ಕೊರೋನಾ ವಾರಿಯರ್ಸ್ ಗಳಿಗೆ ಗೌರವ ಸೂಚಿಸುವ ತೈಲಚಿತ್ರ

ಕೊರೋನಾ ಮಹಾಮಾರಿಯ ಸಂದರ್ಭದಲ್ಲಿ ದೇಶದೆಲ್ಲೆಡೆ ಕೋವಿಡ್ -19 ಜಾಗೃತಿ ಮತ್ತು ಪರಿಹಾರ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಲಕ್ಷಾಂತರ ಕೊರೋನಾ ವಾರಿಯರ್ಸ್ ಗಳಿಗೆ ಗೌರವ ಸೂಚಿಸುವ ತೈಲ ಚಿತ್ರಣವೊಂದು ಕಪ್ಪೆಟ್ಟು ಪರಿಸರದ ಕಲಾಕಾರರ ಕುಂಚದಲ್ಲಿ ಅತ್ಯಂತ ಸುಂದರವಾಗಿ ಮೂಡಿ ಬಂದಿದೆ.

ನ್ಯೂ ಫ್ರೆಂಡ್ಸ್ ಕಪ್ಪೆಟ್ಟು ತಂಡದ ಸದಸ್ಯರಾದ ಸುಧಾಕರ್, ಹರೀಶ್, ಬಾಲಕೃಷ್ಣ, ಕೀರ್ತಿ, ದಯಾನಂದ್, ಸುನೀಲ್ ರವರು ಸ್ವಂತ ಖರ್ಚಿನಿಂದ ಎಡೆಬಿಡದ ಮಳೆಯ ನಡುವೆ ಈ ಸುಂದರ ಚಿತ್ರಣವನ್ನು ಕಪ್ಪೆಟ್ಟು ಶ್ರೀ ಬಬ್ಬು ಸ್ವಾಮಿ ದೈವಸ್ಥಾನದ ಬಳಿಯ ಗೋಡೆಯಲ್ಲಿ ಪೈಂಟ್ ಮಾಡಿದ್ದಾರೆ.

ಸಂಸ್ಥೆಯ ಸ್ಥಾಪಕ ಸದಸ್ಯ ದಿ. ಪಾಂಡು ಕಪ್ಪೆಟ್ಟು ಇವರ ಸ್ಮರಣಾರ್ಥ ಪ್ರತೀ ವರ್ಷ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಇಂತಹ ದೇಶ ಭಕ್ತಿ ಬಿಂಬಿಸುವ ಚಿತ್ರಣ ಸಂಸ್ಥೆಯ ಸದಸ್ಯರ ಕೊಡುಗೆಯಾಗಿ ಮೂಡಿ ಬರುತ್ತಿರುವುದು ಸಾರ್ವಜನಿಕ ಪ್ರಶಂಸೆಗೆ ಪಾತ್ರವಾಗಿದೆ.

 
 
 
 
 
 
 
 
 
 
 

Leave a Reply