ಪಿಎಫ್ಐ, ಎಸ್​ಡಿಪಿಐ ನಿಷೇಧಿಸಲು ಕೇಂದ್ರಕ್ಕೆ ಶಿಫಾರಸು~ಸಚಿವ ಆರ್​. ಅಶೋಕ್

ಬೆಂಗಳೂರು: ಡಿಜೆ ಹಳ್ಳಿ ಪ್ರಕರಣ ಕೋಮುಗಲಭೆಯಲ್ಲ. ಅದೊಂದು ಪೂರ್ವ ನಿಯೋಜಿತ ಕೃತ್ಯವಾಗಿದ್ದು, ಕಾಂಗ್ರೆಸ್ ಶಾಸಕರು ಮತ್ತು ಪಾಲಿಕೆ ಸದಸ್ಯರ ನಡುವಿನ ಮುಸುಕಿನ ಗುದ್ದಾಟದಿಂದ ದೊಂಬಿ ಉಂಟಾಗಿದೆ. ಇದರಲ್ಲಿ ಎಸ್​ಡಿಪಿಐ ಕೈವಾಡವೂ ಇದೆ ಎಂದು ಸಚಿವ ಆರ್​. ಅಶೋಕ್​ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನಿನ್ನೆ ಗೃಹ ಸಚಿವರ ಜತೆ ಗಲಭೆ ಸಂಬಂಧ ಸಮಾಲೋಚನೆ ಮಾಡಲಾಗಿದೆ. ಎಸ್​ಡಿಪಿಐ ನಿಷೇಧದ ಬಗ್ಗೆ ಒಂದು ಹೆಜ್ಜೆ ಮುಂದೆ ಇಡಲಾಗಿದೆ. ಗೃಹ ಇಲಾಖೆಯಿಂದ ಎಸ್​ಡಿಪಿಐ ಕೃತ್ಯಗಳ ಬಗ್ಗೆ ಮಾಹಿತಿ ಕಲೆಹಾಕಲಾಗುತ್ತಿದೆ. ಎಸ್​ಡಿಪಿಐ ಹಾಗೂ ಪಿಎಫ್​ಐ ನಿಷೇಧ ಆಗಲಿದೆ. ರಾಜ್ಯದ 17 ದುಷ್ಕೃತ್ಯಗಳಲ್ಲಿ ಎರಡು ಸಂಘಟನೆಗಳ ಕಾರ್ಯಕರ್ತರು ಇರುವ ಬಗ್ಗೆ ಮಾಹಿತಿ ಖಚಿತವಾಗಿದೆ. ಇವುಗಳ ನಿಷೇಧಕ್ಕೆ ಕೇಂದ್ರಕ್ಕೆ ಶಿಫಾರಸು ಮಾಡಲಾಗುವುದು ಎಂದರು

ಕಾಂಗ್ರೆಸ್​ನವರು ಅಮಾಯಕರೆಂದು ಹೇಳುತ್ತಾರೆ. ರಾತ್ರಿ 12ಕ್ಕೆ ಬೀದಿಗೆ ಬರುವವರು ಹೇಗೆ ಅಮಾಯಕರು ಆಗುತ್ತಾರೆ. ನಿನ್ನೆ ಜಮೀರ್ ಅಹಮದ್, ಸಿದ್ದರಾಮಯ್ಯ ಬಳಿ ಕಾಂಗ್ರೆಸ್ ಪಾಲಿಕೆ ಸದಸ್ಯ ಸಂಪತ್ ರಾಜ್ ಹೆಸರು ಪ್ರಸ್ತಾಪ ಮಾಡುತ್ತಾರೆ. ಎಸ್​ಡಿಪಿಐ ರಾಜಕೀಯ ಅಸ್ತಿತ್ವ ಕಾಪಾಡಿಕೊಳ್ಳಲು ಹಾಗೂ ಕಾಂಗ್ರೆಸ್ ಮತವನ್ನು ಸೆಳೆಯಲು ಕಾಂಗ್ರೆಸ್ ಶಾಸಕರಿರುವ ಕ್ಷೇತ್ರದಲ್ಲಿ ಗಲಭೆ ಮಾಡಿಸಲಾಗುತ್ತಿದೆ. ಈ ಹಿಂದೆ ತನ್ವೀರ್ ಸೇಠ್ ಮೇಲೆ ಈಗ ಅಖಂಡ ಶ್ರೀನಿವಾಸಮೂರ್ತಿ ಕ್ಷೇತ್ರದಲ್ಲಿ ಗಲಾಟೆ ಆಗಿದೆ. ಮನೆ ಗೊಂದು ಹಾಗು ಧರ್ಮಕ್ಕೊಂದು ಕಾನೂನಿಲ್ಲ. ಕಾನೂನು ಎಲ್ಲರಿಗೂ ಒಂದೇ. ಕಾನೂನನ್ನು ‌ಕೈಗೆ ತೆಗೆದುಕೊಂಡರೆ ಅಂತಹವರನ್ನು ಹೆಡೆಮುರಿ ಕಟ್ಟಲಾಗುವುದು. ಇದು ರಾಜಾಹುಲಿ ಸರ್ಕಾರ ಎಂದು ಹೇಳಿದರು.

ಏನು ಮಾಡಿದರು ಡಿಕೆಶಿ ಬರುತ್ತಾರೆ ಬಂಡೆ ಬರುತ್ತದೆಂದು ತಿಳಿಯಬೇಡಿ. ಶಾಂತಿಸಭೆ ಮಾಡುವ ಪ್ರಶ್ನೆಯೇ ಇಲ್ಲ. ಇದು ಕೋಮುಗಲಭೆ ಅಲ್ಲ. ಇದಕ್ಕೆ ಕಾಂಗ್ರೆಸ್ ಮುಖಂಡರು ಉತ್ತರ ನೀಡಬೇಕು. ಗಲಭೆಗೆ ಕಾರಣ ಪತ್ತೆ ಹಚ್ಚಲು ಬಿಜೆಪಿಯಿಂದ ಛಲವಾದಿ ನಾರಾಯಣ ಸ್ವಾಮಿ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದೆ. ಗಲಭೆಯಲ್ಲಿ ಕೇಳಿಬರುತ್ತಿರುವ ಎಲ್ಲರಿಗೂ ನೋಟಿಸ್ ನೀಡಲಾಗುವುದೆಂದು ತಿಳಿಸಿದರು. 

 
 
 
 
 
 
 
 
 
 
 

Leave a Reply