ಉಡುಪಿ : ಮೊಬೈಲ್ನಲ್ಲಿ ಗೇಮ್ ಆಡಬೇಡ ಎಂದು ಬುದ್ದಿವಾದ ಹೇಳಿದಕ್ಕೆ 16 ವರ್ಷ ಬಾಲಕಿಯೊರ್ವಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉಡುಪಿ ಜಿಲ್ಲೆಯ ಕಾಪುವಿನಲ್ಲಿ ನಡೆದಿದೆ.
ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಮಣಿಪುರ ಕೋಟೆಯ ನಿವಾಸಿ ಜುಬೇರಾ ಹಾಗೂ ಶಬಾನು ಅವರ ಪುತ್ರಿ ಸುಹೀಬತ್ ಅಸ್ಲಮಿಯಾ ಆತ್ಮಹತ್ಯೆ ಮಾಡಿಕೊಂಡ ಯುವತಿ ಎಂದು ಗುರುತಿಸಲಾಗಿದೆ.ಆಕೆ ನಿರಂತರವಾಗಿ ಮೊಬೈಲ್ ಫೋನ್ನಲ್ಲಿ ಗೇಮ್ ಆಡುತ್ತಿದ್ದಳು. ಮೇ 15 ರ ಸಂಜೆ ತಂದೆ ತಾಯಿ ಬಾಲಕಿಗೆ ಮೊಬೈಲ್ನಲ್ಲಿ ಆಟವಾಡುವುದನ್ನು ನಿಲ್ಲಿಸುವಂತೆ ಸಲಹೆ ನೀಡಿ, ಅವಳಿಂದ ಮೊಬೈಲ್ ಕಸಿದುಕೊಂಡಿದ್ದಾರೆ.
ಸ್ವಲ್ಪ ಹೊತ್ತಲ್ಲೇ ಬಾಲಕಿ ಕಾಣದಿದ್ದಾಗ, ಮನೆಯ ಸುತ್ತ ಹುಡುಕಿದ್ದಾರೆ. ಮನೆ ಸಮೀಪದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು ಕಂಡು ಬಂದಿದೆ. ಸ್ಥಳೀಯರು ಅಗ್ನಿ ಶಾಮಕ ಸಿಬ್ಬಂದಿಯ ಸಹಕಾರದೊಂದಿಗೆ ರಕ್ಷಣೆಗೆ ಮುಂದಾದರೂ ಯಾವುದೇ ಪ್ರಯೋಜನವಾಗಿಲ್ಲ. ಕಾಪು ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.