ಶ್ರೀಕೃಷ್ಣ ಮುಖ್ಯಪ್ರಾಣ ಸನ್ನಿಧಾನ, ಶ್ರೀಕೃಷ್ಣಮಠ ಉಡುಪಿ. ಪರ್ಯಾಯ ಅದಮಾರು ಪರ್ಯಾಯ
ನಡೆ-ನುಡಿಗಳೆರಡರಿಂದಲೂ ನಮ್ಮನ್ನು ಸದಾ ಪ್ರಭಾವಿಸುವ ಗೀತಾಚಾರ್ಯನಾದ ಗೋಪಾಲಕೃಷ್ಣನ ಸನ್ನಿಧಿಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಮತ್ತು ಶ್ರೀಕೃಷ್ಣ ಲೀಲೋತ್ಸವದ ಶುಭ ಅವಸರದಲ್ಲಿ ಎಂಟು ದಿನಗಳ ಜ್ಞಾನಮಹೋತ್ಸವ ಕಾರ್ಯಕ್ರಮ ನಡೆಯಲಿದೆ.
ಸೆಪ್ಟೆಂಬರ್ ತಾ. 3 ರಿಂದ 10ರ ವರೆಗೆ ಪ್ರತಿನಿತ್ಯ ಸಂಜೆ ಶ್ರೀಕೃಷ್ಣನ ವಿವಿಧ ಬದುಕಿನ ಚಿತ್ರಣವನ್ನು ನಮಗೆ ಪ್ರವಚನದ ಮೂಲಕ ನೀಡಲಿದ್ದಾರೆ
5.30-5.45 ಶ್ರೀ ಈಶಪ್ರಿಯಶ್ರೀಪಾದರು ಅದಮಾರು ಕಿರಿಯಶ್ರೀಗಳು- ಜೀವನಾದರ್ಶ ಕೃಷ್ಣ
5.45-6.30 ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಪಲಿಮಾರು ಹಿರಿಯಶ್ರೀಗಳು- ಕೌಟುಂಬಿಕ ಕೃಷ್ಣ
6.30-7.15 ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ಅದಮಾರು ಹಿರಿಯಶ್ರೀಗಳು- ಭಾಗವತ ಕೃಷ್ಣ
ಸೆಪ್ಟೆಂಬರ್ ತಾ। 2 ರಿಂದ 9 ರ ವರೆಗೆ ಪ್ರತನಿತ್ಯ ಧಾರೇಶ್ವರ ಯಕ್ಷಬಳಗ ಸಂಯೋಜಿಸಿರುವ ಎಂಟು ಪ್ರಸಂಗಗಳನ್ನೊಳಗೊಂಡ ಯಕ್ಷಾಷ್ಟಾಹ ಕಾರ್ಯಕ್ರಮಗಳು ಸಂಜೆ 7.30 ಕ್ಕೆ ನೆರವೇರಲಿವೆ.
ತಾ. 10ರ, ಕೃಷ್ಣಾಷ್ಟಮಿಯಂದು ಬೆಳಗ್ಗೆ 7.30 ರಿಂದ 9 ರ ವರೆಗೆ ಲಕ್ಷ ತುಳಸಿ ಅರ್ಚನೆ ಸಲುವಾಗಿ ವಿಷ್ಣು ಸಹಸ್ರನಾಮ ಪಾರಾಯಣ ಮತ್ತು ನಾಮಾವಳಿ ತಾವು ಮನೆಗಳಲ್ಲಿ ಅಂತರ್ಜಾಲದ ಮೂಲಕ ವ್ಯವಸ್ಥೆ ಮಾಡಲಾಗಿದೆ. ಸಂಜೆ 7.30ರಿಂದ ಶ್ರೀಕೃಷ್ಣಜನ್ಮ ಎಂಬ ಸಂಸ್ಕೃತ ಯಕ್ಷಗಾನ ತಾಳಮದ್ದಲೆ ನಡೆಯಲಿದೆ.
ರಾತ್ರಿ 10 ರಿಂದ 12 ವರೆಗೆ ನಾದಸ್ವರವಾದನ ಜರುಗಲಿದೆ. ಬಳಿಕ 12 ಗೆ ನಡೆವ ಅರ್ಘ್ಯಪ್ರದಾನ ಹಾಗು ಮರು ದಿನ ಮಧ್ಯಾಹ್ನ(೧೧..) 3 ಗಂಟೆಗೆ ಆರಂಭಗೊಳ್ಳುವ ಶ್ರೀಕೃಷ್ಣ ಜಯಂತಿ ಲೀಲೋತ್ಸವ ಕಾರ್ಯಕ್ರಮಗಳು ಕೂಡ ಪ್ರಸಾರಗೊಳ್ಳುತ್ತದೆ.
https://www.youtube.com/channel/UCeOdFy66lqGJclr9CUlkJvA