Janardhan Kodavoor/ Team KaravaliXpress
23.6 C
Udupi
Friday, December 2, 2022
Sathyanatha Stores Brahmavara

ಇಂಟರ್ನ್ಯಾಷನಲ್ ಆರ್ಟ್ ಐಕಾನ್ ಟಾಪ್ 100 ರಲ್ಲಿ ಉಡುಪಿಯ ವಿಘ್ನೇಶ್ !

ಉಡುಪಿಯ ಯುವ ಕಲಾವಿದ ವಿಘ್ನೇಶ್. ಆರ್. ಜಿ ಸದ್ದಿಲ್ಲದೆ ಸಾಧನೆಯೊಂದನ್ನು ಮಾಡಿದ್ದಾರೆ.ಚಿತ್ರಕಲೆಯಲ್ಲಿ ಎಲೆಮರೆಯ ಕಾಯಿಯಂತಿದ್ದ ಇವರು 2022 ರಲ್ಲಿ ನಡೆದ ಇಂಟರ್ನ್ಯಾಷನಲ್ ಆರ್ಟ್ ಐಕಾನ್ ಸ್ಪರ್ಧೆಯ ಟಾಪ್ 100 ವಿಜೇತ ಸ್ಪರ್ಧಿಗಳಲ್ಲಿ ಆಯ್ಕೆಯಾಗಿ ಉಡುಪಿಯ ಕೀರ್ತಿ ಹೆಚ್ಚಿಸಿದ್ದಾರೆ.

ಉಡುಪಿಯ ಲಕ್ಷ್ಮೀನಗರದ ಪೂರ್ಣಿಮಾ ಮತ್ತು ರಾಘವೇಂದ್ರ ದಂಪತಿ ಪುತ್ರ ,ವಿಘ್ನೇಶ್ ಆರ್ ಜಿ.ಉಡುಪಿಯ ಪೂರ್ಣಪ್ರಜ್ಞಾ ಕಾಲೇಜಿನ ವಾಣಿಜ್ಯ ವಿಭಾಗದಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದಾರೆ. ಬಾಲ್ಯದಲ್ಲೇ ಕಲೆಯ ಬಗ್ಗೆ ಆಸಕ್ತಿ ಬೆಳೆಸಿಕೊಂಡ ಇವರು ಗುರುವಿಲ್ಲದ ಕಲಾವಿದ. ಹೌದು ,ವಿಘ್ನೇಶ್ ಕೇವಲ ಒಂದು ವರ್ಷ ಚಿತ್ರಕಲೆ ತರಬೇತಿ ಪಡೆದದ್ದು ಬಿಟ್ಟರೆ ,ಸ್ವತಃ ಯೂಟ್ಯೂಬ್ ನೋಡಿ ಕಲಿತವರು.ಅಕ್ರಿಲಿಕ್ ,ವಾಟರ್ ಕಲರ್ ,ಚಾರ್ಕೊಲ್ ,ಗ್ರಾಫೈಟ್ ಮತ್ತು ಆವೆ ಮಣ್ಣಿನ ಮಾಧ್ಯಮಗಳಲ್ಲಿ ಹಲವು ಚಿತ್ರಗಳನ್ನು ರಚಿಸಿದ್ದಾರೆ.ರೆಯಾನ್ಶ್ ರಾಹುಲ್ ಆರ್ಟ್ ಯೂನಿವರ್ಸಿಟಿ ಇತ್ತೀಚೆಗೆ ಆನ್ ಲೈನ್ ಮೂಲಕ ಚಿತ್ರಕಲೆ ಸ್ಪರ್ಧೆಯನ್ನು ಏರ್ಪಡಿಸಿತ್ತು.ಈ ಸ್ಪರ್ಧೆಯಲ್ಲಿ ಸುಮಾರು 2 ಸಾವಿರಕ್ಕೂ ಹೆಚ್ಚು ಜನ ಭಾಗವಹಿಸಿದ್ದರು ಎಂಬುದು ಗಮನಾರ್ಹ ಸಂಗತಿ.ಈ ಪೈಕಿ ವಿಘ್ನೇಶ್ ಟಾಪ್ 100 ಕಲಾವಿದರ ಪೈಕಿ ಒಬ್ಬರಾಗಿ ಹೊರಹೊಮ್ಮಿದ್ದಾರೆ.ಇಂಟರ್ನ್ಯಾಷನಲ್ ಆರ್ಟ್ ಐಕಾನ್ ಸ್ಪರ್ಧೆಯ ಟಾಪ್ 100 ರಲ್ಲಿ ಸ್ಥಾನ ಪಡೆದಿದ್ದಾರೆ.

ಹೆತ್ತವರಾದ ಪೂರ್ಣಿಮಾ ಮತ್ತು ರಾಘವೇಂದ್ರ ಅವರ ಪ್ರೋತ್ಸಾಹವೂ ಈ ಸಾಧನೆಗೆ ಕಾರಣ. ಈ ಮೊದಲು ರಾಷ್ಟ್ರಮಟ್ಟದ ಕಲೋತ್ಸವದಲ್ಲಿ ರಾಜ್ಯಕ್ಕೇ ಮೊದಲ ಬಹುಮಾನ‌ ಪಡೆದ ಹೆಗ್ಗಳಿಕೆಯೂ ಇವರದ್ದು. ಪಿಯುಸಿ ವಾಣಿಜ್ಯ ವಿಭಾಗದಲ್ಲಿ ಕಲಿಯುತ್ತಿರುವ ಇವರು ಅನಿಮೇಷನ್ ನಲ್ಲಿ ತುಂಬ ಆಸಕ್ತಿ ಹೊಂದಿದ್ದಾರೆ.ತಮ್ಮ ಮಗ ಚಿತ್ರಕಲೆಯಲ್ಲೇ ಉನ್ನತ ವಿದ್ಯಾಭ್ಯಾದ ಮಾಡುವುದಿದ್ದರೆ ಅದಕ್ಕೆ ಸಂಪೂರ್ಣ ಸಹಕಾರ ನೀಡಿ ಪ್ರೋತ್ಸಾಹಿಸುವುದಾಗಿ ತಾಯಿ ಹೇಳಿದ್ದಾರೆ.ಮಗನ ಈ ಸಾಧನೆಯ ಬಗ್ಗೆ ಜೊತೆ ಖುಷಿ ಹಂಚಿಕೊಂಡಿದ್ದಾರೆ.

ಎಲೆ ಮರೆಯ ಈ ಗ್ರಾಮೀಣ ಪ್ರಸ್ವಯಂ ಪರಿಶ್ರಮದಿಂದ ಈ ಸಾಧನೆ ಮಾಡಿದ್ದಾರೆ.ಚಿತ್ರಕಲೆಯಲ್ಲಿ
ಮುಂದೆ ಇನ್ನಷ್ಟು ಸಾಧನೆ ಮಾಡಲಿ ಎಂಬುದು ನಮ್ಮ ಹಾರೈಕೆಯಾಗಿದೆ.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!