ಚಿಕ್ಕಮಗಳೂರಿನಲ್ಲಿ ನಡೆದ ದತ್ತಪೀಠ ಶೋಭಾಯಾತ್ರೆಯಲ್ಲಿ ಉಡುಪಿಯಿಂದ ಸಾವಿರಾರು ಕಾರ್ಯಕರ್ತರು ಭಾಗಿ

ಶ್ರೀರಾಮಸೇನೆ ಕರ್ನಾಟಕ ವತಿಯಿಂದ 18ನೇ ವರ್ಷದ ದತ್ತಾಪೀಠ ಮುಕ್ತಿಗಾಗಿ ಚಿಕ್ಕಮಗಳೂರು ನಗರದಲ್ಲಿ ದತ್ತಾಮಲಾ ಅಭಿಯಾನ ಹಾಗೂ ಶೋಭಯಾತ್ರೆ, ಮತ್ತು ದತ್ತಾಪೀಠದಲ್ಲಿ ಶ್ರೀ ದತ್ತವ್ರತ ಶ್ರೀ ದತ್ತ ಹೋಮ ವು ಯಶಶ್ವಿಯಾಗಿ ನಡೆಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ರಾಮಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ರವರು ದತ್ತಾಪೀಠ ದ ಹೆಸರಿನಲ್ಲಿ ಅಧಿಕಾರ ಪಡೆದವರಿಂದ ಪೀಠಕ್ಕೆ ಮುಕ್ತಿ ಸಿಗಲಿಲ್ಲ, ಹಾಗಾಗಿ ಈ ಬಾರಿ ವಿಧಾನಸಭೆ ಪ್ರವೇಶಿಸಿ ದತ್ತಾಪೀಠಕ್ಕೆ ಮುಕ್ತಿ ಹಾಡಲು ಯಶಶ್ವಿಯಾಗುತ್ತೆವೆ ಎಂದರು. ಹತ್ತು ಸಾವಿರಕ್ಕಿಂತಲೂ ಹೆಚ್ಚು ಕಾರ್ಯಕರ್ತರು ಭಾಗವಹಿಸಿದ ಈ ಕಾರ್ಯಕ್ರಮದಲ್ಲಿ, ಉಡುಪಿಯಿಂದ 1000ಕ್ಕಿಂತಲೂ ಹೆಚ್ಚು ಕಾರ್ಯಕರ್ತರು ಭಾಗಿಯಾದರು.

 
 
 
 
 
 
 

Leave a Reply