ಮಾಸ್ಟರ್ ಪ್ಲಾನ್ ಗೆ ವೇಗ, ಜನಸ್ನೇಹಿ ಆಡಳಿತಕ್ಕೆ ನಿರ್ಧಾರ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಸಭೆ ನಿರ್ಣಯ

ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಸಾಮಾನ್ಯ ಸಭೆಯಲ್ಲಿ ಕೋವಿಡ್ ಕಾರಣದಿಂದ ವಿಳಂಬವಾಗುತ್ತಿರುವ ಮಾಸ್ಟರ್ ಪ್ಲಾನಿಗೆ ವೇಗ ನೀಡಲು, ಸಾರ್ವಜನಿಕರಿಗೆ ತಮ್ಮ ಅರ್ಜಿ ಸ್ಥಿತಿಗತಿ ಮಾಹಿತಿ ನೀಡುವ ನೂತನ ಸಾಫ್ಟವೇರ್ , ಪ್ರಾಧಿಕಾ ರದ ವ್ಯಾಪ್ತಿಯಲ್ಲಿ ಅರ್ಜಿಗಳ ತ್ವರಿತ ವಿಲೇವಾರಿಯ ಮೂಲಕ ಜನಸ್ನೇಹಿ ಆಡಳಿತ ನೀಡಲು ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಸಭೆಯಲ್ಲಿ ನಿರ್ಣಯಿಸಲಾಯಿತು.

ಉಡುಪಿ ಶಾಸಕ ಶ್ರೀ ಕೆ. ರಘುಪತಿ ಭಟ್ ಅವರು ಪಾಲ್ಗೊಂಡು ಕೆರೆ, ಪಾರ್ಕ್ ಅಭಿವೃದ್ಧಿ ಯೋಜನೆಗಳನ್ನು ಶೀಘ್ರದಲ್ಲೇ ರೂಪಿಸುವ ಬಗ್ಗೆ ಚರ್ಚಿಸಿದರು. ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ. ರಾಘವೇಂದ್ರ ಕಿಣಿ ಅಧ್ಯಕ್ಷತೆ ವಹಿಸಿದ್ದರು.

ಸದಸ್ಯರಾದ ಪ್ರವೀಣ್ ಶೆಟ್ಟಿ ಕಪ್ಪೆಟ್ಟು, ದಿನಕರ್ ಪೂಜಾರಿ, ಕಿಶೋರ್ ಕುಮಾರ್, ಸುಮಾ ನಾಯ್ಕ್, ಕುಂದಾಪುರದ ಸಹಾಯಕ ಆಯುಕ್ತರು, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಾದ ಕೆ. ರಾಜು, ನಗರಸಭೆಯ ಪೌರಾಯುಕ್ತ ಡಾ ಉದಯ್ ಶೆಟ್ಟಿ, ನಗರ ಯೋಜನಾ ಸದಸ್ಯರಾದ ಜಿತೇಶ್, ಸಣ್ಣ ನೀರಾವರಿ ಇಲಾಖೆ, ಲೋಕೋಪಯೋಗಿ ಇಲಾಖೆ ಹಾಗೂ ಮೆಸ್ಕಾಂ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ನೂತನ ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯರಾಗಿ ಉಡುಪಿ ನಗರಸಭೆಯಿಂದ ನಾಮನಿರ್ದೇಶನಗೊಂಡ ಪ್ರಭಾಕರ್ ಪೂಜಾರಿಯನ್ನು ಗೌರವಿಸಲಾಯಿತು..

 
 
 
 
 
 
 
 
 
 
 

Leave a Reply