ವಿಧಿ ಲಿಖಿತ~ ರಮ್ಯಾರಾಕೇಶ್..

 ನೋಡಬೇಕು ನಾ ಆ ವಿಧಿಯನ್ನು..

ಕೇಳಬೇಕು ಅವನಲ್ಲಿ ನಾನು.. ಯಾಕಾಗಿ ನೀಡಿದೆ ಈ ಜನುಮವನ್ನು..?

ಸಂಬಂಧಗಳೆಂಬ ಬೇರನ್ನು ಬೆಸೆಯುವವನೂ ಅವನೇ..
ದೂರ ಮಾಡಿ ಕೇಕೆ ಹಾಕಿ ನಗುವವನು ಅವನೇ..

ಹುಡುಕಿದರೂ ಸಿಗದೂ ನೆಮ್ಮದಿ ಇಲ್ಲೆಲ್ಲೂ..
ಹಣೆಯ ಮೇಲೆ ಬರಹ ಗೀಚಿ.. ಕುಳಿತಿರುವನು ಅವನೆಲ್ಲೋ..

ನಗಿಸುವನು ಅವನಿಚ್ಚೆಯಂತೆ..
ನೋಯಿಸುವನು ಮನಬಂದಂತೆ..
ಕರೆದುಕೊಳ್ಳುವನು ತನ್ನ ಬಳಿ ನಮಗೇ ಅರಿವಿಲ್ಲದಂತೆ..

ರಮ್ಯಾರಾಕೇಶ್..

 
 
 
 
 
 
 
 
 
 
 

Leave a Reply