ಉಡುಪಿ ಜಿಲ್ಲೆಯಲ್ಲಿ 50 ವಿವಿಧ ಪ್ರಕರಣಗಳಲ್ಲಿ ವಶಪಡಿಸಿಕೊಂಡಿದ್ದ ಮಾದಕ ದ್ರವ್ಯಗಳ ನಾಶ

ಪಡುಬಿದ್ರಿ: ಉಡುಪಿ ಜಿಲ್ಲೆಯಲ್ಲಿ 50 ವಿವಿಧ ಪ್ರಕರಣಗಳಲ್ಲಿ ವಶಪಡಿಸಿಕೊಂಡಿರುವ 1.28 ಕೋಟಿ ರೂ. ಮೌಲ್ಯದ ಗಾಂಜಾ ಮತ್ತಿತರ ಡ್ರಗ್ಸ್ ಗಳನ್ನು ನಂದಿಕೂರಿನ ಆಯುಷ್ ಬಯೋ ಮೆಟ್ರಿಕ್ ವೇಸ್ಟ್ ನಿರ್ವಹಣಾ ಘಟಕದಲ್ಲಿ ನಾಶಪಡಿಸಲಾಯಿತು.

ಈ ವೇಳೆ ಮಾತಾಡಿದ ಉಡುಪಿ ಎಸ್ ಪಿ ವಿಷ್ಣುವರ್ಧನ್ ಮಾತನಾಡಿ, 2008ರಿಂದ 2021ರ ಇದುವರೆಗಿನ ಎಲ್ಲಾ ಮಾದಕ ದ್ರವ್ಯಗಳನ್ನು ನಾಶಪಡಿಸಲಾಗಿದೆ. ಇನ್ನು ಪ್ರತೀ ವರ್ಷವೂ ಇದನ್ನು ಮಾದಕ ದ್ರವ್ಯ ವಿರೋಧಿ ಹಾಗೂ ಅವುಗಳ ಕಳ್ಳಸಾಗಣೆ ವಿರೋಧಿ ಅಂತರಾಷ್ಟ್ರೀಯ ದಿನವಾದ ಜೂ. 26ರಂದು ಮುಂದುವರಿಸಲಾಗುವುದು. ಉಡುಪಿ ಜಿಲ್ಲೆಯ ಎಲ್ಲಾ ಮಾದಕ ದ್ರವ್ಯ ವ್ಯಸನಿಗಳು ಮತ್ತು ಕಳ್ಳಸಾಗಣೆದಾರರ ಮೇಲೆ ಇಲಾಖೆ ನಿಗಾವಿಡಲಾಗಿದೆ. ಮಾದಕ ದ್ರವ್ಯ ವ್ಯಸನದ ವಿರುದ್ಧ ಇಲಾಖಾ ಸಮರವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದರು.

ಉಡುಪಿ ಜಿಲ್ಲಾ ಎಡಿಷನಲ್ ಎಸ್ಪಿ ಕುಮಾರಚಂದ್ರ, ಕಾರ್ಕಳ ಡಿವೈಎಸ್ಪಿ ವಿಜಯಪ್ರಸಾದ್, ಕುಂದಾಪುರ ಡಿವೈಎಸ್ಪಿ ಶ್ರೀಕಾಂತ್, ಉಡುಪಿ ಡಿವೈಎಸ್ಪಿ ಸುಧಾಕರ ನಾಯಕ್, ವೃತ್ತ ನಿರೀಕ್ಷಕರಾದ ಮಂಚುನಾಥ್, ಮಂಜುನಾಥ್ ಗೌಡ, ಪ್ರಮೋದ್ ಕುಮಾರ್, ಸಂಪತ್ ಮತ್ತಿತರರಿದ್ದರು.

 
 
 
 
 
 
 
 
 
 
 

Leave a Reply