ಅಂಬಲಪಾಡಿ ಗ್ರಾ.ಪಂ. ವ್ಯಾಪ್ತಿಯ 50 ಎಕ್ರೆ ಹಡಿಲು ಭೂಮಿ ಕೃಷಿಗೆ ಶಾಸಕ ಕೆ.ರಘುಪತಿ ಭಟ್ ಭೂಮಿ ಪೂಜೆ

ಉಡುಪಿ: ವಿಧಾನಸಭಾ ಕ್ಷೇತ್ರದಾದ್ಯಂತ ಕೇದಾರೋತ್ಥಾನ ಟ್ರಸ್ಟ್(ರಿ.) ಆಶ್ರಯದಲ್ಲಿ ಹಮ್ಮಿಕೊಂಡಿರುವ ಹಡಿಲು ಭೂಮಿ ಕೃಷಿ ಆಂದೋಲನ ಹಡಿಲು ಬಿದ್ದಿರುವ ಗದ್ದೆ ತೋಡುಗಳ ಪುನಚ್ಚೇತನದ ಜೊತೆಗೆ ಸಾವಯವ ಉತ್ಪನ್ನ ಬೆಳೆಯಲು ಪೂರಕ ವಾತಾವರಣ ಸೃಷ್ಟಿಸಿದೆ ಎಂದು ಉಡುಪಿ ಶಾಸಕ ಕೆ.ರಘುಪತಿ ಭಟ್ ಹೇಳಿದರು.

ಅಂಬಲಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಸುಮಾರು 50 ಎಕ್ರೆ ಹಡಿಲು ಭೂಮಿ ಕೃಷಿಗೆ ಅಂಬಲಪಾಡಿ ವಾರ್ಡಿನಲ್ಲಿ ಗ್ರಾಮೋತ್ಥಾನ ಸಮಿತಿ, ಭೂ ಮಾಲಕರು, ಗ್ರಾಮಸ್ಥರು ಮತ್ತು ಪ್ರಮುಖರ ಉಪಸ್ಥಿತಿಯಲ್ಲಿ ಭೂಮಿ ಪೂಜೆ ನೆರವೇರಿಸಿ ಹಡಿಲು ಭೂಮಿಯ ಉಳುಮೆಗೆ ಚಾಲನೆ ನೀಡಿ ಮಾತನಾಡಿದರು.

ಹಡಿಲು ಭೂಮಿ ಕೃಷಿಗೆ ಕ್ಷೇತ್ರದಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಪ್ರಕ್ರಿಯೆಯಿಂದ ಗದ್ದೆಗಳ ಸ್ವಚ್ಛತೆಯ ಜೊತೆಗೆ ನೀರಿನ ತೇವಾಂಶ ಮತ್ತು ಫಲವತ್ತತೆ ವೃದ್ಧಿಯಾಗುವುದು. ಮುಂದಿನ ವರ್ಷದಿಂದ ಸ್ವತಃ ರೈತರೇ ಹಡಿಲು ಭೂಮಿಯಲ್ಲಿ ಕೃಷಿ ಮಾಡಿದರೆ ಸಾವಯವ ಕೃಷಿ ಉತ್ಪನ್ನಗಳನ್ನು ಕೇದಾರೋತ್ಥಾನ ಟ್ರಸ್ಟ್ ಮೂಲಕ ನಿಗದಿತ ಬೆಲೆಗೆ ಖರೀದಿಸಿ ‘ಉಡುಪಿ ಕಜೆ’ ಹೆಸರಿನಲ್ಲಿ ಜಿಲ್ಲೆಯಾದ್ಯಂತ ಮಾರಾಟಕ್ಕೆ ಅವಕಾಶ ನೀಡುವ ಯೋಜನೆ ಇದೆ ಎಂದರು.

ಸ್ಥಳೀಯ ಪಾರಂಪರಿಕ ಕೃಷಿಕರು, ಊರಿನ ಹಿರಿಯರು, ಭೂ ಮಾಲಕರು ಹಾಗೂ ಗ್ರಾಮಸ್ಥರ ಸಹಿತ ಹಡಿಲು ಭೂಮಿ ಕೃಷಿ ಆಂದೋಲನಕ್ಕೆ ಕೈಜೋಡಿಸಿರುವ ಅಂಬಲಪಾಡಿ ಗ್ರಾಮ ಪಂಚಾಯತ್ ಮತ್ತು ಗ್ರಾಮೋತ್ಥಾನ ಸಮಿತಿ ಅಂಬಲಪಾಡಿ ತಂಡದ ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರಿಗೆ ಶಾಸಕ ಕೆ.ರಘುಪತಿ ಭಟ್ ಕೃತಜ್ಞತೆಗಳನ್ನು ಸಲ್ಲಿಸಿ, ಹಡಿಲು ಭೂಮಿ ಕೃಷಿಯ ಯಶಸ್ವೀ ಅನುಷ್ಠಾನಕ್ಕೆ ಎಲ್ಲರ ಸಹಕಾರ ಕೋರಿದರು.

ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಘವೇಂದ್ರ ಕಿಣಿ, ಪ್ರಾಧಿಕಾರದ ಸದಸ್ಯ ಪ್ರವೀಣ್ ಕುಮಾರ್ ಶೆಟ್ಟಿ ಕಪ್ಪೆಟ್ಟು, ಜಿಲ್ಲಾ ಪಂಚಾಯತ್ ನಿಕಟಪೂರ್ವ ಅಧ್ಯಕ್ಷ ದಿನಕರ ಬಾಬು ಅಂಬಲಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ರೋಹಿಣಿ ಎಸ್. ಪೂಜಾರಿ ಕಪ್ಪೆಟ್ಟು, ಉಪಾಧ್ಯಕ್ಷ ಸೋಮನಾಥ್ ಬಿ.ಕೆ, ಗ್ರಾಮೋತ್ಥಾನ ಸಮಿತಿ ಅಂಬಲಪಾಡಿ ಇದರ ಗೌರವ ಸಂಚಾಲಕ ಯೋಗೀಶ್ ಶೆಟ್ಟಿ, ಪ್ರಧಾನ ಸಂಚಾಲಕ ಶಿವಕುಮಾರ್ ಅಂಬಲಪಾಡಿ, ಗೌರವ ಸಲಹೆಗಾರ ರಾಜೇಂದ್ರ ಪಂದುಬೆಟ್ಟು, ಸಹ ಸಂಚಾಲಕರಾದ ರಾಜೇಶ್ ಸುವರ್ಣ, ಸುನಿಲ್ ಕುಮಾರ್, ಹರೀಶ್ ಆಚಾರ್ಯ, ಮಹೇಂದ್ರ ಕೋಟ್ಯಾನ್, ವಿನೋದ್ ಪೂಜಾರಿ, ದಯಾಶಿನಿ ಪಂದುಬೆಟ್ಟು, ಗ್ರಾ.ಪಂ. ಸದಸ್ಯರಾದ ಕುಸುಮ, ಹರೀಶ್ ಪಾಲನ್ ಕಪ್ಪೆಟ್ಟು, ಕೃಷಿಕರು ಮತ್ತು ಗದ್ದೆಗಳ ಮಾಲಕ ಸುರೇಶ್ ಶೆಟ್ಟಿ, ಶರತ್ ಶೆಟ್ಟಿ, ವಿಠ್ಠಲ ಪೂಜಾರಿ, ಓಬು ಪೂಜಾರಿ, ಡೇನಿಸ್ ಕ್ವಾರ್ಡ್ರಸ್, ಸ್ಥಳೀಯರದ ಶಿವಾಜಿ ಸನಿಲ್, ರಾಧಾಕೃಷ್ಣ, ಗಣೇಶ್ ಪೂಜಾರಿ ಕಪ್ಪೆಟ್ಟು, ಗಿರೀಶ್ ಅಮೀನ್, ರಾಜೇಶ್ ಪೂಜಾರಿ, ಕೀರ್ತನ, ವಿಠಲ ಮುಂತಾದವರು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply