ಸಂಕಷ್ಟಹರಣನಿಗೊಂದು ‘ಸಂಕಷ್ಟ’…

ಗಣೇಶನ ಹಬ್ಬ ಬರೋವಾಗ ಇನ್ನಿಲ್ಲದ ಶಿಸ್ತುಕ್ರಮಗಳು​.  ಪಾಪ ಒಂದೊಮ್ಮೆ ಭೂಲೋಕಕ್ಕೆ  ಹೋಗಿ ಬರುವ ಎಂದು ನಮ್ಮ ಚೌತಿ ಗಣೇಶ ಅವರು ಹೊರಟ್ರೆ ಸಾಕು​. ​ ಇಲ್ಲಿ ಶುರು ಮೈಕ್ ಹಾಕಬಾರದು, ಕಲರ್ ಗಣೇಶನ ಮೂರ್ತಿ ಇಡಬಾರದು, ಸಾರ್ವಜನಿಕ ಪೆಂಡಾಲ್ ಗಣೇಶ ಕಾರ್ಯಕ್ರಮ ಮಾಡೋರು ಹಣದ ಡಿಪಾಸಿಟ್ ಕಟ್ಟಿ ಮಾಡಬೇಕು, ದರ್ಶನಕ್ಕೆ ಸಮಯ ನಿಗದಿ, ರಾತ್ರಿ ಹತ್ತು ಗಂಟೆಯ ಮೇಲೆ ಸಾಂಸ್ಕೃತಿಕ ಕಾರ್ಯಕ್ರಮ ನಿಶಿದ್ಧ, ಗಣಪತಿ ಮೂರ್ತಿ ನಿಮ್ಮ ನಿಮ್ಮ ಟ್ಯಾಂಕ್ ನಲ್ಲೇ ಮುಳುಗಿಸಬೇಕು, ಮಣ್ಣಿನ ಗಣಪ, ಕಲರ್ ಲೆಸ್ ಗಣಪ, ಪರಿಸರ ಸ್ನೇಹಿ ಗಣಪ, ಹೀಗೆ ಅದು ಇದೂ ಎಂದು ಗಣಪ ಬಂದು ವಿಘ್ನನಿವಾರಕನಾಗ್ತಾನೆ ಎಂದರೆ, ನಾವೇ ಇನ್ನಷ್ಟು ಅವನ ಭೂಲೋಕಕ್ಕೆ ಬರೋ ಕನಸಿಗೆ ಭಗ್ನಗೊಳಿಸುವಂತೆಯಾಗಿದೆ. 

ಹೀಗೇ ಇನ್ನೂ ಮುಂದುವರಿಸುತ್ತಾ ಈ ಕೊರೋನ ಎಂಬ ಸಂಕಟ, ಸಂಕಟಹರಣ ಗಣೇಶಂಗೂ ಬಿಟ್ಟಿಲ್ಲ​. ​ ಈ ಸಲವೂ ಕೊರೋನ ದಿಂದ ಹೇಗೆ ವಿದೇಶದ​ವರು  ಸ್ವದೇಶಕ್ಕೆ, ಸ್ವದೇಶದಿಂದ ವಿದೇಶಕ್ಕೆ ಹೋಗುವಾಗ, ಬರೋವಾಗ ಲಿಮಿಟ್ ಮತ್ತು ಶಿಸ್ತುಕ್ರಮ​ ​​ಇದೆಯೋ ಹಾಗೆ ಗಣೇಶ ಬರೋದಾದ್ರೆ ಈ ಸಲ ‘ಅರಶಿಣ ಗಣಪ’ ನ ರೂಪದಲ್ಲಿ ಬರಬೇಕಂತೆ, ಈಗ ಅದರಲ್ಲೂ ‘ಪ್ಯೂರ್ ಅರಶಿಣ’ದ ಹುಡುಕಾಟದಲ್ಲಿ ಜನ ತೊಡಗಿದ್ದಾರೆ. ಕಾರಣವಿಷ್ಟೇ ಎಷ್ಟೋ ಅಂಗಡಿಗಳಲ್ಲಿ ಸಿಗೋ ಅರಶಿಣ ‘ಮೈದಾ ಮತ್ತು ಕಲರ್’ ಮಿಕ್ಸ್, ಇದರ ಬಗ್ಗೆ ಪೂಜೆಯ ಅರ್ಚಕರಿಗೆ ಕೇಳಿದ್ರೆ ತಿಳಿಯುತ್ತದೆ ಕಾರಣ ಎಸೆನ್ಸ್, ಇನ್ನಿತರ ಬಣ್ಣ ಸೇರಿಸಿ ಮಾಡಿದ ಅರಶಿಣ ಅಲರ್ಜಿಯನ್ನೂ ಕೆಲವರಿಗೆ ಉಂಟುಮಾಡಿದೆ.

ಹೀಗೆ ಪರಿಸರ ಸ್ನೇಹಿ ಗಣಪನ ಅಕೌಂಟ್ ಲಿ ಈ ಸಲ ‘ಅರಶಿಣ ಗಣಪ’ ಸೇರಿದ್ದಾನೆ​. ​ ಹಾಗೆಯೇ ಈಗ ಸಣ್ಣಸಣ್ಣ ಮಕ್ಕಳು ಸಹ ಈ ಗಣಪನ ಮೂರ್ತಿ ಮಾಡಿ ಪೂಜೆಗೆ ತಯಾರಿ ಮಾಡುತ್ತಿರೋದು ಮಾತ್ರ ನಾವು ಶಾಲೆಯ ದಿನಗಳಲ್ಲಿ ​,​ಶಾಲೆಯಲ್ಲಿ ಗಣಪತಿ ಇಡೋ ವಾಗ ಆ ವಯಸ್ಸಿನಲ್ಲಿ ಎಷ್ಟು ಉತ್ಸಾಹದಿಂದ ಇರ್ತಾ ಇದ್ವೋ ಈಗ ಶಾಲೆ ಇಲ್ಲದೆ ‘ಆನ್ಲೈನ್’ ಶಾಲೆಯಿಂದ ಮನೆಯಲ್ಲೇ ಇರೋ ಮಕ್ಕಳು ಈ ತರದ ವಿಭಿನ್ನತೆಯ ಗಣಪನ ನಿರ್ಮಾಣದಲ್ಲಿ ತೊಡಗಿದ್ದಾರೆ. ಆದರೆ ಮುಂಬಯಿಯ ‘ರಾಜ’ ಗಣೇಶನ ವಿಗ್ರಹ, ಉಡುಪಿಯ ಕಡಿಯಾಳಿ, ರಥಬೀದಿಯ ಗಣೇಶ, ಹೀಗೆ ಬೃಹದಾಕಾರದ ಗಣೇಶನ ಮೂರ್ತಿ ಇಟ್ಟು ದಶಮಾನೋತ್ಸವ, ಬೆಳ್ಳಿ ಹಬ್ಬ, ಸುವರ್ಣ ಮಹೋತ್ಸವ, ವಜ್ರ ಮಹೋತ್ಸವ ಹೀಗೆ ಮಾಡಲು ಉತ್ಸುಕರಾಗಿದ್ದ ಎಷ್ಟೋ ಸಂಘಟನೆಗಳಿಗೆ ಮಾತ್ರ ಈ ಸಲದ ಗಣೇಶ ಚತುರ್ಥಿ ಬೇಸರ ಉಂಟು ಮಾಡಿದೆ​.

 ಕಾರಣ ದರ್ಶನಕ್ಕೆ ಒಂದೊಮ್ಮೆ ಕೇವಲ ಇಪ್ಪತ್ತು ಜನರ ಪ್ರವೇಶ ಎಂದು ಪತ್ರಿಕಾ ಪ್ರಕಟಣೆಯಲ್ಲಿ ನೋಡಿದಾಗ ಆ ಕಳೆದ ಸಾಲಿನ ಜನಜಾತ್ರೆ, ಸಭೆ, ಸನ್ಮಾನ, ಸಮಾರಂಭಗಳು ಮತ್ತೆ ನೆನಪಿಸುತ್ತವೆ. ಬಾಲಗಂಗಾಧರ ತಿಲಕ್ ಆಗ ಬ್ರಿಟಿಷ್ ಸರ್ಕಾರದ ವಿರುದ್ಧ ಹೊರಾಡಲು ಜನರ ಸಂಘಟನೆಯ ನಿರ್ಮಾಣದ ಉದ್ದೇಶಕ್ಕಾಗಿ ಶುರುಮಾಡಿದ ‘ಸಾರ್ವಜನಿಕ ಗಣೇಶೋತ್ಸವ’ ಈಗ ಈ ಕೊರೋನ ಕಾರಣಕ್ಕೆ  ಅದು ಮರೆಯಾಗುತ್ತಿದೆಯಲ್ಲ ಎಂಬ ಬೇಸರ, ಇದೊಂದು ಎಲ್ಲರಿಗೂ ನಷ್ಟವೇ ಸಮಿತಿಗೆ ಹಣ ಕ್ರೋಡೀ ಕರಿಸಲು ಹಿನ್ನಡೆ, ವಿಗ್ರಹ ತಯಾರಕರಿಗೆ ಕೆಲಸವಿಲ್ಲ, ಪುರೋಹಿತರಿಗೆ ಪೂಜೆಯಿಲ್ಲ, ಪೆಂಡಾಲ್, ಲೈಟಿಂಗ್, ಮೈಕ್ ಸೆಟ್ ನವರಿಗೆ ಬಾಡಿಗೆ ಇಲ್ಲ, ಅಡುಗೆ ಭಟ್ಟರುಗಳಿಗೆ ಊಟ ತಯಾರಿಸಲು ಕರೆಯೋಲ್ಲ, ಭಕ್ತರಿಗೆ ದರ್ಶನವಿಲ್ಲ, ಸಾಧಕರಿಗೆ ಸನ್ಮಾನವಿಲ್ಲ​,.

 ಒಟ್ಟಿನಲ್ಲಿ ‘ಕೊರೋನ ಕಾಲದ ಗಣೇಶ’ ನೆಲನೆಲ್ಲಿ, ಅಶ್ವಗಂಧ, ಅಮೃತ ಬಳ್ಳಿ ಕಷಾಯಮಾಡಿ ಕುಡಿದು, ಹರ್ಬಲ್ ಮಾಸ್ಕ್ ಧರಿಸಿ ಭೂಲೋಕಕ್ಕೆ ಇಳಿಯಲಿದ್ದಾನೆ..

 
 
 
 
 
 
 
 
 
 
 

Leave a Reply