ಕೊರೊನಾ ತಡೆಯಲು ಹಾವನ್ನೇ ನುಂಗಿದ ಭೂಪನ ಬಂಧನ

ಚೆನ್ನೈ : ಕೊರೊನಾ ಸೋಂಕು ತನಗೆ ಬರಬಾರದು ಎಂದು ವ್ಯಕ್ತಿಯೋರ್ವ ಹಾವನ್ನು ತಿಂದ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

ತಿರುನಲ್ವೇಲಿ ಜಿಲ್ಲೆಯ ಪೆರುಮಲ್ಪತ್ತಿ ಗ್ರಾಮದ ವಡಿವೇಲ್ ಎಂಬಾತ ಕೊರೊನಾ ಆಗಬಾರದು ಅಂತ ಹಾವು ತಿಂದಿದ್ದು, ಆತನನ್ನು ಪೊಲೀಸರು ಬಂಧಿಸಿದ್ದಾರೆ.ಆತ ತಾನು ಹಾವು ತಿನ್ನುತ್ತಿರುವ ದೃಶ್ಯವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು, ವಿಡಿಯೋ ಸಖತ್ ವೈರಲ್ ಆಗಿತ್ತು.ತಕ್ಷಣ ಎಚ್ಚೆತ್ತ ಪೊಲೀಸರು, ವಡಿವೇಲ್‌ನನ್ನು ಬಂಧಿಸಿ, 7500 ರೂಪಾಯಿ ದಂಡ ವಿಧಿಸಿದ್ದಾರೆ.

 
 
 
 
 
 
 
 
 
 
 

Leave a Reply