನ ವಿತರಿಸಲಾಗುವುದು.

https://forms.gle/YffJAGeaoqnX5uB57

ಅದೇ ರೀತಿ ಛಾಯಾಗ್ರಹಣ ಸ್ಪರ್ಧೆ ಎ20 ರಂದು ನಡೆಯಲಿದೆ. ಇದಕ್ಕೆ ವಯೋಮಿತಿ‌ ಇರುವುದಿಲ್ಲ. ಅದೇ ದಿನ ಬೆಳಗ್ಗೆ 9 ರಿಂದ ಸಂಜೆ 4 ಗಂಟೆಯವರೆಗೆ ಛಾಯಾಚಿತ್ರ ಕ್ಲಿಕ್ಕಿಸಿ ಗೂಗಲ್ ಫಾರ್ಮನಲ್ಲಿ ಇರುವ ಗೂಗಲ್ ಡ್ರೈವ್ ನಲ್ಲಿ ಅಪ್ಲೋಡ್ ಮಾಡಬೇಕು.ಜಿಯೋ ಟ್ಯಾಗ್ ಇರಬೇಕು. ಡಿ ಎಸ್ ಎಲ್ ಆರ್ ಸಹಿತ ಎಲ್ಲ ಮಾದರಿಯ ಕ್ಯಾಮೆರಾಗಳ ಬಳಕೆಗೂ ಅವಕಾಶ ಇದೆ. 

https://forms.gle/S9tzHnhiaHFKpmBz8

 ವಿಜೇತರನ್ನು ಎ.22 ರ ಸಂಜೆ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗುವುದು. ಛಾಯಾಚಿತ್ರ ಸ್ಪರ್ಧೆಯ ವಿಷಯ ‘ವಾತಾವರಣದ ಮೇಲೆ ಪ್ಲಾಸ್ಟಿಕ್ ಪರಿಣಾಮ’. 

ಹೆಚ್ಚಿನ ಮಾಹಿತಿಗೆ, ಪುನೀತ್ ಸಾಲಿಯಾನ್ 9967014535 ,(ಚಿತ್ರಕಲೆ), ಗೌರವ್ ಗುಪ್ತಾ 7635968591 (ಛಾಯಾಗ್ರಾಹಣ) ಡಾ. ಬಾಲಕೃಷ್ಣ ಮದ್ದೋಡಿ 9448229591, ಗೆ ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.

 
 
 
 
 
 
 
 
 
 
 

Leave a Reply