ಟಿ.ಎ.ಪೈ ಪ್ರೌಢಶಾಲೆ: ನಿವೃತ್ತ ಮುಖ್ಯೋಪಾಧ್ಯಾಯರಿಗೆ ಸನ್ಮಾನ

ಕುಂಜಿಬೆಟ್ಟಿನ ಟಿ ಎ ಪೈ ಇಂಗ್ಲಿಷ್ ಮೀಡಿಯಂ ಹೈಸ್ಕೂಲ್‌ನಲ್ಲಿ ಸುಮಾರು ೧೨ ವರ್ಷಗಳ ಕಾಲ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿ ಇತ್ತೀಚೆಗೆ ನಿವೃತ್ತರಾದ ಶ್ರೀ. ಮಂಜುನಾಥ ಎ ವಿ ಅವರನ್ನು ರೋಟರಿ ಕ್ಲಬ್ ಮಣಿಪಾಲ ಹಿಲ್ಸ್ ಮತ್ತು ಇಂರ‍್ಯಾಕ್ಟ್ ಕ್ಲಬ್ ವತಿಯಿಂದ ಸನ್ಮಾನಿಸಲಾಯಿತು.

ರೋಟರಿ ಅಧ್ಯಕ್ಷೆ ಶ್ರೀಮತಿ. ಸಬಿತಾ ಭಟ್, ಕಾರ್ಯದರ್ಶಿ ಶ್ರೀಮತಿ ವಂದನಾ ರಾವ್ , ರೊಟೇರಿಯನ್ ಶ್ರೀ ಎಂ ನಾರಾಯಣ ಭಟ್, ರೊಟೇರಿಯನ್ ಶ್ರೀ.ಬಾಲಕೃಷ್ಣ ಕುಮಾರ್, ರೊಟೇರಿಯನ್ ಸುಂದರ, ಶಾಲಾ ರಕ್ಷಕ ಶಿಕ್ಷಕ ಸಂಘದ ಉಪಾದ್ಯಕೆ ಶ್ರೀಮತಿ ಆಶಾ ವಿ ಶೆಟ್ಟಿ., ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ. ವಿನೋದಾ ಶೆಟ್ಟಿ, ವಿದ್ಯಾರ್ಥಿ ನಾಯಕ ಶ್ರೀ ಅಶ್ಲೇಷ್ ಆರ್ ಭಟ್, ವಿದ್ಯಾರ್ಥಿ ನಾಯಕಿ ಕುಮಾರಿ.ಪರಿಣಿಕ ಯು ವಿ, ಕುಮಾರಿ ಕೃತಿ ಉಚ್ಚಿಲ, ಕುಮಾರಿ. ದಿವ್ಯ , ಕುಮಾರಿ. ಸಂಯೋಜಕ ಶಿಕ್ಷಕ ಶ್ರೀ ಯೊಗೀಶ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

Leave a Reply