ಉಡುಪಿ ನಗರಸಭೆಯಿಂದ ಕೂಗಳತೆಯ ದೂರದಲ್ಲಿ​ ಬಿದ್ದಿರುವ ಕಟ್ಟಡಕ್ಕೆ ಕನಿಷ್ಠ ವ್ಯವಸ್ಥೆ ಮಾಡಲಾಗದ ಅಧಿಕಾರ ವರ್ಗ  

​ಉಡುಪಿ : ಚಿತ್ತರಂಜನ್ ಸರ್ಕಲ್ ಬಳಿಯ ರಾಯಲ್ ಮಹಲ್ ವಾಣಿಜ್ಯ ಸಂಕೀರ್ಣ ಕಟ್ಟಡ ​ ಹತ್ತು ದಿನಗಳ ಹಿಂದೆ ಧರಾಶಾಹಿಯಾಗಿರುತ್ತದೆ. ಸಾರ್ವಜನಿಕರು ಜೀವ ಕೈಯಲ್ಲಿ ಹಿಡಿದುಕೊಂಡು ರಸ್ತೆಯಲ್ಲಿ ಓಡಾಡುವ ಪರಿಸ್ಥಿತಿ. ಕಟ್ಟಡ ಉರುಳಿ 10 ದಿನವಾದರೂ ತೆರವು ಗೊಳಿಸುವ ಕಾರ್ಯ ಆಮೆ ಗತಿಯಲ್ಲಿ ನಡೆಯುತ್ತಿದೆ.  
​ಉಳಿದ ಪಾರ್ಶ್ವ ಭಾಗವು ಆಗಲೋ ಇಗಲೋ ಉರುಳಿ ಬಿಳುವ ಸಾಧ್ಯತೆ ಇದೆ. ​​​ಕಟ್ಟಡ ಇರುವ ಪ್ರದೇಶವು ನಗರದ ಜನ ಸಂಪರ್ಕ ಇರುವ ಪ್ರಮುಖ ಪ್ರದೇಶವಾಗಿದೆ. ಇಲ್ಲಿ ಹೆರಿಗೆ ಆಸ್ಪತ್ರೆ, ರಾಷ್ಟ್ರಿಕೃತ ಬ್ಯಾಂಕುಗಳು, ವಾಣಿಜ್ಯ ಕೇಂದ್ರಗಳು, ಚಿನ್ನಾಭರಣ ಮಳಿಗೆಗಳು ಕಾರ್ಯ ನಿರ್ವಹಿಸುತ್ತಿವೆ.
ಹಾಗಾಗಿ ಈ ಪ್ರದೇಶದಲ್ಲಿ ಸಾರ್ವಜನಿಕರ, ವಾಹನಗಳ ಸಂಚಾರವು ಅಧಿಕ​ವಾಗಿದ್ದು ​ ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ, ಅನಾಹುತಗಳು ಸಂಭವಿಸುವ ಮೊದಲೇ ಜಿಲ್ಲಾಡಳಿತ, ​ಅಥವಾ ನಗರಸಭೆ ತಕ್ಷಣದಲ್ಲಿ ಬಿರುಕು ಬಿದ್ದಿರುವ ಕಟ್ಟಡವನ್ನು ನೆಲಸಮಗೊಳಿಸುವ ಕಾರ್ಯಕ್ಕೆ ಮುಂದಾಗಬೇಕಾಗಿದೆ ಎಂದು ಸಾರ್ವಜನಿಕ ವಲಯದಲ್ಲಿ ಆಗ್ರಹಗಳು ವ್ಯಕ್ತವಾಗಿದೆ.
​ಸರ್ಕಲ್ ಬಳಿ ಅಧಿಕ ಜನ ಸಂಚಾರವಿರುವ ರಸ್ತೆಗೆ ಅಡ್ಡಲಾಗಿ ಬ್ಯಾರಿಕ್ಯಾಡ್ ಅಳವಡಿಸಿ, ರಸ್ತೆ ಬಂದ್ ಮಾಡಿರುವುದರಿಂ ಸಾರ್ವಜನಿಕರಿಗೆ ನಿತ್ಯ ತೊಂದರೆಯಾಗುತ್ತಿದೆ.  ​
​ಅಪಾಯದ ಸ್ಥಿತಿಯಲ್ಲಿ ಇರುವ ಕಟ್ಟಡವನ್ನು ನೆಲಸಮಗೊಳಿಸುವ ಪ್ರಕ್ರಿಯೆಗಳು ನಡೆಯದಿರುವುದರಿಂದ ಪರಿಸರದಲ್ಲಿ ಭಯದ ವಾತಾವರಣ ಸೃಷ್ಠಿಯಾಗಿದ್ದು. ಆಡಳಿತ ವ್ಯವಸ್ಥೆಗಳು ತಕ್ಷಣ ಅಪಾಯದ ಸ್ಥಿತಿಯಲ್ಲಿ ಇರುವ ಕಟ್ಟಡವನ್ನು ಕೂಡಲೇ ತೆರವುಗೊಳಿಸಬೇಕಾಗಿದೆ 
ನಿತ್ಯಾನಂದ ಒಳಕಾಡು, ಸಮಾಜಸೇವಕ, ಉಡುಪಿ. ​
 
 
 
 
 
 
 
 
 
 
 

Leave a Reply