ಉಡುಪಿ : ಆದರ್ಶ್ ಫ್ರೆಂಡ್ಸ್ ಅಂಬಾಗಿಲು ತಂಡಕ್ಕೆ ಅಟಲ್ ಟ್ರೋಫಿ-21

ಉಡುಪಿ : ನಗರ ಬಿಜೆಪಿ ಮತ್ತು ಯುವ ಮೋರ್ಚಾ ಆಶ್ರಯದಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಹಾಗೂ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಜನ್ಮದಿನಾಚರಣೆ ಪ್ರಯುಕ್ತ ಶಾಸಕರಾದ ಕೆ. ರಘುಪತಿ ಭಟ್ ಮತ್ತು ನಗರ ಬಿಜೆಪಿ ಅಧ್ಯಕ್ಷ ಮಹೇಶ್ ಠಾಕೂರ್ ರ ಸಂಯೋಜನೆಯಲ್ಲಿಆಯೋಜಿಸಿದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಕೂಟದ ಫೈನಲ್ ಪಂದ್ಯವನ್ನುಉಡುಪಿಯ ಆದರ್ಶ್ ಫ್ರೆಂಡ್ಸ್ ಅಂಬಾಗಿಲು ತಂಡವು ಜಯಗಳಿಸಿ 50 ಸಾವಿರ ರೂಪಾಯಿ ನಗದು ಹಾಗು ಮಿನುಗುವ ಅಟಲ್ ಟ್ರೋಫಿ 2021 ಪ್ರಶಸ್ತಿಯನ್ನು ಮುಡಿಗೇರಿಸಿದೆ. 

ಉಡುಪಿಯ ಬಾಲಾಜಿ ವೆಂಚರ್ಸ್ ಮತ್ತು ಕುತ್ಪಾಡಿಯ ಸಾಲಿಯಾನ್ ಫ್ರೆಂಡ್ಸ್ ಅನುಕ್ರಮವಾಗಿ ಎರಡನೇ ಮತ್ತು ಮೂರನೇ ಸ್ಥಾನವನ್ನು ಗಳಿಸಿವೆ. ಅಶ್ವಲ್ ರೈ, ಸರ್ಫ್ರಾಜ್, ಅನುಷ್, ಹರಿಪ್ರಸಾದ್ ಅತ್ಯುತ್ತಮ ವೈಯುಕ್ತಿಕ ಪ್ರಶಸ್ತಿಗಳನ್ನು ಪಡೆದುಕೊಂಡರು. 

22 ರ ವಯೋಮಿತಿಯ ಒಳಗಿನ ಪಂದ್ಯಕೂಟದಲ್ಲಿ ಧೂಮಾವತಿ ಫ್ರೆಂಡ್ಸ್ ಮತ್ತು ಗೋಲ್ಡನ್ ಟಚ್ ತಂಡಗಳು ಪ್ರಥಮ ಎರಡು ಸ್ಥಾನಗಳನ್ನು ಮುಡಿಗೇರಿಸಿದರೆ ಮಹಿಳೆಯರ ವಿಭಾಗದಲ್ಲಿ ಮಂಗಳೂರಿನ ಮಿಲಾಗ್ರಿಸ್ ತಂಡವು ಪ್ರಶಸ್ತಿವಿಜೇತ ತಂಡವಾಗಿ ಹೊರಹೊಮ್ಮಿತು. 

ಸಮಾರೋಪ ಸಮಾರಂಭದಲ್ಲಿ ರಾಜ್ಯ ಯುವ ಮೋರ್ಚಾ ಅಧ್ಯಕ್ಷ ಡಾ.ಸಂದೀಪ್ ಉಪಸ್ಥಿತರಿದ್ದು ಪ್ರಶಸ್ತಿಗಳನ್ನು ವಿತರಿಸಿದರು. ನಗರಬಿಜೆಪಿ ಅಧ್ಯಕ್ಷ ಮಹೇಶ್ ಠಾಕೂರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಬಿಜೆಪಿ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ನಗರ ಯುವ ಮೋರ್ಚಾ ಅಧ್ಯಕ್ಷ ರೋಷನ್ ಶೆಟ್ಟಿ, ನಗರ ಬಿಜೆಪಿ ಪ್ರಧಾನ ಕಾರ್ಯದರ್ಶಿ ದಿನೇಶ್ ಅಮೀನ್, ನಗರಸಭಾ ಸದಸ್ಯ ಸಂತೋಷ್ ಜತ್ತನ್, ಪಂದ್ಯಕೂಟದ ಸಂಚಾಲಕ ಸುವರ್ಧನ್ ನಾಯಕ್, ವಾಲಿಬಾಲ್ ಫ್ರೆಂಡ್ಸ್ ಹನುಮಂತ ನಗರ ಇದರ ಅಧ್ಯಕ್ಷ ದಿನೇಶ್ ಕುಂದರ್ ಮತ್ತಿತರರು ಹಾಜರಿದ್ದರು.

 
 
 
 
 
 
 
 
 
 
 

Leave a Reply