ಉಡುಪಿ: ಮದುವೆಗೂ ಮುನ್ನ ಮತ ಚಲಾಯಿಸಿ ಮಾದರಿಯಾದ ನವ ವಧು

ಉಡುಪಿ: ಈ ಬಾರಿ ಮತ ಚಲಾವಣೆಗೆ ಹಿಂದಿಗಿಂತ ಹೆಚ್ಚು ಹುರುಪು ಬಂದ ಹಾಗಿದೆ.‌ ಇಲ್ಲೊಬ್ಬಳು ಮಧುಮಗಳು ಹಸೆಮಣೆಗೆ ಕಾಲಿಡುವ ಮೊದಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ್ದಾರೆ. 

ಕಾಪು ಕ್ಷೇತ್ರದ ಪಲಿಮಾರು ಗ್ರಾಮ ಪಂಚಾಯಿತಿ  ಅವರಾಲು ಮಟ್ಟು ಎಂಬಲ್ಲಿನ ಮತಗಟ್ಟೆಯಲ್ಲಿ ನವ ವಧು ಮೆಲಿಟಾ ಬೆಳಗ್ಗಿನ ಹೊತ್ತಲ್ಲೇ ಮತ ಚಲಾಯಿಸಿ ಮಾದರಿಯಾಗಿದ್ದಾರೆ.

ಮದುವೆಗೆ ಹೋಗುವ ಮಹಿಳೆಯರೂ ಆಕರ್ಷಕ ಸೀರೆಗಳನ್ನು ಉಟ್ಟು ಬೆಳಗ್ಗೆಯೇ ಸರತಿ ಸಾಲಿನಲ್ಲಿ ನಿಂತಿದ್ದರು. ಮದುವೆ ಮಂಟಪಕ್ಕೆ ಹೋಗಿ ಹಕ್ಕು ಚಲಾಯಿಸುವುದು ಮಿಸ್ ಆಗಬಾರದೆಂದು ಮಹಿಳೆಯರ ಸಾಲು ಕೆಲವೆಡೆ ಮಾರುದ್ದ ಇತ್ತು.  

 
 
 
 
 
 
 
 
 
 
 

Leave a Reply