ಉಡುಪಿ ಜಿಲ್ಲೆಯ ಕಡಲ ತೀರದ ಆಪದ್ಬಾಂಧವ ಈಶ್ವರ ಮಲ್ಪೆ.

ಮಲ್ಪೆ ಬೀಚಿಗೆ ತೆರಳುವ ಮುಖ್ಯರಸ್ತೆಯ ಎಡಭಾಗದಲ್ಲಿ, ಬೀಚಿನಿಂದ ಅನತಿ ದೂರದಲ್ಲಿ ಸಣ್ಣದೊಂದು ಮನೆ. ಆ ಮನೆಯಲ್ಲಿ 3 ವಿಕಲಚೇತನ ಮಕ್ಕಳು.. 21 ವರ್ಷ 19 ವರ್ಷದ ಗಂಡು ಮಕ್ಕಳು, 4 ವರ್ಷದ ಹೆಣ್ಣು ಮಗು ಹಾಗೂ ಸಂಕಷ್ಟಗಳಿಂದ ಹೈರಾಣಾದ ಹೆಂಡತಿಯೊಂದಿಗೆ ಕಡಲ ತೀರದ ಆಪದ್ಬಾಂಧವನೆನಿಸಿಕೊಂಡ ಈಶ್ವರ್ ಮಲ್ಪೆ ಹೋರಾಟದ ಜೀವನ ಸಾಗಿಸುತ್ತಿದ್ದಾರೆ.

ಈಜು ನನಗೆ ದೇವರು ಕೊಟ್ಟ ವರ. ಅದರಿಂದ ಸಮಾಜಕ್ಕೆ ನನ್ನಿಂದ ಆಗುವ ಸಹಾಯ ಮಾಡುವುದು ನನ್ನ ಧರ್ಮ, ಕರ್ತವ್ಯ ಎನ್ನುತ್ತಾ ನೀರಿನಲ್ಲಿ ಮುಳುಗಿದವರನ್ನು ರಕ್ಷಿಸಿ, ಬದುಕಿಸುವ, ನೀರಿನಾಳದಲ್ಲಿ ಮುಳುಗಿದ ಶವಗಳನ್ನು ಎತ್ತಿ ತರುವ ಸಾಹಸಮಯ ಕಾಯಕದಲ್ಲಿ ತೊಡಗಿಸಿಕೊಂಡು, ಬೇರೆಯವರ ಸಂತೃಪ್ತಿಯಲ್ಲಿ ತನ್ನ ನೋವನ್ನು ಮರೆಯುವ ಬಲು ದೊಡ್ಡ ಮನಸ್ಸು ಇವರದ್ದು.

ನೀರಿಗೆ ಬಿದ್ದ 220 ಕ್ಕೂ ಹೆಚ್ಚು ಶವಗಳನ್ನು ಜೀವದ ಹಂಗು ತೊರೆದು ವಾರಸುದಾರರಿಗೆ ತಲುಪಿಸಿದವರು ಇವರು. ನೀರಿಗೆ ಬಿದ್ದ ಜೀವನ್ಮರಣದ ಹೋರಾಟದಲ್ಲಿದ್ದ ಎಷ್ಟೋ ಜೀವಗಳನ್ನು ಬದುಕಿಸಿದವರು ಇವರು. ದೋಣಿಗಳಿಗೆ ನೀರು ಹಾಕುವ ತನ್ನ ನಿತ್ಯ ಕಾಯಕದೊಂದಿಗೆ ಸುಮಾರು 20 ವರ್ಷಗಳಿಂದ 24 ಗಂಟೆ ಈ ಸಮಾಜಕ್ಕೆ ತನ್ನನ್ನು ಮೀಸಲಿಟ್ಟವರು ಇವರು.

ಸರಕಾರ ಅಥವಾ ದಾನಿಗಳಿಂದ ಗುರುತಿಸಲ್ಪಟ್ಟು ಆಕ್ಸಿಜನ್ ಕಿಟ್  , ಡೀಸಿಲ್ ಪಂಪ್, ಮತ್ತು ಆಂಬುಲೆನ್ಸ್ ನ್ನು ಕೊಡುಗೆಯಾಗಿ ಪಡೆದುಕೊಂಡಿದ್ದೇನೆ. ಇವಿಷ್ಟು ಜೀವಗಳನ್ನು ಉಳಿಸಲು ಬಹಳ ಸಹಾಯ ಆಗಿದೆ ಎನ್ನುತ್ತಾರೆ.  ಆಕ್ಸಿಜನ್ ಕಿಟ್  ಇದ್ದರೂ ಕೂಡ ಆಕ್ಸಿಜನ್ ಫಿಲ್ಲಿಂಗ್ ಮಿಶನ್ ಇಲ್ಲದಿದ್ದರಿಂದ 40 ಅಡಿಗಳಿಗಿಂತ ಹೆಚ್ಚಿನ ಆಳಕ್ಕೆಗೆ ಹೋಗುವಾಗ ಕಲ್ಲು ಕಟ್ಟಿ ಕೊಂಡು ಹೋಗಬೇಕಾಗುತ್ತದೆ ಎನ್ನುತ್ತಾರೆ.  ಆಕ್ಸಿಜನ್ ಫಿಲ್ಲಿಂಗ್ ಮಿಶನ್  ಯಾರಾದರೂ ದಾನಿಗಳು ಕೊಟ್ಟಲ್ಲಿ ನನ್ನ ಸೇವೆಗೆ ಇನ್ನಷ್ಟು ಸಹಾಯ ಆಗುತ್ತದೆ ಎಂದೆನ್ನುತ್ತಾರೆ.

ಅವರ ಸಮಾಜ ಸೇವೆಗೆ ನಮ್ಮಿಂದ ಇನ್ನಷ್ಟು ಪ್ರೋತ್ಸಾಹ ಬೇಕಾಗಿದೆ. ಮಕ್ಕಳ ಪೋಷಣೆಗೂ ಸಹಾಯ ಬೇಕಾಗಿದೆ. ಅವರ ಫೋನ್: 9663434415. 

 

 

 
 
 
 
 
 
 
 
 
 
 

Leave a Reply