ಜಿಲ್ಲೆಯ ಗಡಿಭಾಗದಲ್ಲಿ ಹತ್ತು ಚೆಕ್ ಪೋಸ್ಟ್ ಸ್ಥಾಪಿಸಿ ಸ್ಕ್ರೀನಿಂಗ್ – ಉಡುಪಿ ಎಸ್ಪಿ ವಿಷ್ಣುವರ್ಧನ್

ಉಡುಪಿ: ಜಿಲ್ಲೆಯಾದ್ಯಂತ ಕೋವಿಡ್ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಗಡಿಭಾಗದಲ್ಲಿ ಹತ್ತು ಚೆಕ್ ಪೋಸ್ಟ್ ಗಳನ್ನು ಸ್ಥಾಪಿಸಲಾಗಿದೆ. ಹೊರ ಜಿಲ್ಲೆ ಮತ್ತು ಹೊರ ರಾಜ್ಯಗಳಿಂದ ಬರುವವರನ್ನು ಸ್ಕ್ರೀನಿಂಗ್ ಮಾಡಲಾಗುತ್ತಿದೆ ಎಂದು ಉಡುಪಿ ಎಸ್ಪಿ ವಿಷ್ಣುವರ್ದನ ಹೇಳಿದ್ದಾರೆ.

10 ಚಕ್ ಪೋಸ್ಟ್ ಗಳಲ್ಲಿ ಪೊಲೀಸ್ ಇಲಾಖೆ ,ಕಂದಾಯ ಇಲಾಖೆ ಮತ್ತು ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಇದ್ದು ಹೊರರಾಜ್ಯಗಳಿಂದ ಬರುವವರನ್ನು ಸ್ಕ್ರೀನಿಂಗ್ ಮಾಡುತ್ತಾರೆ. ವ್ಯಾಕ್ಸಿನ್ ಪಡೆದಿದ್ದಾರೆಯೇ ಅಥವಾ ಕೋವಿಡ್ ಟೆಸ್ಟ್ ರಿಪೋರ್ಟ್ ಇದೆಯೇ ಎಂಬುದನ್ನು ಪರಿಶೀಲಿಸಲಾಗುತ್ತಿದೆ.

ಫ್ಲೈಯಿಂಗ್ ಸ್ಕಾಡ್ ಜಿಲ್ಲೆಯಾದ್ಯಂತ ಇಡೀ ದಿನ ಕಾರ್ಯನಿರ್ವಹಿಸುತ್ತಿದೆ. ಮಾಸ್ಕ್ ಹಾಕದವರ ವಿರುದ್ಧ ದಂಡ ಪ್ರಯೋಗ ಮುಂದುವರೆದಿದೆ ಎಂದ ಎಸ್ಪಿ ,ಈತನಕ 31000 ಮಾಸ್ಕ್ ಹಾಕದ ಪ್ರಕರಣಗಳಿಗೆ ದಂಡ ಹಾಕಿದ್ದೇವೆ. ಕಾರ್ಯಕ್ರಮಗಳು, ಸಮಾರಂಭಗಳ ಮೇಲೂ ನಿಗಾ ಇರಿಸಲಾಗಿದೆ ಎಂದರು.

 
 
 
 
 
 
 
 
 
 
 

Leave a Reply