ಸಾರಿಗೆ ಕಚೇರಿಯಲ್ಲಿ ಸಕಾಲ ಸಪ್ತಾಹ

ಉಡುಪಿ: ಉಡುಪಿ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಸಾರ್ವಜನಿಕರ ಸಮ್ಮುಖದಲ್ಲಿ ಅಧೀಕ್ಷಕರು, ಕಾರ್ಯನಿರ್ವಾಹಕರುಗಳೊಂದಿಗೆ ಸಾರಿಗೆ ಸಕಾಲ ಸಪ್ತಾಹವನ್ನು ಆಚರಿಸಲಾಯಿತು.
ಸಾರಿಗೆ ಇಲಾಖೆಯ ಸೇವೆಗಳಾದ ಕಲಿಕಾ ಲೈಸೆನ್ಸ್, ಚಾಲನಾ ಲೈಸೆನ್ಸ್, ವಾಹನಗಳ ನೋಂದಣಿ, ದ್ವಿಪ್ರತಿ ಲೈಸೆನ್ಸ್, ನೋಂದಣಿ ಪ್ರಮಾಣ ಪತ್ರದ ದ್ವಿಪ್ರತಿ, ಕಲಿಕಾ ಲೈಸೆನ್ಸ್ನಲ್ಲಿ ವಿಳಾಸ ಬದಲಾವಣೆ, ಚಾಲನಾ ತರಬೇತಿ ಶಾಲೆಯ ಪರವಾನಿಗೆ ನವೀಕರಣ ಸೇರಿ ಒಟ್ಟು 26 ಸೇವೆಗಳು ಸಕಾಲದಡಿ ಬರಲಿದ್ದು, ಸಾರ್ವಜನಿಕರು ಅರ್ಜಿಗಳನ್ನು ಸಕಾಲದ ಅಡಿಯಲ್ಲಿ ಸಲ್ಲಿಸಬೇಕು.
ಅರ್ಜಿ ಸಲ್ಲಿಸಲು ಸಕಾಲದಡಿಯಲ್ಲಿ ಸ್ವೀಕೃತವಾದ ಅರ್ಜಿಗಳಿಗೆ 15 ಅಂಕಿಯ ಜಿ.ಎಸ್.ಇ ಸಂಖ್ಯೆಯನ್ನು ತಪ್ಪದೆ ನೀಡಬೇಕು. ಇದರ ಜೊತೆಗೆ ಅರ್ಜಿಯ ಪ್ರತಿಯೊಂದು ಹಂತದಲ್ಲಿಯೂ ಅರ್ಜಿ ವಿಲೇವಾರಿಗೆ ಅರ್ಜಿದಾರರ ಮೊಬೈಲ್ ಸಂಖ್ಯೆಗೆ ಸಂದೇಶ ರವಾನೆಯಾಗುತ್ತದೆ. 

 ನಿಗದಿತ ಕಾಲಮಿತಿಯೊಳಗೆ ಅರ್ಜಿಗಳನ್ನು ಕಾನೂನಿನ ಪರಿಮಿತಿಯಲ್ಲಿ ಇತ್ಯರ್ಥಗೊಳಿಸಲಾಗುತ್ತದೆ. ಸಾರ್ವಜನಿಕರು ಸಕಾಲ ಯೋಜನೆಯ ಸದುಪಯೋಗ ಪಡಿಸಿಕೊಳ್ಳುವಂತೆ ಜಿಲ್ಲೆಯ ಪ್ರಭಾರ ಪ್ರಾದೇಶಿಕ ಸಾರಿಗೆ ಅಧಿಕಾರಿ ಗಂಗಾಧರ ಜೆಪಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಜಿಲ್ಲಾಧಿಕಾರಿ ಕಚೇರಿಯ ಸಕಾಲ ನಿರ್ವಾಹಕಿ ನೇಹಾ, ಸಕಾಲ ಘಟಕದ ಉಸ್ತುವಾರಿ ರಂಗಸ್ವಾಮಿ, ಸಾರಿಗೆ ಕಚೇರಿಯ ಅದೀಕ್ಷಕ ಆಸ್ಕರ್ ಸಂತೋಷ್ ​ಉಪಸ್ಥಿತರಿದ್ದರು.  ​

ಸಾರ್ವಜನಿಕರಿಗೆ ಮಾಹಿತಿ.. ಎಲ್ಲಾ ವಾಹನ ಮಾಲೀಕರಿಗೆ, ಭಾರೀ ಸರಕು ವಾಹನ, ಮಜಲು ವಾಹನ, ಹಾಗು ಇನ್ನಿತರ ವಾಹನಗಳು ತೆರಿಗೆ / ವಿಮಾ ಪತ್ರ / ಅರ್ಹತಾ ಪತ್ರ / ವಾಯು ಮಾಲಿನ್ಯ ಪ್ರಮಾಣ ಪತ್ರಗಳನ್ನು ಆಗಿಂದಾಗ್ಗೆ ನವೀಕರಿಸುತ್ತಾ ಎಲ್ಲಾ ಮೂಲ ದಾಖಲೆಗಳ ಪ್ರತಿಗಳನ್ನು ವಾಹನದಲ್ಲಿ ಇರಿಸಿಕೊಂಡು ವಿಶೇಷ ತಪಾಸಣಾ ಕಾರ್ಯಾಚರಣೆಯ ಸಂದರ್ಭದಲ್ಲಿ ಹಾಜರು ಪಡಿಸಿ ಅನಾವಶ್ಯಕ ಮುಟ್ಟುಗೋಲು ಹಾಗು ದಂಡವನ್ನು ತಪ್ಪಿಸಿ ಕೊಳ್ಳಬೇಕಾಗಿ ಈ ಮೂಲಕ ಪ್ರಾದೇಶಿಕ ಸಾರಿಗೆ ಅಧಿಕಾರಿಯವರು ಸಾರ್ವಜನಿಕ ಮಾಹಿತಿಗಾಗಿ ತಿಳಿಸ ಬಯಸುತ್ತಾರೆ.

 

 
 
 
 
 
 
 
 
 
 
 

Leave a Reply