Janardhan Kodavoor/ Team KaravaliXpress
26 C
Udupi
Thursday, April 22, 2021

ಕುಂಜಾರುಗಿರಿಯ ಗಿರಿಬಳಗ (ರಿ) ಇದರ 32ನೆಯ ವಾರ್ಷಿಕೋತ್ಸವ

ಕುಂಜಾರುಗಿರಿಯ ಗಿರಿಬಳಗ (ರಿ) ನ 32ನೆಯ ವಾರ್ಷಿಕೋತ್ಸವವು ಕುಂಜಾರುಗುರಿ ಶ್ರೀ ದುರ್ಗಾದೇವಿ ದೇವಸ್ಥಾನದ ವಠಾರದಲ್ಲಿ ನಡೆಯಿತು.ಅದಮಾರು ಮಠಾಧೀಶರಾದ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ಸಭೆಯಲ್ಲಿ ಭಾಗವಹಿಸಿ, ಇಂದಿನ ಮಕ್ಕಳು ಜೀವನದಲ್ಲಿ ದಾರಿ ತಪ್ಪುತ್ತಿರುವುದು ಬೇಸರದ ಸಂಗತಿ.ಹಿರಿಯರು ಮಾರ್ಗದರ್ಶನ ನೀಡಿದರು ಕೇಳುವ ಪರಿಸ್ಥಿಯಲ್ಲಿ ಇರುವುದಿಲ್ಲ.ಅದಕ್ಕಾಗಿ ಮನೆಯಲ್ಲಿ ನಿತ್ಯಾನುಷ್ಠಾನ ಮಾಡುವಾಗ ಎಲ್ಲರಿಗೂ ಒಳ್ಳೆಯ ಬುದ್ಧಿ ಪ್ರಚೋದನೆ ಮಾಡು ಎಂದು ಭಗವಂತನಲ್ಲಿ ಬೇಡಿಕೊಳ್ಳುವುದೇ ಉತ್ತಮ ದಾರಿ ಎಂದರು.

ಪ್ರತಿ ಮನೆಯಲ್ಲಿಯೂ ವಿಪ್ರರು ಹೆಚ್ಚು ಸಂಖ್ಯೆಯಲ್ಲಿ ಗಾಯತ್ರಿ ಜಪ ಮಾಡಬೇಕು.ಸ್ತ್ರೀಯರು ಲಕ್ಷ್ಮಿ ಶೋಭಾನೆ,ಭಜನೆಯನ್ನು ಪ್ರತಿ ದಿನವೂ ಮಾಡುವುದರಿಂದ ಸ್ವಾಸ್ತ್ಯ ಸಮಾಜ ನಿರ್ಮಾಣ ಮಾಡಲು ಸಾಧ್ಯ .ಈ ಬಳಗವು 31 ವರ್ಷಗಳಿಂದ ಸಮಾಜಮುಖಿ ಹಲವಾರು ಕೆಲಸಗಳನ್ನು ಮಾಡಿ ಉತ್ತಮ ಸಾಧನೆ ಮಾಡಿದೆ.ಇನ್ನು ಮುಂದಿನ ಪೀಳಿಗೆಯ ವಿಪ್ರರಿಗೆ ಬೇಕಾದ ಸಂಸ್ಕಾರಯುತ ಮೌಲ್ಯಗಳು ಬಳಗದಿಂದ ಸಿಗುವಂತಾಗಲಿ ಎಂದು ಅನುಗ್ರಹ ಸಂದೇಶ ನೀಡಿದರು.

ಪುತ್ತೂರು ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ  ಪ್ರೊ.ಸುಬ್ರಹ್ಮಣ್ಯ ಜೋಶಿ  ಸಭಾಧ್ಯಕ್ಷತೆ ವಹಿಸಿದ್ದರು.ಉಡುಪಿ ಜಿಲ್ಲಾ ಧಾರ್ಮಿಕ ಪರಿಷತ್ತಿನ ಸದಸ್ಯ ಸಾಣೂರು ಶ್ರೀ ರಾಮ ಭಟ್  ಮುಖ್ಯ ಅತಿಥಿಗಯಾಗಿ ಭಾಗವಹಿಸಿದ್ದರು.ಬಳಗದ ಗೌರವಾಧ್ಯಕ್ಷ  ಕೆ.ಗೋವಿಂದ ಭಟ್ ಹಾಗೂ ಗಿರಿಭಗಿನಿಯರ ಅಧ್ಯಕ್ಷೆ ಮೀರಾ ಭಟ್ ಉಪಸ್ಥಿತರಿದ್ದು,ಕುಂಜಾರುಗಿರಿ ಶಂಖತೀರ್ಥ ಮಠದ ಕೃಷ್ಣಮೂರ್ತಿ ಉಪಾಧ್ಯಾಯರಿಗೆ ಬಳಗದ ವತಿಯಿಂದ ಮತ್ತು ಮೀರಾ ಕೃಷ್ಣಮೂರ್ತಿ ಉಪಾಧ್ಯಾಯರಿಗೆ ಗಿರಿಭಗಿನಿಯರ ವತಿಯಿಂದ ಸನ್ಮಾನ ಮಾಡಲಾಯಿತು.

ಬೆಂಗಳೂರಿನ ಪದ್ಮಕಮಲ ಟ್ರಷ್ಟಿನ ವತಿಯಿಂದ ಅರ್ಹ ಇಬ್ಬರು ಫಲನುಭವಿಗಳಿಗೆ ಧನಸಹಾಯ ಮಾಡಲಾಯಿತು.ಹಾಗೂ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ಸಾಲ್ಮರ ಗೋವಿಂದ ಭಟ್ ಪ್ರತಿಷ್ಠಾನ,ಬೆಳ್ಳೆ ಶ್ಯಾಮಣ್ಣ ಸಾಮಗ ಮತ್ತು ಪದ್ಮಾವತಿ ಅಮ್ಮನವರ ಸ್ಮರಣಾರ್ಥ, ಶ್ರೀಮತಿ ಕುಸುಮ ಮತ್ತು ಡಾ.ಬೆಳ್ಳೆ ರಾಜಗೋಪಾಲ ಸಾಮಗ,ಉಡುಪಿಯ ಉದ್ಯಮಿ ರಂಜನ್ ಕಲ್ಕೂರ, ಇವರ ಪ್ರಯೋಜಕದ ಪ್ರತಿಭಾ ಪುರಸ್ಕಾರ ನೀಡಲಾಯಿತು.ಬಳಗದ ಸದಸ್ಯರಿಗೂ ಅವರ ಕುಟುಂಬದವರಿಗೂ ಸರ್ಕಾರದ ಅಯುಷ್ಮಾನ್ ಅರೋಗ್ಯ ಕಾರ್ಡನ್ನು ಬಳಗದ ವತಿಯಿಂದ ಮಾಡಲಾಗಿತ್ತು.ಸಾಂಕೇತಿಕವಾಗಿ ಸಭೆಯಲ್ಲಿ ಕಾರ್ಡನ್ನು ಶ್ರೀಪಾದರು ನೀಡಿದರು.

ಬಳಗದ ಅಧ್ಯಕ್ಷ್ಷೆ ವಿನಯಾಪ್ರಸಾದ್ ಸ್ವಾಗತಿಸಿ,ಕಾರ್ಯದರ್ಶಿ ಶ್ರೀನಿವಾಸ ಭಟ್ ವಾರ್ಷಿಕ ವರದಿ ವಾಚಿಸಿದರು. ಶ್ರೀಶ ಸಾಮಗ ಮತ್ತು ರಾಘವೇಂದ್ರ ಭಟ್ ಕಾರ್ಯಕ್ರಮ ನಿರೂಪಣೆ ಮಾಡಿ, ಉಪಾಧ್ಯಕ್ಷ  ಪುಂಡರೀಕಾಕ್ಷ ಭಟ್  ವಂದಿಸಿದರು.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

ಮಟ್ಟು ದೇವಳದಲ್ಲಿ ರಾಘವನ ಜನನ

ಪಲಿಮಾರು ಮಠ ಪರಂಪರೆಯ ರಾಮ ನವಮಿಯ ಆಚರಣಾ *ಇತಿಹಾಸದಲ್ಲೇ ಮೊದಲ ಬಾರಿಗೆ* ಮಟ್ಟು ದೇವಳದಲ್ಲಿ ಯತಿದ್ವಯರ ಆಶೀರ್ವಾದದೊಂದಿಗೆ *ಶ್ರೀರಾಮ ದೇವರ ರಥೋತ್ಸವ* ಬಹು ವಿಜ್ರಂಭಣೆಯಿಂದ ಜರುಗಿತು. ಈ ಪರ್ವ ಕಾಲದಲ್ಲಿ *ದೇವಳದ ಹಸುವು ಗಂಡು...

​ ​ಜಿಲ್ಲೆಯಲ್ಲಿ ಹೆಚ್ಚು ಕೋವಿಡ್ ಟೆಸ್ಟ್ ನೆಡೆಸಿ, ಸೋಂಕಿತರಿಗೆ ಕೂಡಲೇ ಚಿಕಿತ್ಸೆ ನೀಡಿ :​ ಉಸ್ತುವಾರಿ ಸಚಿವ ಬೊಮ್ಮಾಯಿ

ಉಡುಪಿ​: ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕೋವಿಡ್ ​ಪರೀಕ್ಷೆಗಳನ್ನು ನೆಡೆಸಿ, ತ್ವರಿತವಾಗಿ​ ಸೋಂಕಿತರನ್ನು ಪತ್ತೆ ಹಚ್ಚಿ, ಕೂಡಲೇ ಅವರಿಗೆ ಚಿಕಿತ್ಸೆ ಆರಂಬಿಸುವುದರ ಮೂಲಕ ಜಿಲ್ಲೆಯಲ್ಲಿ ಕೋವಿಡ್ ಎರಡನೇ ಅಲೆ​ ಹರಡುವುದನ್ನು ನಿಯಂತ್ರಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು , ನಿಲರ್ಕ್ಷಿಸದರೆ...

ಉಡುಪಿ: ಶಿರೂರು ಮಠಕ್ಕೆ ನೂತನ ಪೀಠಾಧಿಪತಿ ನೇಮಕ ವಿಚಾರ: ಶ್ರೀ ಲಕ್ಷ್ಮಿವರ ತೀರ್ಥರ ಪೂರ್ವಾಶ್ರಮ ಸಹೋದರರಿಂದಲೇ ಆಕ್ಷೇಪ!

ಉಡುಪಿ: ಉಡುಪಿ ಶಿರೂರು ಮಠಕ್ಕೆ ನೂತನ ಪೀಠಾಧಿಪತಿ ನೇಮಕಕ್ಕೆ ಸಹೋದರನಿಂದಲೇ ಆಕ್ಷೇಪ ವ್ಯಕ್ತವಾಗಿದೆ. ರಾಮನವಮಿಯಂದು ನೂತನ ಪೀಠಾಧಿಪತಿ ನೇಮಕ ದ್ವಂದ್ವ ಮಠವಾದ ಸೋದೆ ಮಠಾಧೀಶ ರಿಂದ ಘೋಷಣೆಯಾಗಿದ್ದು ಇದಕ್ಕೆ ಶ್ರೀ ಲಕ್ಷ್ಮಿವರ ತೀರ್ಥರ...

ವಾರಾಂತ್ಯದಲ್ಲಿ ಈಗಾಗಲೇ ನಿಗದಿಪಡಿಸಿದ್ದ ಮದುವೆ ಇನ್ನಿತರ ಕಾರ್ಯಕ್ರಮಗಳಿಗೆ ಅವಕಾಶ ನೀಡಬೇಕು – ರಘುಪತಿ ಭಟ್ ಆಗ್ರಹ

ಉಡುಪಿ: ರಾಜ್ಯದಲ್ಲಿ ವಾರಾಂತ್ಯ ಸಂಪೂರ್ಣ ಕರ್ಫ್ಯೂ ಜಾರಿಗೊಳಿಸಿದ ದಿನ ಈಗಾಗಲೇ ನಿಗದಿಪಡಿಸಿದ್ದ ಮದುವೆ ಇನ್ನಿತರ ಕಾರ್ಯಕ್ರಮಗಳಿಗೆ ಜನ ನಿಗದಿಪಡಿಸಿದ ದಿನದಂದೆ ಅವಕಾಶ ಕಲ್ಪಿಸುವಂತೆ ಶಾಸಕ ರಘುಪತಿ ಭಟ್ ಆಗ್ರಹ ವ್ಯಕ್ತಪಡಿಸಿದ್ದಾರೆ. ಕೋವಿಡ್ - 19...

ಶೀರೂರು ಮಠಕ್ಕೆ ನೂತನ ಉತ್ತರಾಧಿಕಾರಿ​ಯಾಗಿ ​ಅನಿರುದ್ದ ಸರಳತ್ತಾಯ​ ​ಆಯ್ಕೆ

ಉಡುಪಿ: 16ವರ್ಷ ವಯಸ್ಸಿನ ಅನಿರುದ್ದ ​​​​ಸರಳತ್ತಾಯ​ ​ಎಂಬವರನ್ನು ಉಡುಪಿ ಅಷ್ಠ ಮಠಗಳಲ್ಲೊಂದಾದ ಶಿರೂರು ಮಠದ 31 ನೇಯ ಪೀಠಾಧಿಪತಿಯಾಗಿ ಆಯ್ಕೆ ಮಾಡಲಾಗಿದೆ ಎಂದು ಸೋದೆ ಮಠದ ​ಶ್ರೀಶ್ರೀ  ವಿಶ್ವವಲ್ಲಭತೀರ್ಥ ಸ್ವಾಮೀಜಿ ಹೇಳಿದರು.ಅವರು ಮಂಗಳವಾರ ಹಿರಿಯಡ್ಕ ಬಳಿಯ...
error: Content is protected !!