ಇಂದು ವಿಶ್ವ ಕಾಗದ ಚೀಲ ದಿನ

ಸಮುದ್ರ ಎಂಬುದು ಕಲ್ಪನೆಗೂ ಮೀರಿದ ಅದ್ಭುತ ಪರಿಸರ ವ್ಯವಸ್ಥೆ. ನಮ್ಮ ಭೂಮಿಯ ಶ್ವಾಸಕೋಶ ಎಂದು ಸಮುದ್ರವನ್ನು ಪರಿಗಣಿಸಲಾಗುತ್ತದೆ. ಆದರೆ ಮಾನವನ ನಿರಂತರ ಮಧ್ಯಸ್ಥಿಕೆಯಿಂದಾಗಿ ಅದು ಈಗ ಸಂತ್ರಸ್ಥಗೊಂಡಿದೆ.  ಇಂದು ವಿಶ್ವ ಸಾಗರ ದಿನ. ನಮ್ಮ ದೈನಂದಿನ ಬದುಕಿನಲ್ಲಿ ಸಮುದ್ರ ವಹಿಸುವಂತಹ ಪಾತ್ರದ ಬಗ್ಗೆ ಸ್ಮರಿಸಿಕೊಳ್ಳಬೇಕಾದಂತಹ ದಿನ. ಸಾಗರಗಳು ಭೂಮಿಯ ಮೇಲ್ಮೈಯ ಮುಕ್ಕಾಲು ಭಾಗವನ್ನು ಒಳಗೊಂಡಿದೆ, ಭೂಮಿಯ ನೀರಿನ ಶೇ.97% ರಷ್ಟು ಭಾಗವನ್ನು ಇದು ಹೊಂದಿದೆ ಮತ್ತು ಭೂಮಿಯ ಮೇಲೆ ವಾಸಿಸುವ ಶೇ.99 ರಷ್ಟು ಜಾಗವನ್ನು ಪ್ರತಿನಿಧಿಸುತ್ತವೆ. ಫೈಟೊಪ್ಲಾಂಕ್ಟನ್, ಹವಳದ ಬಂಡೆಗಳು ಮತ್ತು ಇತರ ಲಕ್ಷಾಂತರ ಸಮುದ್ರ ಸಸ್ಯಗಳು ಒಟ್ಟಾರೆ ಆಮ್ಲಜನಕದ 50% ರಷ್ಟನ್ನು ಒದಗಿಸುತ್ತದೆ. ಸಾಗರಗಳು ಮನುಷ್ಯರು ಉತ್ಪಾದಿಸುವ ಸುಮಾರು ಶೇ.30ರಷ್ಟು  ಕಾರ್ಬನ್ ಡೈಆಕ್ಸೈಡ್ ಹೀರಿಕೊಳ್ಳುತ್ತವೆ, ಜಾಗತಿಕ ತಾಪಮಾನ ಏರಿಕೆಯ ಪ್ರಭಾವವನ್ನು ಕುಗ್ಗಿಸುತ್ತದೆ. 2.6 ಶತಕೋಟಿ ಜನರು ತಮ್ಮ ಪ್ರಾಥಮಿಕ ಪ್ರೋಟೀನ್­ಗಾಗಿ ಸಮುದ್ರಗಳನ್ನು ಮೂಲವಾಗಿ ಅವಲಂಬಿಸಿರುತ್ತಾರೆ. ಸಾಗರ ಮೀನುಗಾರಿಕೆ ನೇರವಾಗಿ ಅಥವಾ ಪರೋಕ್ಷವಾಗಿ 200 ಮಿಲಿಯನ್ ಜನರಿಗೆ ಉದ್ಯೋಗವನ್ನು ಒದಗಿಸುತ್ತಿದೆ.

 
 
 
 
 
 
 
 
 
 
 

Leave a Reply