​ಜೀರೋ ಟ್ರಾಫಿಕ್~ ಈ ರೀತಿಯ ಹುಚ್ಚಾಟಕ್ಕೆ ಅಮಾಯಕರ ಪ್ರಾಣ ಹೋದರೆ ಹೊಣೆ ಯಾರು..?

ಕಳೆದ ಎರಡು ದಿನಗಳ ಹಿಂದೆ ಪುತ್ತೂರಿನಿಂದ ಬೆಂಗಳೂರಿಗೆ ಶ್ವಾಸಕೋಶ ಬದಲಾವಣೆಗೆ ಸುಹಾನ ಎಂಬ ಯುವತಿಯನ್ನು ಜೀರೋ ಟ್ರಾಫಿಕ್ ನಲ್ಲಿ ಕರೆದುಕೊಂಡು ಹೋಗಿದ್ದು ಮಾನವೀಯ ಕೆಲಸ.  ​
ಆದರೆ ಯುವತಿಯನ್ನು ಕರೆದುಕೊಂಡು ಹೋಗುತ್ತಿದ್ದ ಆಂಬುಲೆನ್ಸ್ ಮುಂದೆ  ಹತ್ತಾರು ಖಾಸಗಿ ವಾಹನಗಳ ಅವಶ್ಯಕತೆ ಇತ್ತೇ….?  ಖಾಸಗಿ ವಾಹನದಲ್ಲಿ ಕುಳಿತವರು ಯಾವ್ ರೀತಿ ಹುಚ್ಚಾಟ ಮೆರೆಯುತ್ತಿದ್ದರು ಎಂಬುವುದಕ್ಕೆ ಈ ಕೆಳಗಿನ ವಿಡಿಯೋನೇ  ಸಾಕ್ಷಿ.
 ಎಲ್ಲಾ ಕಡೆ ಪೊಲೀಸರು ಜೀರೋ ಟ್ರಾಫಿಕ್ ವ್ಯವಸ್ಥೆ ಕೂಡ  ಮಾಡಿದ್ದರು  ಖಾಸಗಿ ಕಾರಿನಲ್ಲಿ ಕುಳಿತವರು ಜನರ ಮುಂದೆ ತಾವೇನು ಸಾಹಸ (ಸ್ಟಂಟ್) ಮಾಡುತ್ತಿದ್ದೇವೆ ಎಂದು ತೋರಿಸಿ ಕೊಳ್ಳುತ್ತಿರುವುದು ಕಾಣುತ್ತಿದೆ. ಇನ್ನುಮುಂದಾದರೂ  ಜೀರೋ ಟ್ರಾಫಿಕ್ ವ್ಯವಸ್ಥೆ ಇದ್ದಾಗ ಖಾಸಗಿ ವಾಹನಗಳಿಗೆ ಪ್ರವೇಶ ನೀಡಬಾರದಾಗಿ ಸಾರ್ವಜನಿಕರ ಅಭಿಪ್ರಾಯ.
 
 
 
 
 
 
 
 
 
 
 

Leave a Reply