ಮೂಡುಬಿದಿರೆಯಲ್ಲಿ ಮರ್ಡರ್!

ಮೂಡುಬಿದಿರೆ ಗಂಟಲ್ ಕಟ್ಟೆಯಲ್ಲಿ ಸಂಬಂಧಿಕರ ನಡುವೆ ನಡೆದ ಕ್ಷುಲ್ಲಕ ವಿಚಾರಕ್ಕೆ ಮಾತಿನ ಚಕಮಕಿ ನಡೆದು ಕೊಲೆಯಲ್ಲಿ ದಾರುಣ ಅಂತ್ಯ ಕಂಡ ಘಟನೆ ನಡೆದಿದೆ. ಗಂಟಾಲ್ಕಟ್ಟೆ ನಿವಾಸಿ ಮೃತಪಟ್ಟವರು.

ಅವರ ಬಾವ ಚಿಕ್ಕಮಗಳೂರು ಮೂಲದ ಸುಹೈಬ್ ಕೊಲೆ ಆರೋಪಿ ಯಾಗಿದ್ದಾನೆ. ಇಬ್ಬರ ಮನೆಯೂ ಅಕ್ಕಪಕ್ಕದಲ್ಲಿದ್ದು ಮಕ್ಕಳ ವಿಷಯದಲ್ಲಿ ಇವರಿಬ್ಬರ ನಡುವೆ ಮಾತಿನ ಚಕಮಕಿ ನಡೆಯಿತೆನ್ನಲಾಗಿದೆ. ಕೋಪದ ಬರದಲ್ಲಿ ಅಲ್ಲೇ ಇದ್ದ ಚಾಕುವಿನಲ್ಲಿ ಸುಹೈಬ್ ತನ್ನ ಬಾವ ಎಂದು ನೋಡದೆ ಜಮಾಲ್ ನ ಹೊಟ್ಟೆಗೆ ಇರಿದಿದ್ದು ತೀವ್ರವಾಗಿಗಾಯಗೊಂಡ ಜಮಾಲ್ ಕೊನೆಯುಸಿರೆಳೆದಿದ್ದಾರೆ.

ಆರೋಪಿ ಸುಹೈಲ್ ನನ್ನು ಮೂಡುಬಿದಿರೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.

 
 
 
 
 
 
 
 
 
 
 

Leave a Reply