ಉಡುಪಿ ಜಿಲ್ಲೆಯಲ್ಲಿ ಇಂದು 975 ಮಂದಿಗೆ ನೆಗೆಟಿವ್, 348ಪಾಸಿಟಿವ್

ಉಡುಪಿ, ಆಗಸ್ಟ್ 22, ​ ​ಕೋವಿಡ್-19 ​- ಉಡುಪಿ ಜಿಲ್ಲೆಯಲ್ಲಿ ಇಂದು 975 ಮಂದಿಗೆ ನೆಗೆಟಿವ್ ಬಂದಿದೆ ಮತ್ತು 348 ಹೊಸ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಉಡುಪಿ ತಾಲೂಕಿನಲ್ಲಿ 165, ಕುಂದಾಪುರ 132 , ಕಾರ್ಕಳ 46 ಮತ್ತು ಹೊರ ಜಿಲ್ಲೆಗೆ ಸಂಬಂಧಿಸಿದಂತೆ 5 ಪಾಸಿಟಿವ್ ಪ್ರಕರಣ ಪತ್ತೆಯಾಗಿವೆ. ಜಿಲ್ಲೆಯಲ್ಲಿ ಇಂದು 235 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.​ ಜಿಲ್ಲೆಯಲ್ಲಿಂದು ಕೋವಿಡ್-19 ಸಂಬಂಧಿಸಿದಂತೆ ಯಾವುದೇ ಸಾವು ಸಂಭವಿಸಿಲ್ಲ. ಇಲ್ಲಿಯವರೆಗೆ ಉಡುಪಿಯಲ್ಲಿ 7092 ಮಂದಿ ಗುಣಮುಖರಾಗಿ​​ದ್ದಾರೆ. ಜಿಲ್ಲೆಯಲ್ಲಿ ಒಟ್ಟು 2842 ಸಕ್ರಿಯ ಪ್ರಕರಣಗಳು ಉಳಿದಿವೆ.

Leave a Reply