ಉಡುಪಿಯ ಆಡ್ಲಿನ್ ಗೆ ​ ‘ಭುವನ ಸುಂದರಿ’ ಸ್ಪರ್ಧೆಯಲ್ಲಿ 3ನೇ ರನ್ನರ್‌ಅಪ್‌ ಪ್ರಶಸ್ತಿ

ಉಡುಪಿ: ಅಮೆರಿಕದ ಫ್ಲೋರಿಡಾದಲ್ಲಿ ನಡೆದ 2021ನೇ ಸಾಲಿನ ಭುವನ ಸುಂದರಿ ಸ್ಪರ್ಧೆಯಲ್ಲಿ ಉಡುಪಿ ಉದ್ಯಾವರದ ಆಡ್ಲಿನ್ ಕ್ಯಾಸ್ಟಲಿನೋ 3ನೇ ರನ್ನರ್‌ಅಪ್‌ ಪ್ರಶಸ್ತಿ ತಮ್ಮ ಮುಡಿಗೇರಿಸಿಕೊಂಡಿದ್ದಾರೆ. 

ಫ್ಲೋರಿಡಾದಲ್ಲಿ ನಡೆದ ಮಿಸ್ ಯುನಿವರ್ಸ್ ಸ್ಪರ್ಧೆಯ ಕೊನೆ ಸುತ್ತಿನಲ್ಲಿ ಆಂಡ್ರಿಯಾ ಭುವನ ಸುಂದರಿ ಕಿರೀಟ ಜಯಿಸಿದ್ದಾರೆ.ಈ ಭುವನ ಸುಂದರಿ ಸ್ಪರ್ಧೆಯಲ್ಲಿ ವಿಶ್ವಾದ್ಯಂತ 70 ಮಂದಿ ಸ್ಪರ್ಧಿಗಳು ಭಾಗವಹಿಸಿದ್ದು, ಭಾರತವನ್ನು ಪ್ರತಿನಿಧಿಸಿದ್ದ ಕರಾವಳಿಯ ಕುವರಿ ಆಡ್ಲಿನ್ ಕ್ಯಾಸ್ಟಲಿನೋ 3ನೇ ರನ್ನರ್ ಅಪ್ ಆಗಿರುವುದು ಹೆಮ್ಮೆಯ ಸಂಗತಿ.

ಉದ್ಯಾವರದ ಕೊರಂಗ್ರಪಾಡಿ ನಿವಾಸಿ ಆಲ್ಫೋನ್ಸಸ್‌ ಕ್ಯಾಸ್ಟಲಿನೋ- ಮೀರಾ ದಂಪತಿ ಪುತ್ರಿಯಾದ ಆಡ್ಲಿನ್, ಮುಂಬಯಿನಲ್ಲಿ ನಡೆದ ಲಿವಾ ಮಿಸ್‌ ದಿವಾ ಯುನಿವರ್ಸ್‌-2020 ಸ್ಪರ್ಧೆಯಲ್ಲಿ ಪ್ರಶಸ್ತಿ ಗೆದ್ದಿದ್ದರು.ಮುಂಬಯಿನಲ್ಲಿ ಶಿಕ್ಷಣ ಪಡೆದಿರುವ ಈಕೆ ನಟನೆ ಜತೆ ಕೊರಿಯೋಗ್ರಫಿ ಮಾಡುತ್ತಿದ್ದಾರೆ.

 

 
 
 
 
 
 
 
 
 
 
 

Leave a Reply