ಮುಕುಂದ ಕೃಪಾ ಶಾಲೆ- ಉಡುಪಿ ವಲಯ ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗದ ಪ್ರತಿಭಾ ಕಾರಂಜಿ

”ಸೋಲೇ ಗೆಲುವಿನ ಸೋಪಾನ, ಸೋಲನ್ನು ಧನಾತ್ಮಕವಾಗಿ ಸ್ವೀಕರಿಸಿ ಗೆಲುವಿನತ್ತ ಮುನ್ನಡೆಯಬೇಕು’ ಎಂದು ಶ್ರೀಮತಿ ಸುಮಿತ್ರ ಅ‌ ನಾಯಕ್, ಮಾನ್ಯ ಅಧ್ಯಕ್ಷರು ನಗರಸಭೆ ಉಡುಪಿ ಇವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ನುಡಿದರು.

ಉಡುಪಿ ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಚೇರಿ ಮತ್ತು ಕ್ಷೇತ್ರ ಸಂಪನ್ಮೂಲ ಕೇಂದ್ರ ಉಡುಪಿ ಹಾಗೂ ಮುಕುಂದ ಕೃಷ್ಣಾ ಅಂಗ್ಲ ಮಾಧ್ಯಮ ಶಾಲೆ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಉಡುಪಿ ವಲಯ ಮಟ್ಟದ ಪ್ರಾಥಮಿಕ ಮತ್ತು ಪ್ರೌಢ ಶಾಲಾ ವಿಭಾಗದ 2022 – 23 ನೇ ಸಾಲಿನ ಪ್ರತಿಭಾ ಕಾರಂಜಿಯ ಸಮಾರಂಭದಲ್ಲಿ ಅಧ್ಯಕ್ಷೀಯ ಸ್ಥಾನವನ್ನು ವಹಿಸಿ ಮಾತನಾಡಿದ ಅವರು ಸ್ಪರ್ಧೆಗಳಲ್ಲಿ ಭಾಗವಹಿಸುವ ಪ್ರತಿಯೊಬ್ಬ ವಿದ್ಯಾರ್ಥಿಗೂ ಶುಭ ಹಾರೈಸಿದರು. 50ನೇ ವರ್ಷವನ್ನು ಪೂರೈಸಿ, ಸುವರ್ಣ ಮಹೋತ್ಸವವನ್ನು ಆಚರಿಸುತ್ತಿರುವ ಮುಕುಂದ ಕೃಪಾ’ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಗೆ ಶುಭವನ್ನು ಕೋರಿದರು. ಸಮಾರಂಭದ ಉದ್ಘಾಟಕರಾದ ಶ್ರೀಯುತ ವರದರಾಯ ಪೈ, ಕಾರ್ಯದರ್ಶಿ ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಮಣಿಪಾಲ್, ಇವರು ಸಮಾರಂಭವು ಯಶಸ್ವಿಯಾಗಲಿ, ಪೋಷಕರಿಗೂ ವಿದ್ಯಾರ್ಥಿಗಳಿಗೂ ಶುಭವಾಗಲಿ ಎಂದು ಹಾರೈಸಿದರು.

ಸಮಾರಂಭದಲ್ಲಿ ಶ್ರೀ ಚಂದ್ರೇಗೌಡ D H. ಕ್ಷೇತ್ರ ಶಿಕ್ಷಣಾಧಿಕಾರಿ, ಶ್ರೀಮತಿ ಉಮಾ P. ಕ್ಷೇತ್ರ ಸಂಪನ್ಮೂಲ ಸಮನ್ವಯ ಅಧಿಕಾರಿ, ಶ್ರೀ ರಂಗ ಹೈ ಅಧ್ಯಕ್ಷರು ಶಾಲಾ ಅಭಿವೃದ್ಧಿ ಮಂಡಳಿ ಮುಕುಂದ ಕೃತ ಅಂಗ್ಲ ಮಾಧ್ಯಮ ಶಾಲೆ, ಶ್ರೀ ವಿ ಡಿ ಮೊಗೇರಾ, DY P.C SSK ಉಡುಪಿ, ಶ್ರೀ ವಿವೇಕಾನಂದ ಗಾಂವೃರ,ಸಹಾಯಕ ನಿರ್ದೇಶಕರು ಅಕ್ಷರ ದಾಸೋಹ ಉಡುಪಿ ತಾಲೂಕು… ಶ್ರೀ ಚಂದ್ರ ಸ್ಪಾರ್ಕ್, ಪ್ರತಿಭಾ ಕಾರಂಜಿ ಜಿಲ್ಲಾ ನೋಡಲ್ ಉಡುಪಿ, ಶಿಕ್ಷಕ ರಕ್ಷಕ ಸಂಘದ ಪದಾಧಿಕಾರಿಗಳು ಹಳೆ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು, ಶಿಕ್ಷಣ ಕ್ಷೇತ್ರದ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.

ಶ್ರೀ ಚಂದ್ರ ನ್ಯಾಕ್ ನೋಡಲ್ ಅಧಿಕಾರಿ ಪ್ರಾಸ್ತಾವಿಕ ಮಾತುಗಳಾಡಿದರು. ಶ್ರೀಮತಿ ಉಮಾಪಿ ಸಿ ಆರ್ ಪಿ ಸ್ವಾಗತಿಸಿದರು. ಮುಖ್ಯ ಶಿಕ್ಷಕಿ ಶ್ರೀಮತಿ ಸುಜಾತ ಶಾಂತರಾಮ ಶೆಟ್ಟಿ ವಂದಿಸಿದರು. ಶಿಕ್ಷಕಿ ಶ್ರೀಮತಿ ಭಾರತಿ ಉಮೇಶ್‌ ಕಾರ್ಯಕ್ರಮ ನಿರೂಪಿಸಿದರು….ಈ ಕಾರ್ಯಕ್ರಮದಲ್ಲಿ 1500 ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.

 
 
 
 
 
 
 
 
 
 
 

Leave a Reply