ವಿಶ್ವಕಪ್‍ಗೆ ಅಗೌರವ ತೋರಿದ ಮಿಚೆಲ್ -ಭಾರೀ ಟ್ರೋಲ್

ವಿಶ್ವಕಪ್ 2023 ರಲ್ಲಿ ಆಸ್ಟ್ರೇಲಿಯಾ ಗೆಲುವಿನ ನಗೆ ಬೀರಿದ ಬೆನ್ನಲ್ಲೇ ಇದೀಗ ತಂಡದ ಆಟಗಾರ ಮಿಚೆಲ್ ಮಾರ್ಷ್ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.

ಮಿಚೆಲ್ ವಿಶ್ವಕಪ್ ಟ್ರೋಫಿ ಮೇಲೆ ಕಾಲಿಟ್ಟು ಕುಳಿತ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಟ್ರೋಫಿಗೆ ಅಗೌರವ ಸೂಚಿಸಿರುವ ಮಿಚೆಲ್ ನಡೆಯನ್ನು ಜನ ಖಂಡಿಸಿದ್ದು, ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.

ಫೋಟೋದಲ್ಲಿ ಮಿಚೆಲ್ ಅವರು ತಮ್ಮ ಎರಡೂ ಕಾಲುಗಳನ್ನು ವಿಶ್ವಕಪ್ ಟ್ರೋಫಿಯ ಮೇಲೆ ಇಟ್ಟು ಗೆದ್ದು ಬೀಗಿದ್ದೇವೆ ಎಂಬ ಸಿಂಬಲ್ ತೋರಿಸಿದ್ದಾರೆ. ಈ ಫೋಟೋವನ್ನು ಆರಂಭದಲ್ಲಿ ಆಸ್ಟ್ರೇಲಿಯಾ ನಾಯಕ ಪ್ಯಾಟ್ ಕಮ್ಮಿನ್ಸ್ ಅವರು ತಮ್ಮ ಇನ್‍ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಕಮ್ಮಿನ್ಸ್ ಫೋಟೋ ಶೇರ್ ಮಾಡುತ್ತಿದ್ದಂತೆಯೇ ಇದು ಭಾರೀ ವೈರಲ್ ಆಯಿತು. ಮಿಚೆಲ್ ವಿಶ್ವಕಪ್‍ಗೆ ಅಗೌರವ ತೋರಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿ ಟ್ರೋಲ್ ಮಾಡಲಾಗುತ್ತಿದೆ.

ಆಸ್ಟ್ರೇಲಿಯಾ ವಿಶ್ವಕಪ್ ಟ್ರೋಫಿ ಗೆದ್ದ ಕೆಲವೇ ಗಂಟೆಗಳ ನಂತರ ಈ ಚಿತ್ರವನ್ನು ಹಂಚಿಕೊಳ್ಳಲಾಗಿದೆ. ನವೆಂಬರ್ 19 ರ ಭಾನುವಾರ ಅಹಮದಾಬಾದ್‍ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾರತದ ವಿರುದ್ಧ ಆಸ್ಟ್ರೇಲಿಯಾ ಆಟವಾಡಿದೆ. ಪಂದ್ಯ ಗೆದ್ದ ಬಳಿ ಆಸ್ಟ್ರೇಲಿಯಾ ತಂಡವು ಹೋಟೆಲ್‍ನಲ್ಲಿ ಆರಾಮವಾಗಿ ಕುಳಿತುಕೊಂಡು ಮಾತನಾಡುತ್ತಿರುವುದು ಫೋಟೋದಲ್ಲಿ ಕಂಡುಬಂದಿದೆ.

ವಿಶ್ವಕಪ್ ಗೆಲುವಿನ ಹಂಬಲದಲ್ಲಿದ್ದ ಭಾರತ ಕ್ರಿಕೆಟ್ ತಂಡ ಅಂತಿಮ ಹಂತದಲ್ಲಿ ಎಡವಿದ್ದು, ಆಸ್ಟ್ರೇಲಿಯಾ ಆರು ವಿಕೆಟ್‍ಗಳ ಜಯ ಸಾಧಿಸಿತು.

 
 
 
 
 
 
 
 

Leave a Reply