5 ಲಕ್ಷ ರೂ. ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ತಹಶೀಲ್ದಾರ್ ವರ್ಷಾ ಒಡೆಯರ್ 

ಬೆಂಗಳೂರು: ವಿಶೇಷ ತಹಶೀಲ್ದಾರ್ ಅಧಿಕಾರಿ ಆಗಿ ಕಾರ್ಯ ನಿರ್ವಹಣೆ ಮಾಡುತ್ತಿದ್ದ ವರ್ಷಾ ಒಡೆಯರ್ 5 ಲಕ್ಷದ ಜೊತೆ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.  ಉತ್ತರ ತಾಲೂಕಿನ ಸ್ಪೆಷಲ್ ತಹಶಿಲ್ದಾರ್ ವರ್ಷಾ ಒಡೆಯರ್, ಖಾತಾ ಮಾಡುವ ಸಲುವಾಗಿ ಐದು ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದು, ಹಣ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ವರ್ಷಾ ಒಡೆಯರ್ ಬಲೆಗೆ ಬಿದ್ದಿದ್ದಾರೆ.

ಖಾತೆ ಮಾಡಿಕೊಡಲು ಬ್ರೋಕರ್ ಮೂಲಕ 5 ಲಕ್ಷ ಹಣಕ್ಕೆ ಇಟ್ಟಿದ್ದರು. ಹೀಗಾಗಿ ಲೋಕಾಯುಕ್ತ ಅಧಿಕಾರಿಗಳು ಕಚೇರಿ ಮೇಲೆ ರೇಡ್ ಮಾಡಿ ಸದ್ಯ ಬ್ರೋಕರ್ ಹಾಗೂ ತಹಶೀಲ್ದಾರ್ ವಶಕ್ಕೆ ಪಡೆದಿದ್ದಾರೆ. ಲೋಕಾಯುಕ್ತ ಕಚೇರಿಗೆ ಇಬ್ಬರನ್ನು ಕರೆದೊಯ್ದು ವಿಚಾರಣೆ ನಡೆಸಲಾಗುತ್ತಿದೆ.

 
 
 
 
 
 
 
 
 

Leave a Reply