ವಾಹನ ಚಾಲಾಯಿಸುವಾಗ ಮೊಬೈಲ್ ಬಳಸಿದರೆ ಜೈಲು ಅಥವಾ ದಂಡ

ನವದೆಹಲಿ: ವಾಹನ ಚಾಲಕರು ಇನ್ನು ಮುಂದೆ ಕೇವಲ ನ್ಯಾವಿಗೇಶನ್ ಗೆ ಮಾತ್ರ ಮೊಬೈಲ್ ಬಳಸಲು ಅವಕಾಶವಿದೆ ಎಂದು ರಸ್ತೆ ಸಂಚಾರ ಸಚಿವಾಲಯ ಅಧಿಸೂಚನೆ ನೀಡಿದೆ.

ನ್ಯಾವಿಗೇಷನ್ ಗಾಗಿ ಬಳಸುವ ಫೋನ್ ಕೂಡ ಚಾಲಕನಿಗೆ ತೊಂದರೆಯಾಗದಂತೆ ವಾಹನದ ಡ್ಯಾಷ್​ಬೋರ್ಡ್ ಮೇಲೆ ಇಟ್ಟಿರಬೇಕು. ಆದರೆ ವಾಹನ ಚಾಲಾಯಿಸುವಾಗ ಮೆಸೇಜ್ ಅಥವಾ ಕರೆ ಮಾಡುವಂತಿಲ್ಲ ಯಾಕೆಂದರೆ ವಾಹನ ಚಲಾಯಿಸುವಾಗ ಟೆಕ್ಸ್ಟ್​ ಮಾಡುವದರಿಂದ‌ ಅಪಘಾತದ ಪ್ರಮಾಣ ನಾಲ್ಕು ಪಟ್ಟು ಅಧಿಕವಾಗಿರುತ್ತದೆ ಎನ್ನುವುದು ಜಾಗತಿಕ ಅಧ್ಯಯನದಿಂದ ತಿಳಿದು ಬಂದಿದ್ದು ಹೀಗಾಗಿ ಈ ತಿದ್ದುಪಡಿ ತರಲಾಗಿದೆ.  ವಾಹನ ಚಲಾಯಿಸುವಾಗ ಮೊಬೈಲ್ ಬಳಕೆ ಮಾಡುವುದು ಅತ್ಯಂತ ಅಪಾಯಕಾರಿ ವಿಭಾಗಕ್ಕೆ ಸೇರ್ಪಡೆಯಾಗಿದೆ. ಈ ನಿಯಮವನ್ನು ಉಲ್ಲಂಘಿಸಿದರೆ 5,000 ರೂಪಾಯಿ ವರೆಗೆ ದಂಡ ಅಥವಾ ಒಂದು ವರ್ಷದವರೆಗೆ ಜೈಲು ಶಿಕ್ಷೆ ನಿಗದಿಪಡಿದ್ದು, ಅಲ್ಲದೆ ಈ ಎರಡನ್ನೂ ಏಕಕಾಲಕ್ಕೆ ವಿಧಿಸುವ ಸಾಧ್ಯತೆಯು ಇದೆ.

ಇನ್ನು ಚಾಲನಾ ಪರವಾನಗಿ (ಡಿಎಲ್), ಪರ್ವಿುಟ್​ಗಳು, ನೋಂದಣಿ (ಆರ್​ಸಿ), ವಿಮೆ ಮತ್ತು ಫಿಟ್​ನೆಸ್ ಸರ್ಟಿಫಿಕೆಟ್ ಮುಂತಾದ ಕಾಗದ ಪತ್ರಗಳ ಡಿಜಿಟಲ್ ದಾಖಲೆಗಳನ್ನು ಬಳಸಬಹುದು ಎಂಬ ಅನುಮತಿ ಸಚಿವಾಲಯ ನೀಡಿದೆ. ಹೀಗೆ ಹಲವು ವಿಷಯಗಳಲ್ಲಿ ತಿದ್ದುಪಡಿಯಾದ ಮೋಟಾರು ವಾಹನ ಕಾಯ್ದೆ ಅಕ್ಟೋಬರ್ 1ರಿಂದ ಜಾರಿಯಾಗಲಿದೆ.

ಅಕ್ಟೋಬರ್ 1 ರಿಂದ ದೇಶದಾದ್ಯಂತ ವಾಹನ ಚಾಲಕರಿಗೆ ಏಕ ರೂಪದ ಡಿಎಲ್ ಮತ್ತು ಆರ್​ಸಿ ನೀಡ ಲಾಗುತ್ತದೆ. ನೂತನ ಡಿಎಲ್​ನಲ್ಲಿ ಸುಧಾರಿತ ಮೈಕ್ರೋಚಿಪ್ ಇದ್ದು ಅದರಲ್ಲಿ ಕ್ವಿಕ್ ರೆಸ್ಪಾನ್ಸ್ (ಕ್ಯೂಆರ್) ಕೋಡ್ ಮತ್ತು ನಿಯರ್ ಫೀಲ್ಡ್ ಕಮ್ಯುನಿಕೇಷನ್ (ಎನ್​ಎಫ್​ಸಿ) ಫೀಚರ್​ಗಳು ಇರುತ್ತವೆ.ಈ ಹೊಸ ಬದಲಾವಣೆಗಳು, ದಾಖಲೆಗಳನ್ನು ಕೇಂದ್ರೀಕೃತ ಆನ್​ಲೈನ್ ಡೇಟಾಬೇಸ್​ನಲ್ಲಿ ಹತ್ತು ವರ್ಷ ಕಾಲ ಉಳಿಸಿಕೊಳ್ಳಲು ಸಹಾಯ ವಾಗಲಿದೆ.

 
 
 
 
 
 
 
 
 
 
 

Leave a Reply