ಗೌರಿ ಗಣೇಶ ಹಬ್ಬ: ಕರೋನಾ ಮುಕ್ತಿಗೆ ನಾಂದಿಯಾಗಲಿ

ಎಲ್ಲರ ಮೆಚ್ಚಿನ ಹಬ್ಬ ಗೌರಿ ಗಣೀಶ ಹಬ್ಬ ಬರುತ್ತಿದೆ.ಪ್ರತಿ ವಷ೯ಕೂಡ ಹಬ್ಬದ ಸಡಗರ ದೇಶಾದ್ಯಂತ ಮನೆಮಾಡುತ್ತದೆ. ಆದರೆ ಈ ವಷ೯ ಕರೋನಾದ ತೊಂದರೆಯಿಂದ ಕೇವಲ ಸೀಮಿತ ಆಚರಣೆ ನಡೆಯುತ್ತದೆ. ಸಕಾ೯ರ ಈಗಾಗಲೇ ‘ಮಾಗ೯ ಸೂಚಿಯನ್ನು ಬಿಡುಗಡೆ ಮಾಡಿದೆ ಹೀಗಾಗಿ ಹಬ್ಬದ ಸಡಗರದಲ್ಲಿ ಯಾವುದೇ ರೀತಿಯ ಮಾಗ೯ ಸೂಚಿಯನ್ನು ಬಿಡದೆ ಅನುಕರಣೆ ಮಾಡಬೇಕಾ ಗಿದೆ. ಸ್ವಲ್ಪ ಮೈಮರೆದರೆ ಕರೋನಾ ದ ಸುಳಿಯಲ್ಲಿ ಸಿಲುಕಿಕೊಳ್ಳಬೇಕಾಗಬಹುದು. ಗೌರಿ ಗಣೇಶ ಹಬ್ಬದ ಹಿಂದಿನ ಆಚರಣೆ ಮತ್ತು ಸಂಪ್ರದಾಯ ನೋಡುದಾದರೆ, ಗೌರಿ ಗಣೇಶ ಹಬ್ಬದ ಹಿಂದಿನ ದಂತಕಥೆ ಗಣೇಶನ ಹುಟ್ಟಿನ ಬಗ್ಗೆ ವಿವಿಧ ಕಥೆಗಳಿದ್ದರೂ ಹೆಚ್ಚು ಜನಪ್ರಿಯವಾಗಿರುವ ಕಥೆ ಹೀಗಿದೆ: ಒಮ್ಮೆ ಕೈಲಾಸದಲ್ಲಿ ಪಾರ್ವತಿ ಒಂಟಿತನವನ್ನು ಅನುಭವಿಸುತ್ತಿದ್ದಳು. ತನ್ನ ಒಂಟಿತನವನ್ನು ಕಳೆಯಲು ಮಣ್ಣಿನಿಂದ ಚಿಕ್ಕ ಬಾಲಕನ ಪ್ರತಿಮೆ ಯೊಂದನ್ನು ಮಾಡಿ ಅದಕ್ಕೆ ಜೀವ ನೀಡಿದಳು. ಈ ಬಾಲಕನಿಗೆ ಗಣೇಶ ಎಂದು ನಾಮಕರಣ ಮಾಡಿ ತಾನು ಸ್ನಾನಕ್ಕೆ ಹೋದಾಗ ತನ್ನ ಸ್ನಾನಗೃಹದ ಬಾಗಿಲನ್ನು ಕಾವಲು ಕಾಯುವಂತೆ ಆಜ್ಞಾಪಿಸಿ ಒಳನಡೆದಳು.

ಈ ಸಮಯದಲ್ಲಿ ಕೈಲಾಸಕ್ಕೆ ಆಗಮಿಸಿದ ಶಿವ ಒಳಗಡಿಯಿಡಲು ಯತ್ನಿಸಿದಾಗ ಬಾಲಕ ಗಣೇಶ ಶಿವನನ್ನು ತಡೆಯುತ್ತಾನೆ. ತನ್ನ ಮಗನೇ ಎಂದು ಗೊತ್ತಿಲ್ಲದೆ ಕೋಪಾವಿಷ್ಠನಾದ ಶಿವ ಬಾಲಕನ ರುಂಡವನ್ನು ಸಂಹರಿಸುತ್ತಾನೆ. ಬಳಿಕ ಸ್ನಾನ ಮುಗಿಸಿ ಹೊರಬಂದ ಪಾರ್ವತಿದೇವಿ ತನ್ನ ಮಗನ ಶವವನ್ನು ಕಂಡು ಅತ್ಯಂತ ದುಃಖಿತಳಾಗುತ್ತಾಳೆ. ದುಗುಡ , ಕೋಪಾವೇಶಗಳ ಭರದಲ್ಲಿ ಗಣೇಶನ ರುಂಡ ಎಲ್ಲಿಯೋ ಕಳೆದು ಹೋಗುತ್ತದೆ. ಪಾರ್ವತಿಯನ್ನು ಶಾಂತಗೊಳಿಸಲು ಶಿವ ಬಾಲಕನಿಗೆ ಜೀವ ನೀಡುವ ವಾಗ್ದಾನ ನೀಡು ತ್ತಾನೆ. ಆದರೆ ಕಳೆದ ರುಂಡ ಸಿಗದೇ ಇರುವ ಕಾರಣ ತನ್ನ ಬೆಂಬಲಿಗರಲ್ಲಿ ಕಾಡಿನ ಕಡೆಯಿಂದ ಯಾವ ಪ್ರಾಣಿ ಮೊದಲು ಬಂದಿತೋ ಅದನ್ನೇ ಗಣೇಶನಿಗೆ ಇರಿಸುವುದಾಗಿ ತಿಳಿಸು ತ್ತಾನೆ. ಬಳಿಕ ಬಿಳಿಯ ಆನೆಯೊಂದು ಪ್ರಥಮವಾಗಿ ಪ್ರತ್ಯಕ್ಷವಾಗುತ್ತದೆ. ಅಂತೆಯೇ ಆನೆಯ ತಲೆಯನ್ನು ಬಾಲಕನ ಮುಂಡಕ್ಕೆ ಜೋಡಿಸಿ ಜೀವ ನೀಡಲಾಗುತ್ತದೆ. ಅಂತೆಯೇ ಗಣೇಶನ ಮುಂಡ ಮಾನ ವ ರಂತಿದ್ದರು ರುಂಡ ಮಾತ್ರ ಆನೆಯದ್ದಾದುದರಿಂದಲೇ ಗಜಮುಖನೆಂಬ ಹೆಸರು ಬಂದಿದೆ.

ಗೌರಿ ಹಬ್ಬದ ಸಂಪ್ರದಾಯಗಳು
ಈ ಹಬ್ಬದ ದಿನ ವಿವಾಹಿತ ಮಹಿಳೆಯರು ಬೆಳಿಗ್ಗೆಯೇ ಸ್ನಾನ ಮಾಡಿ ಹೊಸ ಮತ್ತು ಬೆಡಗಿನ ಉಡುಗೆ ಅಥವಾ ಸೀರೆಗಳನ್ನು ಉಟ್ಟು ತಯಾರಾ ಗುತ್ತಾರೆ. ತಮ್ಮ ಮನೆಯ ಚಿಕ್ಕ ಹೆಣ್ಣುಮಕ್ಕಳಿಗೂ ಹೊಸ ಹೊಸ ಬಟ್ಟೆ ತೊಡಿಸಿ ಸಿಂಗರಿಸಿ ಸಿದ್ಧಪಡಿಸುತ್ತಾರೆ. ಪ್ರಥಮ ವಿಧಿ ಯಾಗಿ ಜಲಗೌರಿ ಅಥವಾ ಅರಿಶಿನಗೌರಿಗೆ (ಅರಿಶಿನದಿಂದ ಮಾಡಿದ ಗೌರಿಯ ಮೂರ್ತಿ) ಪೂಜೆಯನ್ನು ಸಲ್ಲಿಸಲಾಗುತ್ತದೆ. ಬಳಿಕ ತಟ್ಟೆ ಯೊಂದರಲ್ಲಿ ಧಾನ್ಯಗಳನ್ನಿರಿಸಿ ಅದರ ಮೇಲೆ ಗೌರಿಯ ಪುಟ್ಟ ವಿಗ್ರಹವನ್ನಿರಿಸಲಾಗುತ್ತದೆ. ಆ ಬಳಿಕ ನಡೆಸುವ ಪೂಜೆಯನ್ನು ಅತ್ಯಂತ ಭಕ್ತಿಭಾವ, ಸ್ವಚ್ಛತೆ ಮತ್ತು ಮಂತ್ರಪಠಣಗಳಿಂದ ನಡೆಯುತ್ತದೆ. ವಿಗ್ರಹವನ್ನು ಬಾಳೆಕಂಭ ಮತ್ತು ಮಾವಿನ ತಳಿರು ತೋರಣದ ಮಂಟಪ ವೊಂದು ಸುತ್ತುವರೆದಿ ರುತ್ತದೆ. ಗೌರಿಯ ಮೂರ್ತಿಯನ್ನೂ ಸುಂದರವಾದ ಹೂವುಗಳು ಮತ್ತು ಹತ್ತಿಯ ಮಾಲೆಯಿಂದ ಅಲಂಕರಿಸಲಾಗು ತ್ತದೆ. ಈ ಸಂದರ್ಭದಲ್ಲಿ ವಿವಾಹಿತ ಮಹಿಳೆಯರು ತಮ್ಮ ಮಣಿಕಟ್ಟುಗಳಿಗೆ ಹದಿನಾರು ಗಂಟುಗಳಿರುವ ದಾರವನ್ನು ಕಟ್ಟಿಕೊಳ್ಳುತ್ತಾರೆ. ‘ಗೌರಿದಾರ’ ಎಂದು ಕರೆಯ ಲಾಗುವ ಈ ದಾರ ದೇವಿಯ ಅನುಗ್ರಹ ಪಡೆಯಲು ನೆರವಾಗುತ್ತದೆ ಎಂದು ಇವರು ನಂಬುತ್ತಾರೆ.

ಪೂಜೆಯ ಬಳಿಕ ವ್ರತವನ್ನು ಪಾಲಿಸುತ್ತಿರುವ ಮಹಿಳೆಯರು ಬಾಗಿನವನ್ನು ಅರ್ಪಿಸಲು ಬಾಗಿನದ ತಯಾರಿಗೆ ತೊಡಗುತ್ತಾರೆ. ಬಾಗಿನ ವೆಂದರೆ ಮಹಿಳೆಯ ಸೌಂದರ್ಯ ಪರಿಕರಗಳಾದ ಅರಿಶಿನ, ಕುಂಕುಮ, ಕಪ್ಪು ಬಳೆ, ಕಪ್ಪು ಮಣಿ, ಒಂದು ಬಾಚಣಿಗೆ, ಒಂದು ಚಿಕ್ಕ ಕನ್ನಡಿ, ಹಾಗು ಒಂದು ತೆಂಗಿನಕಾಯಿ, ರವಿಕೆಯ ಬಟ್ಟೆ, ವಿವಿಧ ಧಾನ್ಯಗಳು, ಅಕ್ಕಿ, ಬೇಳೆ, ಗೋಧಿ ಮತ್ತು ಬೆಲ್ಲವನ್ನು ಒಳಗೊಂಡಿರುವ ದೊಡ್ಡ ಹರಿವಾಣವಾಗಿದೆ. ವ್ರತವನ್ನು ಆಚರಿಸುವ ಓರ್ವ ಮಹಿಳೆಗೆ ಇಂತಹ ಐದು ಬಾಗಿನಗಳ ಅಗತ್ಯವಿದೆ. ಹೀಗೆ ಸಂಪ್ರದಾಯವನ್ನು ಪಾಲಿಸಿ ಅದೇ ರೀತಿ ಆಧುನಿಕ ಸ್ಪಷ೯ದೊಂದಿಗೆ ಈ ಹಬ್ಬ ವನ್ನು ಆಚರಿಸಲಾಗುತ್ತದೆ.ತಿಲಕರು ಈ ಹಬ್ಬದ ಮೂಲಕ ಜನರನ್ನು ಸ್ವಾತಂತ್ರ್ಯ ಸಂಗ್ರಾಮಕ್ಕೆ ಧುಮುಕಲು ಕರೆ ನೀಡಿದ್ದರು. ಹೀಗಾಗಿ ಇಂದು ದೇಶದ ಜನರನ್ನು ಸಂಘಟಿತರಾಗಿ ದೇಶದ ಅಭಿವೃದ್ಧಿಯತ್ತ ಕೇಂದ್ರಿಕರಿಸಲು ಇದು ಅವಶ್ಯಕವಾಗಿದೆ. ದೇಶದಲ್ಲಿ ಈ ಹಬ್ಬ ಕೇವಲ ಆಚರಣೆ ಅಲ್ಲ ಬದಲಾಗಿ ಕತ೯ವ್ಯ .ಎಂಬತೆ ನಡೆಸಲಾಗುತ್ತಿದೆ. ಕರೋನಾದ ಈ ಸಂದಿಗ್ದ ಪರಿಸ್ಥಿತಿಯಲ್ಲಿ ಸಕಾ೯ರವು ಸಾವ೯ಜನಿಕರ ಮನವಿ ಮೇರೆಗೆ ಅನುಮತಿ ನೀಡಿದರೂ ಕೂಡ ಎಲ್ಲರೂ ಜವಾಬ್ದಾರಿಯಿಂದ ವತಿ೯ಸಬೇಕಾದ ಅಗತ್ಯವಿದೆ. ನಮ್ಮ ಆರೋಗ್ಯ ನಮ್ಮ ಕೈಯಲ್ಲಿದೆ ಅದು ಸಕಾ೯ರ ದ ಕೆಲಸವಲ್ಲ. ಕರೋನಾದ ವಿರುದ್ಧ ಹೋರಾಟ ಮಾಡುತ್ತಿರುವ ಎಲ್ಲಾ ವಾರಿಯರ್ಸ್ ಗೆ ಅಭಿನಂದನೆ ಸಲ್ಲಿಸಿ ಈ ಹಬ್ಬ ಅವರಿಗೆ ಮತ್ತಷ್ಟು ಶಕ್ತಿ ನೀಡಲಿ ಕರೋನಾ ವಿಶ್ವದಿಂದ ದೂರ ಸಾಗಲಿ.

ರಾಘವೇಂದ್ರ, ಪ್ರಭು,ಕವಾ೯ಲು
ಯುವ ಲೇಖಕರು

Leave a Reply