ವಿಶ್ವದ ಅತೀ ದೊಡ್ಡ ಕನಸಿನ ವಿಮಾನ ಉಡೀಸ್

ಉಕ್ರೇನ್ ದೇಶದ ಅನೇಕ ನಗರಗಳ ಮೇಲೆ ರಷ್ಯಾ ಸೇನೆ ತನ್ನ ದಾಳಿಯನ್ನು ಮುಂದುವರೆಸಿದ್ದು, ಕೈವ್ ಬಳಿಯ ಹಾಸ್ಟೊಮೆಲ್ ವಿಮಾನ ನಿಲ್ದಾಣದ ಮೇಲಿನ ದಾಳಿ ಸಂದರ್ಭದಲ್ಲಿ ವಿಶ್ವದ ಅತಿದೊಡ್ಡ ಸರಕು ಸಾಗಾಣಿಕೆ ವಿಮಾನ ಆಂಟೊನೊವ್ ಆನ್-225 ಮ್ರಿಯ ವನ್ನು ರಷ್ಯಾ ಪಡೆ ನಾಶಮಾಡಿದೆ. ಆನ್-225 ಮ್ರಿಯ ದಾಳಿಯಿಂದ ಸಂಪೂರ್ಣವಾಗಿ ಸುಟ್ಟು ಹೋಗಿದೆ ಎಂದು ಉಕ್ರೇನ್ ಅಧೀಕೃತವಾಗಿ ಹೇಳಿದೆ.

ಈ ವಿಷಯವನ್ನು ಉಕ್ರೇನ್‌ನ ವಿದೇಶಾಂಗ ಸಚಿವ ಡಿಮೆಟ್ರೊ ಕ್ಯುಲೆಬಾ ತಮ್ಮ ಟ್ವಿಟ್ಟರ್ ಖಾತೆಯ ಮೂಲಕ ದೃಢಪಡಿಸಿದ್ದಾರೆ. ಮ್ರಿಯ ಎಂದರೆ ಉಕ್ರೇನಿಯನ್ ಭಾಷೆಯಲ್ಲಿ ಕನಸು ಎಂದರ್ಥ. ಡಿಮೆಟ್ರೊ ತಮ್ಮ ಟ್ವಟ್ಟರ್ ಖಾತೆಯಲ್ಲಿ “ರಷ್ಯಾ ನಮ್ಮ ಮ್ರಿಯಾವನ್ನು ನಾಶ ಮಾಡಿರಬಹುದು. ಆದರೆ ಶಕ್ತಿಯುತವಾದ, ಮುಕ್ತ ಹಾಗೂ ಪ್ರಜಾಪ್ರಭುತ್ವದ ನಮ್ಮ ಕನಸನ್ನು ಅವರು ಎಂದಿಗೂ ನಾಶಮಾಡಲು ಸಾಧ್ಯವಿಲ್ಲ, ನಾವು ಗೆಲವು ಸಾಧಿಸುತ್ತೇವೆ” ಎಂದು ಹೇಳಿದ್ದಾರೆ.

ವಿಶ್ವದ ಅತಿ ದೊಡ್ಡ ಏರ್ ಕ್ರಾಫ್ಟ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಆಂಟೊನೊವ್ ಆನ್-225 ಮ್ರಿಯ, 1988, ಡಿಸೆಂಬರ್ 21 ರಂದು ತನ್ನ ಮೊದಲ ಹಾರಾಟ ನಡೆಸಿತ್ತು. ಇದು ಉಕ್ರೇನಿಯನ್ ನ ಆಂಟೊನೊವ್ ಡಿಸೈನ್ ಬ್ಯೂರೋ ವಿನ್ಯಾಸಗೊಳಿಸಿದ ಏರ್‌ಲಿಫ್ಟ್ ಕಾರ್ಗೋ ವಿಮಾನವಾಗಿದ್ದು, ಇದುವರೆಗೆ ನಿರ್ಮಿಸಲಾದ ಅತ್ಯಂತ ಭಾರವಾದ ವಿಮಾನವಾಗಿತ್ತು. ಇದರ ಗರಿಷ್ಠ ಟೇಕ್‌ಆಫ್ ತೂಕ 640 ಟನ್‌ಗಳು ಆಗಿತ್ತು. ಆದರೆ ಇದೀಗ ರಷ್ಯಾ-ಉಕ್ರೇನ್ ಯುದ್ಧದ ಪರಿಣಾಮ ಇತಿಹಾಸದ ಪುಟ ಸೇರಿದೆ.

 
 
 
 
 
 
 
 
 
 
 

Leave a Reply