ಮಂಗಳೂರು ರಿಕ್ಷಾದಲ್ಲಿ ಸಂಭವಿಸಿದ ಸ್ಫೋಟಕ್ಕೆ ಸ್ಫೋಟಕ ತಿರುವು!

ಮಂಗಳೂರು ಹೊರವಲಯದಲ್ಲಿ ರಿಕ್ಷಾದಲ್ಲಿ ಸಂಭವಿಸಿದ ಕುಕ್ಕರ್ ಸ್ಫೋಟ ಇದೀಗ ಸ್ಫೋಟಕ ತಿರುವು ಪಡೆದುಕೊಂಡಿದೆ. ಇದು ಆಕಸ್ಮಿಕ ಘಟನೆಯಲ್ಲ.ಬದಲಾಗಿ ಭಯೋತ್ಪಾದನಾ ಕೃತ್ಯ ಎಂದು ಡಿಜಿಪಿ ಪುವೀಣ್ ಸೂದ್ ಹೇಳಿದ್ದಾರೆ. ಈ
ಸಂಬಂಧ ಅವರು ಟ್ವಿಟ್ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ.
ನಾಗುರಿ ಎಂಬಲ್ಲಿ ಚಲಿಸುತ್ತಿದ್ದ ರಿಕ್ಷಾದಲ್ಲಿ ಸ್ಫೋಟ ಸಂಭವಿಸಿತ್ತು.ರಿಕ್ಷಾ ಚಾಲಕ ಸೇರಿದಂತೆ ಇಬ್ಬರು ಈ ಘಟನೆಯಲ್ಲಿ
ಗಾಯಗೊಂಡಿದ್ದರು. ಕಂಕನಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿತ್ತು.
ರಿಕ್ಷಾದಲ್ಲಿ ಆಧಾರ್ ಕಾರ್ಡ್ ಲಭ್ಯವಾಗಿದ್ದು ಅದು ಉತ್ತರ ಭಾರತದ ವ್ಯಕ್ತಿಯದು ಎಂದು ಹೇಳಲಾಗುತ್ತಿದೆ. ಮೈಸೂರಿನಿಂದ
ಬಂದಿದ್ದ ವ್ಯಕ್ತಿ ಮಂಗಳೂರು ಜಂಕ್ಷನ್ ಬಳಿ ರಿಕ್ಷಾ ಹತ್ತಿದ್ದ ಎಂದು ವರದಿಯಾಗಿದೆ.
ಸ್ಫೋಟ ಪುಕರಣದ ರಹಸ್ಯ ಬಯಲಿಗೆಳೆಯಲು ನಾಲ್ಕು ತಂಡಗಳನ್ನು ರಚಿಸಲಾಗಿದೆ.

Leave a Reply