Janardhan Kodavoor/ Team KaravaliXpress
27.6 C
Udupi
Monday, December 5, 2022
Sathyanatha Stores Brahmavara

ರಾಮ ‌ಜನ್ಮಭೂಮಿ ಆಂದೋಲನದಲ್ಲಿ ಮುಂಚೂಣಿಯಲ್ಲಿದ್ದ ಕೀರ್ತಿಶೇಷ ಪೇಜಾವರ ಶ್ರೀಶ್ರೀ ವಿಶ್ವೇಶ ತೀರ್ಥಪಾದರಿಗೆ ನಮನ 

ಅಯೋಧ್ಯೆ ರಾಮ ಮಂದಿರ ಶಿಲಾನ್ಯಾಸದ ಸಂದರ್ಭದಲ್ಲಿ ರಾಮ ‌ಜನ್ಮಭೂಮಿ ಆಂದೋಲನದಲ್ಲಿ ಸುದೀರ್ಘ ಅವಧಿಗೆ ಮುಂಚೂಣಿ ಯಲ್ಲಿದ್ದು ಧೀಮಂತ ಮಾರ್ಗದರ್ಶನಗೈದ ಪೇಜಾವರ ಮಠಾಧೀಶರಾಗಿದ್ದ ಕೀರ್ತಿಶೇಷ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಪೀಠ‌, ಭಾವ ಚಿತ್ರಕ್ಕೆ ಉಡುಪಿ ಪೇಜಾವರ ಮಠದಲ್ಲಿ ಬುಧವಾರ ವಿಶೇಷ ಅಲಂಕಾರ ಮಾಡಿ‌ ಮಂಗಳಾರತಿ ಬೆಳಗಿ ಭಕ್ತಿ ಗೌರವ ಅರ್ಪಿಸಲಾಯಿತು .
ಈ ಸಂದರ್ಭ ಉಪಸ್ಥಿತರಿದ್ದ ಭಕ್ತರಿಗೆ ಸಿಹಿತಿಂಡಿ ವಿತರಿಸಲಾಯಿತು. ‌ಮಠದ ದಿವಾನರಾದ ಎಂ‌ ರಘುರಾ ಮ ಆಚಾರ್ಯ, ಕೊಟ್ಟಾರಿ ಗಳಾದ ಸಂತೋಷ್ ಹಾಗು  ವ್ಯವಸ್ಥಾಪಕರು ಸಿಬಂದಿವರ್ಗದವರು ಉಪಸ್ಥಿತರಿದ್ದರು. 
- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!