ಮದ್ವೆ ಮರುದಿನವೇ ಗನ್​ ಹಿಡಿದು ದೇಶ ರಕ್ಷಣೆಗೆ ನಿಂತ ಉಕ್ರೇನ್ ಜೋಡಿ

ರಷ್ಯಾ ಮತ್ತು ಯೂಕ್ರೇನ್​ ನಡುವಿನ ಯುದ್ಧದಲ್ಲಿ ನೂರಾರು ಜನರು ಪ್ರಾಣ ಕಳೆದುಕೊಂಡಿದ್ದಾರೆ. ರಷ್ಯಾ ದಾಳಿಗೆ ಯೂಕ್ರೇನ್​ ಅಕ್ಷರಶಃ ತತ್ತರಿಸುತ್ತಿದ್ದು, ನಾಗರಿಕರಲ್ಲಿ ಆತಂಕ ಮಡುಗಟ್ಟಿದೆ. ಇಂತಹ ಭಯದ ವಾತವರಣದಲ್ಲೂ ಯೂಕ್ರೇನ್​ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಯುವ ಜೋಡಿ, ಮದ್ವೆಯಾದ ಮರುದಿನವೇ ಗನ್​ ಹಿಡಿದು ದೇಶ ರಕ್ಷಣೆಗೆ ನಿಂತಿದೆ.

ಯೂಕ್ರೇನ್​ ರಾಜಧಾನಿ ಕೀವ್‌ನಲ್ಲಿ ರಷ್ಯಾ ಪಡೆ ಗುಂಡಿನ ದಾಳಿ ನಡೆಸುತ್ತಿದ್ದರೂ ಕೀವ್‌ ಸಿಟಿ ಕೌನ್ಸಿಲ್‌ನ ಡೆಪ್ಯೂಟಿ ಆಗಿರುವ 21 ವರ್ಷದ ಅರಿವಾ, ಸಾಫ್ಟ್‌ವೇರ್‌ ಇಂಜಿನಿಯರ್ 24 ವರ್ಷದ ಫರ್ಸಿನ್‌ ಅವರು ನಿನ್ನೆ ಮದ್ವೆಯಾಗಿದ್ದರು. ಮರುದಿನವೇ ಕೈಯಲ್ಲಿ ಗನ್​ ಹಿಡಿದು ಎದುರಾಳಿಗಳ ವಿರುದ್ಧ ಹೋರಾಡಲು ಮುಂದಾಗಿ ಈ ಜೋಡಿ ನಿಂತಿದೆ.

ಅರಿವಾ ಮತ್ತು ಫರ್ಸಿನ್​ ಮದುವೆ ಎಲ್ಲವೂ ಅಂದುಕೊಂಡಂತೆ ಇದ್ದಿದ್ದರೆ ಮೇ ತಿಂಗಳಲ್ಲಿ ರೆಸ್ಟೋರೆಂಟ್​ವೊಂದರ ಟೆರೇಸ್​ ಮೇಲೆ ಅದ್ದೂರಿಯಾಗಿ ನೆರವೇರಬೇಕಿತ್ತು. ಆದರೆ, ಈಗಿನ ಪರಿಸ್ಥಿತಿಯಲ್ಲಿ ಏನಾಗುತ್ತೋ ಏನೋ ಆತಂಕಗೊಂಡ ಜೋಡಿ ಮದುವೆ ಆಗಿ ತಮ್ಮ ಬಹು ದಿನಗಳ ಮದ್ವೆ ಕನಸನ್ನು ನನಸಾಗಿಸಿಕೊಂಡಿದೆ. ಇದೀಗ ಗನ್​ ಹಿಡಿದು ಹೋರಾಟಕ್ಕೂ ನಿಂತಿದೆ. ಯೂಕ್ರೇನ್​ ರಕ್ಷಣೆಗೋಸ್ಕರ ಹೋರಾಡಲು ಮುಂದಾಗುವ ಪ್ರತಿಯೊಬ್ಬರಿಗೂ ಆಯುಧ ನೀಡುವುದಾಗಿ ಯೂಕ್ರೇನ್​ ಅಧ್ಯಕ್ಷ ಘೋಷಣೆ ಮಾಡಿದ್ದಾರೆ. ಹೀಗಾಗಿ, ಸ್ವಯಂ ಪ್ರೇರಿತರಾಗಿ ಅಲ್ಲಿನ ಜನ ದೇಶದ ರಕ್ಷಣೆಗೆ ಮುಂದಾಗಿದ್ದಾರೆ.

 
 
 
 
 
 
 
 
 
 
 

Leave a Reply