ಮೂಡುಬೆಟ್ಟು ಡಾ.ಬಿ ಆರ್ ಅಂಬೇಡ್ಕರ್ ಯುವಕ ಮಂಡಲದಿಂದ ಕಿಟ್ ವಿತರಣೆ

ಮೂಡುಬೆಟ್ಟು: ಕೊರೋನ ಲಾಕ್ ಡೌನ್ ಹಿನ್ನೆಲೆಯಲ್ಲಿ ಉದ್ಯೋಗ ವಂಚಿತ ಕುಟುಂಬಗಳಿಗೆ ಅಂಬೇಡ್ಕರ್ ಯುವಕ ಮಂಡಲ ಮತ್ತು ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ, ನಗರ ಶಾಖೆಯ ವತಿಯಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸುಮಾರು ಅರವತ್ತು ಕುಟುಂಬಗಳಿಗೆ 48 ಸಾವಿರ ಮೊತ್ತದ ಆಹಾರದ ಕಿಟ್ ಗಳನ್ನು ಗುರುವಾರ ಅಂಬೇಡ್ಕರ್ ಸಮುದಾಯ ಭವನದಲ್ಲಿ ವಿತರಿಸಲಾಯಿತು.

ಸ್ಥಳೀಯ ಮುಖಂಡರು ಹಾಗೂ ದ.ಸಂ.ಸ ಜಿಲ್ಲಾ ಪ್ರಧಾನ ಸಂಚಾಲಕ ಸುಂದರ್ ಮಾಸ್ಟರ್ ಫಲಾನುಭವಿಗಳಿಗೆ ಮಾಸ್ಕ್ ವಿತರಿಸಿ ಎಲ್ಲರೂ ಕೋವಿಡ್ 19 ರ ಬಗ್ಗೆ ಜಾಗ್ರತೆಯಿಂದಿರಬೇಕು,ಲಸಿಕೆಯನ್ನು ಕಡ್ಡಾಯವಾಗಿ ಹಾಕಿಸಿಕೊಳ್ಳಬೇಕು,ಸಾಮಾಜಿಕ ಅಂತರ ಕಾಪಾಡಬೇಕು. ಅದರೊಂದಿಗೆ ಎಲ್ಲರೂ ತಮ್ಮ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಕಿಟ್ ವಿತರಿಸಿ ತಿಳಿಸಿದರು.

ಯುವಕ ಮಂಡಲದ ಅಧ್ಯಕ್ಷ ಸುರೇಶ್ ಕೋಟ್ಯಾನ್,ದ.ಸಂ.ಸ ನಗರ ಶಾಖೆಯ ಸಂಚಾಲಕ ಶಿವಾನಂದ ಮೂಡುಬೆಟ್ಟು, ಉಪಾಧ್ಯಕ್ಷ ಸುಧಾಕರ ಕೆ,ಗೌರವಾಧ್ಯಕ್ಷ ಶಂಕರ್ ದಾಸ್, ಕೋಶಾಧಿಕಾರಿ ಸುಧಾಕರ, ಕಾರ್ಯದರ್ಶಿ ನಿಶಾನ್,ಮಹಿಳಾ ಮಂಡಲದ ಅಧ್ಯಕ್ಷೆ ಜಾನಕಿ, ಗೌರವಾಧ್ಯಕ್ಷೆ ಅಕ್ಕಣಿ ಟೀಚರ್, ಸಂಘದ ಸದಸ್ಯ ಸುರೇಂದ್ರ ಕೋಟ್ಯಾನ್, ಮೋಹನ, ಹರಿಶ್ಚಂದ್ರ,ಶ್ರೀಕಾಂತ್,ಗೋಪಾಲ್ ತೊಟ್ಟಂ,ಹರೀಶ,ಸದಾನಂದ ಚೆನ್ನಂಗಡಿ, ಸತೀಶ್, ಶ್ಯಾಂ ಚೆನ್ನಂಗಡಿ, ಹರ್ಷಿತ್ ಹಾಗೂ ಹರ್ಷಿಣಿ ಮತ್ತಿತರರು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply