ಎಸ್.ಪಿ.ಇ.ಸಿ- ಆನ್ಲೈನ್ ನಲ್ಲಿ ವೃತ್ತಿ ಮಾರ್ಗದರ್ಶನ ತರಬೇತಿ

ಉಡುಪಿ: ಶ್ರೀ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನ ವೃತ್ತಿ ಮಾರ್ಗದರ್ಶನ ಘಟಕ ಮತ್ತು ಉನ್ನತಿ ಕೆರಿಯರ್ ಅಕಾಡೆಮಿಯ ಸಹ ಭಾಗಿತ್ವದಲ್ಲಿ ಶುಕ್ರವಾರ ಆನ್ಲೈನ್ ವೆಬಿನಾರ್ ಹಮ್ಮಿಕೊಳ್ಳಲಾಗಿತ್ತು.

ಉನ್ನತಿ ಅಕಾಡೆಮಿಯ ಕಮ್ಯುನಿಕೇಶನ್ ಆ್ಯಂಡ್ ಪರ್ಸನಾಲಿಟಿ ಡೆವೆಲಪ್ಮೆಂಟ್ ಟ್ರೈನರ್ ಜಯದೀಪ್ ಅಮೀನ್ ಮಾತನಾಡಿ ಸಂವಹನ ಕಲೆ ಅತ್ಯಂತ ಉತ್ತಮವಾದದ್ದು, ಹಾಗೆಯೇ ಪದವಿ ಶಿಕ್ಷಣದ ಜೊತೆಜೊತೆಗೆ ಸಾರ್ವಜನಿಕ ರಂಗದಲ್ಲಿ ನಿರರ್ಗಳವಾಗಿ ಮಾತನಾಡುವುದು, ಸಮಯಪ್ರಜ್ಞೆ, ಸಂದರ್ಶನವನ್ನು ಎದುರಿಸುವ ಕಲೆ, ನೈತಿಕತೆ ಇವೆಲ್ಲವನ್ನೂ ಸಹಾ ಮೈಗೂಡಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.

ಇನ್ನೋರ್ವ ಸಂಪನ್ಮೂಲ ವ್ಯಕ್ತಿ ಮೈತ್ರಿ ಬಡ್ಕಿಲ್ಲಾಯ ಆಪ್ಟಿಟ್ಯೂಡ್ ಮತ್ತು ಲಾಜಿಕಲ್ ರೀಸನಿಂಗ್ ಬಗ್ಗೆ ಮಾಹಿತಿ ನೀಡಿದರು. ಪ್ರಾಚಾರ್ಯೆ ಡಾ.ಸುಕನ್ಯಾ ಮೇರಿ ಜೆ. ಅಧ್ಯಕ್ಷತೆ ವಹಿಸಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.ಅಂತಿಮ ತರಗತಿಯ ಬಿ.ಕಾಂ ಮತ್ತು ಬಿಎ ವಿದ್ಯಾರ್ಥಿಗಳು ಈ ಆನ್ಲೈನ್ ವೆಬಿನಾರ್ ನಲ್ಲಿ ಭಾಗವಹಿಸಿ ಮಾಹಿತಿ ಪಡೆದರು. ವೃತ್ತಿ ಮಾರ್ಗದರ್ಶನ ಘಟಕದ ಸಂಚಾಲಕ ರಾಘವೇಂದ್ರ ಜಿ.ಜಿ ಕಾರ್ಯಕ್ರಮ ಸಂಯೋಜಿಸಿ, ಮನೋಜ್ ತೃತೀಯ ಬಿ.ಕಾಂ. ನಿರೂಪಿಸಿದರು.

 
 
 
 
 
 
 
 
 
 
 

Leave a Reply