ಮಲ್ಲಾರು ಗ್ರಾಮದಲ್ಲಿ ಡೆಂಗ್ಯೂ, ಮಲೇರಿಯಾ ನಿವಾರಣಾ ಅಭಿಯಾನ.

ಕಾಪು : ಮನುಷ್ಯ ಬದುಕಿರುವಷ್ಟು ಕಾಲ ಆರೋಗ್ಯವಂತನಾಗಿದ್ದರೆ ಅದಕ್ಕಿಂತ ದೊಡ್ಡ ಭಾಗ್ಯ ಇನ್ನೊಂದಿಲ್ಲ. ತನ್ನ ದೇಹವನ್ನು ಸ್ವಚ್ಛವಾಗಿಡಿ ವುದರೊಂದಿಗೆ, ತಮ್ಮ ಮನೆಯ ವಠಾರ ಮತ್ತು ಪರಿಸರವನ್ನು ಸ್ವಚ್ಛವಾಗಿರಿಸಬೇಕು. ಇದರಿಂದ ಕಾಯಿಲೆಗಳಿಗೆ ತಡೆಯೊಡ್ಡಿ,   ತಮ್ಮೊಂದಿಗೆ ತಮ್ಮ ನೆರೆಕರೆಯವರು ಕೂಡಾ ಆರೋಗ್ಯವಂತರಾಗಿರುವಂತೆ ನೋಡಿಕೊಳ್ಳಬಹುದು ಈ ರೀತಿಯಿಂದ ಒಂದು ಆರೋಗ್ಯಪೂರ್ಣ ಸಮಾಜ ನಿರ್ಮಿಸಲು ಸಾಧ್ಯವಿದೆ ಎಂದು ಜಮಾಅತೆ ಇಸ್ಲಾಮೀ ಹಿಂದ್ ಕಾಪು ವರ್ತುಲದ ಅಧ್ಯಕ್ಷ ಅನ್ವರ್ ಅಲಿ ಕಾಪು ಹೇಳಿದರು.
ಅವರು ಮಲ್ಲಾರು ಗ್ರಾಮದ ಬಡಗರಗುತ್ತು ವಾರ್ಡಿನ ಅಂಗನವಾಡಿಯಲ್ಲಿ, ರಾಷ್ಟ್ರೀಯ ಆರೋಗ್ಯ  ಅಭಿಯಾನದ ಅಂಗವಾಗಿ ಕಾಪು ಪ್ರಾಥಮಿಕ ಆರೋಗ್ಯ ಕೇಂದ್ರ ಹಮ್ಮಿಕೊಂಡಿರುವ ಡೆಂಗ್ಯೂ , ಮಲೇರಿಯಾ ದ ಜನಜಾಗ್ರತಿ ಮೂಡಿಸುವ ಕಾರ್ಯಕ್ರಮದಲ್ಲಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಆರೋಗ್ಯ ಸಹಾಯಕ ಹೇಮಂತ್ ರವರು, ಈ ಕಾಯಿಲೆಗಳ ಬಗ್ಗೆ ಜನರು ಹೆಚ್ಚು ಹೆಚ್ಚು ಜಾಗ್ರತರಾಗಬೇಕು.
ಡೆಂಗ್ಯೂ ಹರಡುವ ಸೊಳ್ಳೆಗಳು ಹಗಲು ಹೊತ್ತಿನಲ್ಲಿ ಮತ್ತು ಮಲೇರಿಯಾ ಹರಡುವ ಸೊಳ್ಳೆಗಳು ರಾತ್ರಿಯಲ್ಲಿ ಕಚ್ಚುತ್ತವೆ. ಆದ್ದರಿಂದ ಮನೆ ವಠಾರದಲ್ಲಿ ಯಾವುದೇ ರೀತಿಯಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು ಎಂದರು. ಇನ್ನೋರ್ವ ಸಂಪನ್ಮೂಲ ವ್ಯಕ್ತಿ ಕೃಷ್ಣ ರವರು ಕ್ಷಯ ರೋಗದ ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ ಕಾಪು ಜಮಾಅತೆ ಇಸ್ಲಾಮೀ ಹಿಂದ್ ಮಹಿಳಾ ವರ್ತುಲದ ಸಂಚಾಲಕಿ ಶೆಹೆನಾಜ್ ಕಾಪು, ಸ್ಯಾನಿಟೈಸರ್ ಮತ್ತು ಜನಜಾಗ್ರತಿ ಅಭಿಯಾನದ ಕರಪತ್ರ ವಿತರಿಸಿದರು.
ಆಶಾ ಕಾರ್ಯಕರ್ತೆ ಸೋಮವತಿ ಪ್ರಾರ್ಥಿಸಿದರು.  ಕಿರಿಯ ಆರೋಗ್ಯ ಸಹಾಯಕಿ ಹೀರಾ ಡಿ ನಾಯಕ್ ರವರು ಸ್ವಾಗತಿಸಿ , ಧನ್ಯವಾದ ನೀಡಿದರು. ಕಿರಿಯ ಮಹಿಳಾ ಆರೋಗ್ಯ ಸಹಾಯಕಿ ಯಶೋಧಾ ಅಡ್ಯಾರ್ ನಿರೂಪಿಸಿದರು.
 
 
 
 
 
 
 
 
 
 
 

Leave a Reply