ವ್ಯವಹಾರ ನಿರ್ವಹಣೆಯ ಮುಂದುವರಿಕೆ ಯೋಜನೆ – ಉಡುಪಿ ಪೂರ್ಣಪ್ರಜ್ಞ ಕಾಲೇಜಿನಲ್ಲಿ ಆನ್ಲೈನ್ ಉಪನ್ಯಾಸ

ಉಡುಪಿ: ಉಡುಪಿಯ ಪೂರ್ಣಪ್ರಜ್ಞ ಕಾಲೇಜನ ಆಂತರಿಕ ಗುಣಮಟ್ಟ ಖಾತರಿ ಘಟಕ, ವಾಣಿಜ್ಯ ಹಾಗೂ ನಿರ್ವಹಣ ಸಂಘ ಮತ್ತು ಉದ್ಯೊಗಮಾರ್ಗದರ್ಶನ ವಿಭಾಗ ಇವುಗಳ ಸಂಯುಕ್ತಾಶ್ರಯದಲ್ಲಿ “ವ್ಯವಹಾರ ನಿರ್ವಹಣೆ ಮುಂದುವರಿಕೆ ಯೋಜನೆ” ಎಂಬ ವಿಷಯದ ಕುರಿತಾಗಿ ಆನ್ ಲೈನ್ ಉಪನ್ಯಾಸ ಕಾರ್ಯಕ್ರಮ ಇತ್ತಿಚಿಗೆ ನಡೆಯಿತು.ಕಾಗ್ನಿಸೆಂಟ್ ಟೆಕ್ನಾಲಿಜಿ ಸೊಲ್ಯುಷನ್ಸ್ ಇದರ ವ್ಯವಹಾರ ನಿರ್ವಹಣೆಯ ಮುಂದುವರಿಕೆ ವಿಭಾಗ ಇದರ ಅಂತಾರ್ ರಾಷ್ಟ್ರೀಯ ನಿರ್ದೇಶಕ ವೆಂಕಟೇಶ್ ಪಿ ಎಸ್ ರವರು ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡುತ್ತಾ, ಆಧುನಿಕ ತಂತ್ರಜ್ಞಾನ ತ್ವರಿತಗತಿಯಲ್ಲಿ ಸಾಗತ್ತಿರುವುದರಿಂದ ವ್ಯವಹಾರ ನಿರ್ವಹಣೆ, ಮಾಹಿತಿ ತಂತ್ರಜ್ಞಾನ ವ್ಯವಸ್ಥೆಯಲ್ಲಿ ಮುಂದುವರಿಕೆ, ಪರ್ಯಾಯ ವ್ಯವಸ್ಥೆಗಳು ಹಾಗೂ ಮಾಹಿತಿ ರಕ್ಷಣೆ ಮುಂತಾದ ವಿಷಯಗಳ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವುದರ ಅಗತ್ಯತೆಯನ್ನು ತಿಳಿಸಿದರು.

ಅದೇ ರೀತಿಯಾಗಿ ನೈಸರ್ಗಿಕ ಹಾಗೂ ಮಾನವನಿರ್ಮಿತ ಪ್ರಕೋಪಗಳು, ಇದರ ಮುನ್ನೆಚ್ಚರಿಕೆ ಕ್ರಮಗಳು ಹಾಗೆಯೇ ಅವುಗಳ ನಿರ್ವಹಣೆ ಕುರಿತಾಗಿ ವಿವರಿಸಿದರು. ಈ ಎಲ್ಲಾ ವಿಷಯಗಳಿಗೆ ಸಂಬಂಧಿಸಿದ ಉದ್ಯೋಗಾವಕಾಶಗಳ ಬಗ್ಗೆಯೂ ಮಾಹಿತಿ ನೀಡಿದರು.

ಕಾಲೇಜಿನ ಪ್ರಾಂಶುಪಾಲ ಡಾ. ರಾಘವೇಂದ್ರ.ಎ ಇವರು ಕಾರ್ಯಕ್ರಮದ ಕುರಿತು ಸಮಯೋಚಿತವಾಗಿ ಮಾತಾಡಿದರು. ವಾಣಿಜ್ಯವಿಭಾಗದ ಮುಖ್ಯಸ್ಥ ಶಿವಕುಮಾರ್, ಕಾರ್ಯಕ್ರಮದ ಸಂಯೋಜಕ ಡಾ.ಆನಂದ ಆಚಾರ್ಯ, ಜಯಲಕ್ಷ್ಮೀ, ಮೀನಾಕ್ಷೀ ಆಚಾರ್ಯ ಹಾಗೂ ವಾಣಿಜ್ಯ ವಿಭಾಗದ ಉಪನ್ಯಾಸಕರು ಉಪಸ್ಥಿತರಿದ್ದರು .ಈ ಕಾರ್ಯಕ್ರಮದಲ್ಲಿ ಸುಮಾರು 175ವಿದ್ಯಾರ್ಥಿಗಳು ಭಾಗವಹಿಸಿದರು.

ವಾಣಿಜ್ಯ ವಿಭಾಗ ಉಪನ್ಯಾಸಕಿ ವಾಗ್ದೇವೀ ಮಧ್ಯಸ್ಥ ಇವರು ನಿರ್ವಹಿಸಿದ ಕಾರ್ಯಕ್ರಮದಲ್ಲಿ ಉಪನ್ಯಾಸಕ ಚಕ್ರಪಾಣಿ ಅಡಿಗ ಸ್ವಾಗತಿಸಿದರು. ಉಪನ್ಯಾಸಕಿ ಅನುಪಮಾ ನಾಯಕ್ ವಂದಿಸಿದರು.

 
 
 
 
 
 
 
 
 
 
 

Leave a Reply