ಕ್ರೀಡಾ ಸಾಧಕರಿಗೆ ಖೇಲ್ ರತ್ನ ಪ್ರಶಸ್ತಿ 

ವದೆಹಲಿ: ವಿಶ್ವ ಶ್ರೇಷ್ಠ ಕ್ರಿಕೆಟಿಗ ರೋಹಿತ್ ಶರ್ಮ, ಕುಸ್ತಿ ತಾರೆ ವಿನೇಶ್ ಪೋಗಟ್, ಪ್ಯಾರಾಲಿಂಪಿಕ್ ತಾರೆ ಮರಿಯಪ್ಪನ್ ತಂಗವೇಲು, ಟೇಬಲ್ ಟೆನಿಸ್ ಆಟಗಾರ್ತಿ ಮನಿಕಾ ಬಾತ್ರಾ ಹಾಗೂ ಮಹಿಳಾ ಹಾಕಿ ತಂಡದ ನಾಯಕಿ ರಾಣಿ ರಾಂಪಾಲ್ ದೇಶದ ಅತ್ಯುನ್ನತ ಕ್ರೀಡಾ ಪ್ರಶಸ್ತಿ ಖೇಲ್​ರತ್ನ ಪ್ರಶಸ್ತಿಗೆ ಭಾಜನ ರಾಗಿದ್ದಾರೆ. ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಒಳಗೊಂಡ 12 ಸದಸ್ಯರ ಪ್ರಶಸ್ತಿ ಆಯ್ಕೆ ಸಮಿತಿ ಮಾಡಿದ್ದ ಶಿಫಾರಸು ಪಟ್ಟಿಯನ್ನು ಶುಕ್ರವಾರ ಕ್ರೀಡಾ ಸಚಿವಾಲಯ ಅಂಗೀಕರಿಸಿದೆ. ಕ್ರಿಕೆಟಿಗ ಇಶಾಂತ್ ಶರ್ಮ, ಕರ್ನಾಟಕದ ಗಾಲ್ಪ್ ಆಟಗಾರ್ತಿ ಅದಿತಿ ಅಶೋಕ್ ಸೇರಿದಂತೆ ಅರ್ಜುನ ಪ್ರಶಸ್ತಿಗೆ ಶಿಫಾರಸು ಗೊಂಡಿದ್ದ 29 ಮಂದಿ ಪೈಕಿ 27 ಹೆಸರನ್ನು ಅಂಗೀಕರಿಸಿದೆ.

ಖೇಲ್​ರತ್ನ ಪಡೆದ 4ನೇ ಕ್ರಿಕೆಟಿಗ ರೋಹಿತ್: ಏಕದಿನ ಕ್ರಿಕೆಟ್​ನಲ್ಲಿ 3 ದ್ವಿಶತಕ ಸಿಡಿಸಿರುವ 33 ವರ್ಷದ ರೋಹಿತ್ ಶರ್ಮ ಖೇಲ್​ರತ್ನ ಗೌರವ ಪಡೆಯುತ್ತಿರುವ 4ನೇ ಕ್ರಿಕೆಟಿಗರೆನಿಸಿದ್ದಾರೆ. ಇದಕ್ಕೂ ಮೊದಲು ಸಚಿನ್ ತೆಂಡುಲ್ಕರ್ (1998), ಎಂಎಸ್ ಧೋನಿ (2007) ಮತ್ತು ವಿರಾಟ್ ಕೊಹ್ಲಿ (2018) ಈ ಗೌರವಕ್ಕೆ ಪಾತ್ರರಾಗಿದ್ದರು. ರಾಣಿ ರಾಂಪಾಲ್, ಈ ಗೌರವ ಪಡೆಯುತ್ತಿರುವ ಮೊದಲ ಹಾಕಿ ಆಟಗಾರ್ತಿಯಾಗಿದ್ದಾರೆ. 2018ರ ಕಾಮನ್ವೆಲ್ತ್ ಮತ್ತು ಏಷ್ಯನ್ ಗೇಮ್್ಸ ಸ್ವರ್ಣ ಪದಕ ವಿಜೇತೆ ವಿನೇಶ್ ಪೋಗಟ್, 2019ರ ಏಷ್ಯನ್ ಕುಸ್ತಿ ಚಾಂಪಿಯನ್​ಷಿಪ್​ನಲ್ಲಿ ಕಂಚು ಜಯಿಸಿದ್ದರು. ಮರಿಯಪ್ಪನ್ ತಂಗವೇಲು ಅಂಗವೈಕಲ್ಯದ ನಡುವೆ 2016ರ ರಿಯೋ ಒಲಿಂಪಿಕ್ಸ್ ನಲ್ಲಿ ಸ್ವರ್ಣ ಪದಕ ಜಯಿಸಿದ್ದರು. ಮನಿಕಾ ಬಾತ್ರ 2018ರ ಕಾಮನ್ವೆಲ್ತ್ ಗೇಮ್ಸ್​ನಲ್ಲಿ ಸ್ವರ್ಣ ಮತ್ತು ಏಷ್ಯನ್ ಗೇಮ್ಸ್​ನಲ್ಲಿ ಕಂಚು ಜಯಿಸಿದ ಸಾಧನೆ ಮಾಡಿದ್ದರು​. 

ಮೂವರು ಕನ್ನಡಿಗರು​: ಕರ್ನಾಟಕದ ಮೂವರು ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಹಿರಿಯ ಅಥ್ಲೆಟಿಕ್ಸ್ ಕೋಚ್ ಪುರುಷೋತ್ತಮ್ ರೈ, ಜೀವಮಾನ ಸಾಧನೆಗೆ ದ್ರೋಣಾಚಾರ್ಯ ಪ್ರಶಸ್ತಿಗೆ​ ​ಹಾಕಿ ಕೋಚ್ ಜೂಡ್ ಫೆಲಿಕ್ಸ್​,​ ಸಾಮಾನ್ಯ ವಿಭಾಗದಲ್ಲಿ ಗಾಲ್ಪ್ ಆಟಗಾರ್ತಿ ಅದಿತಿ ಅಶೋಕ್ ಅರ್ಜುನ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ವರ್ಚುವಲ್ ಪ್ರಶಸ್ತಿ ಪ್ರದಾನಕರೊನಾ ವೈರಸ್ ಭೀತಿಯಿಂದಾಗಿ ಆ.29ರಂದು ಸಮಾರಂಭ ವರ್ಚುವಲ್ ರೂಪದಲ್ಲಿ ನಡೆಯಲಿದೆ. ಹಾಕಿ ದಿಗ್ಗಜ ಮೇಜರ್ ಧ್ಯಾನ್​ಚಂದ್ ಅವರ ಜನ್ಮದಿನವಾದ ಆಗಸ್ಟ್ 29ರಂದು ರಾಷ್ಟ್ರೀಯ ಕ್ರೀಡಾ ದಿನ ಆಚರಿಸಲಾಗುತ್ತದೆ ಮತ್ತು ಅದೇ ದಿನ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಗಳನ್ನು ರಾಷ್ಟ್ರಪತಿ ಭವನದಲ್ಲಿ ಪ್ರದಾನ ಮಾಡುವುದು ವಾಡಿಕೆಯಾಗಿದೆ. ಆದರೆ ಈ ಬಾರಿ ಕೇಂದ್ರ ಸರ್ಕಾರದ ಸೂಚನೆಯಂತೆ ಸಮಾರಂಭ ಆನ್​ಲೈನ್ ಮೂಲಕ ನಡೆಯಲಿದೆ.

ದ್ರೋಣಾಚಾರ್ಯ ಪ್ರಶಸ್ತಿ (ಜೀವಮಾನ ವಿಭಾಗ)​  ಧಮೇಂದ್ರ ತಿವಾರಿ (ಆರ್ಚರಿ), ಪುರುಷೋತ್ತಮ್ ರೈ (ಅಥ್ಲೆಟಿಕ್ಸ್), ಶಿವ್ ಸಿಂಗ್ (ಬಾಕ್ಸಿಂಗ್), ರಮೇಶ್ ಪಂಥಾನಿಯಾ (ಹಾಕಿ), ಕೃಷ್ಣನ್ ಕುಮಾರ್ ಹೂಡಾ (ಕಬಡ್ಡಿ), ವಿಜಯ್ ಮುಶೀಶ್ವರ್ (ಪ್ಯಾರಾ ಪವರ್​ಲಿಫ್ಟಿಂಗ್), ನರೇಶ್ ಕುಮಾರ್ (ಟೆನಿಸ್), ಓಮ್ ಪ್ರಕಾಶ್ ದಾಹಿಯಾ (ರೆಸ್ಲಿಂಗ್).

ಸಾಮಾನ್ಯ ವಿಭಾಗ: ಜೂಡ್ ಫೆಲಿಕ್ಸ್ (ಹಾಕಿ), ಯೋಗೇಶ್.ಎಂ (ಮಲ್ಲಕಂಬ), ಜಸ್​ಪಾಲ್ ರಾಣಾ (ಶೂಟಿಂಗ್), ಕುಲದೀಪ್ ಕುಮಾರ್ (ವುಶು), ಗೌರವ್ ಖನ್ನಾ (ಪ್ಯಾರಾ ಬ್ಯಾಡ್ಮಿಂಟನ್).​ ಧ್ಯಾನ್​ಚಂದ್ ಪ್ರಶಸ್ತಿ : ಕುಲದೀಪ್ ಸಿಂಗ್ ಬುಲ್ಲಾರ್, ಜಿನ್ಸಿ ಫಿಲಿಪ್ಸ್ (ಇಬ್ಬರೂ ಅಥ್ಲೆಟಿಕ್ಸ್), ಪ್ರದೀಪ್ ಗಂಧೆ, ತೃಪ್ತಿ ಮುರ್ಗಂಡೆ (ಇಬ್ಬರೂ ಬ್ಯಾಡ್ಮಿಂಟನ್), ಎನ್.ಉಷಾ, ಲಖಾ ಸಿಂಗ್ (ಇಬ್ಬರೂ ಬಾಕ್ಸಿಂಗ್), ಸುಖ್ವಿಂದರ್ ಸಿಂಗ್ ಸಾಂಧು (ಫುಟ್​ಬಾಲ್), ಅಜಿತ್ ಸಿಂಗ್ (ಹಾಕಿ), ಮನ್​ಪ್ರೀತ್ ಸಿಂಗ್ (ಕಬಡ್ಡಿ), ರಣಜಿತ್ ಕುಮಾರ್ (ಪ್ಯಾರಾ ಅಥ್ಲೆಟಿಕ್ಸ್), ಸತ್ಯಪ್ರಕಾಶ್ ತಿವಾರಿ (ಪ್ಯಾರಾ ಬ್ಯಾಡ್ಮಿಂಟನ್), ಮಂಜೀತ್ ಸಿಂಗ್ (ರೋಯಿಂಗ್), ಸಚಿನ್ ನಾಗ್ (ಈಜು, ಮರಣೋತ್ತರ), ನಂದನ್ ಪಿ ಬಾಲ್ (ಟೆನಿಸ್), ನೇತ್ರಾಪಾಲ್ ಹೂಡಾ (ರೆಸ್ಲಿಂಗ್).

ಅರ್ಜುನ ಪ್ರಶಸ್ತಿ​: ಇಶಾಂತ್ ಶರ್ಮ (ಕ್ರಿಕೆಟ್), ಅತಾನು ದಾಸ್ (ಆರ್ಚರಿ), ದೀಪಕ್ ಹೂಡಾ (ಕಬಡ್ಡಿ), ದೀಪಿಕಾ ಠಾಕೂರ್ (ಹಾಕಿ), ದಿವಿಜ್ ಶರಣ್ (ಟೆನಿಸ್), ಅಕಾಶ್ ದೀಪ್ ಸಿಂಗ್ (ಹಾಕಿ), ಲವ್ಲಿನಾ ಬೊರ್ಗೆಹೈನ್ (ಬಾಕ್ಸಿಂಗ್), ಮನು ಭಾಕರ್ (ಶೂಟಿಂಗ್), ಸೌರಭ್ ಚೌಧರಿ (ಶೂಟಿಂಗ್), ಮನೀಷ್ ಕೌಶಿಕ್ (ಬಾಕ್ಸಿಂಗ್), ಸಂದೇಶ್ ಜಿನ್​ಗಾನ್ (ಫುಟ್​ಬಾಲ್), ದತ್ತು ಭೋಕನಲ್ (ರೋಯಿಂಗ್), ರಾಹುಲ್ ಅವಾರೆ( ಕುಸ್ತಿ), ದ್ಯುತಿ ಚಂದ್ (ಅಥ್ಲೆಟಿಕ್ಸ್), ದೀಪ್ತಿ ಶರ್ಮ (ಕ್ರಿಕೆಟ್), ಶಿವ ಕೇಶವನ್ (ವಿಂಟರ್ ಸ್ಪೋರ್ಟ್ಸ್), ಮಧುರಿಕೆ ಪಟ್ಕರ್ (ಟೇಬಲ್ ಟೆನಿಸ್), ಮನೀಷ್ ನರ್ವಾಲ್ (ಪ್ಯಾರಾ ಶೂಟರ್),ಸಂದೀಪ್ ಚೌಧರಿ (ಪ್ಯಾರಾಥ್ಲೀಟ್), ಸೂಯಾಂಶ್ ನಾರಾಯಣ್ ಜಾಧವ್ (ಪ್ಯಾರಾಸ್ವಿಮ್ಮರ್), ಚಿರಾಗ್ ಶೆಟ್ಟಿ-ಸಾತ್ವಿಕ್ ಸಾಯಿರಾಜ್ (ಬ್ಯಾಡ್ಮಿಂಟನ್), ವಿಶೇಷ್ ಭೃಗುವಂಶಿ (ಬಾಸ್ಕೆಟ್​ಬಾಲ್), ಅಜಯ್ ಸಾವಂತ್ (ಈಕ್ವೇಸ್ಟ್ರಿಯನ್), ಅದಿತಿ ಅಶೋಕ್ (ಗಾಲ್ಪ್), ಕಾಲೆ ಸಾರಿಕಾ (ಖೋ ಖೋ), ದಿವ್ಯಾ ಕಾಕ್ರನ್ (ರೆಸ್ಲಿಂಗ್).

 
 
 
 
 
 
 
 
 
 
 

Leave a Reply