ಪರೀಕ್ಷೆಯ ಸಮಯದಲ್ಲಿ ಲೋಡ್ ಶೆಡ್ಡಿಂಗ್ ಮಾಡುವುದು ನ್ಯಾಯವಲ್ಲ ~ವಿಜಯ ಕೊಡವೂರು

ಎಸೆಸೆಲ್ಸಿ ಮಕ್ಕಳ ಪರೀಕ್ಷೆ ಸಮಯದಲ್ಲಿ ವಿದ್ಯುತ್ ಸ್ಥಾಗಿತವಾಗುವುದರಿಂದ ಮಕ್ಕಳಿಗೆ ಓದಲು ಅನಾನುಕೂಲವಾಗುತ್ತದೆ, ಈ ಕಾರಣದಿಂದ ಅನೇಕ ಮಕ್ಕಳು ಪೋಷಕರು ಆತಂಕದಲ್ಲಿ ಇದ್ದಾರೆ. ತಾವು ಓದಿದ ನೆನಪುಗಳನ್ನು ಮತ್ತೆ ಮತ್ತೆ ಮರುಕಳಿಸಿ ಪರೀಕ್ಷೆಗೆ ಸಿದ್ಧವಾಗುವುದು ಎಂದರೆ ಅದು ಯುದ್ಧಕ್ಕೆ ಸಿದ್ದವಾದಂತೆ . ಆ ಯುದ್ಧದ ಸಂದರ್ಭದಲ್ಲಿ ಈ ರೀತಿಯ ಲೋಡ್ ಶೆಡ್ಡಿಂಗ್ ಅಥವಾ ವಿದ್ಯುತ್ ಇಲ್ಲದಿರುವುದರಿಂದ ಮಕ್ಕಳಿಗೆ ತೊಂದರೆಯಾಗಿ ವಿದ್ಯಾರ್ಥಿಗಳ ಜೀವನದಲ್ಲಿ ತೊಂದರೆ ಆಗುತ್ತಿದೆ. ಇನ್ನು ಮುಂದಿನ ದಿನಗಳಲ್ಲಿ ಈ ರೀತಿಯ ಸಮಸ್ಯೆ ಮರುಕಳಿಸಿದರೆ ಪ್ರತಿಭಟಿಸಲು ಸಿದ್ಧರಿದ್ದೇವೆ. ಈ ಮೂಲಕ ರಾಜ್ಯ ಸರಕಾರ ವಿದ್ಯುತ್ ಉಚಿತ ನೀಡುವುದು ಸ್ವಾಗತ ಇದೆ, ಅದರ ಜೊತೆಗೆ ಲೋಡ್ ಶೆಡ್ಡಿಂಗ್ ಮಾಡುವುದು ನ್ಯಾಯವಲ್ಲ.

ಕಳೆದ ಒಂದು ವಾರದಿಂದ ಆಗಿರುವ ಸಮಸ್ಯೆಯನ್ನು ಮನವರಿಕೆ ಮಾಡಿ ವಿದ್ಯುತ್ ಕಡಿತ ಪರೀಕ್ಷಾ ಸಮಯದಲ್ಲಿ ಮಾಡಬಾರದಾಗಿ ನಗರಸಭಾ ಸದಸ್ಯರಾದ ಕೆ ವಿಜಯ ಕೊಡವೂರು ಇವರು ರಾಘವೇಂದ್ರ ಭಟ್ ಸಹಾಯಕ ಕಾರ್ಯ ನಿರ್ವಾಹಕ ಇಂಜಿನೀಯರ್ (ವಿ ) ಪಾಲನಾ ಮತ್ತು ಉಪ ವಿಭಾಗ ಉಡುಪಿ ಜಿಲ್ಲೆ ಇವರಿಗೆ ಮನವಿ ಸಲ್ಲಿಸಿದರು. 

ಈ ಸಂದರ್ಭದಲ್ಲಿ ಕೊಡವೂರಿನ ಕಾರ್ಯಕರ್ತರಾದ ಸಂದೇಶ್ ಕೊಡವೂರು ಮತ್ತು ಅಖಿಲೇಶ್ ಎ ಉಜಿರೆ ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply