ಮಣಿಪಾಲ ರಕ್ತದಾನ ಶಿಬಿರ

ಉಡುಪಿ: ಮಣಿಪಾಲ ತಾಂತ್ರಿಕ ಮಹಾವಿದ್ಯಾಲಯ (ಎಂಐಟಿ)ದ ರಾಷ್ಟ್ರೀಯ ಸೇವಾ ಯೋಜನೆಯ ೨ ಘಟಕಗಳ ನೇತೃತ್ವದಲ್ಲಿ ಮಣಿಪಾಲದ ಕೆಎಂಸಿ ರಕ್ತನಿಽ ವಿಭಾಗ ಸಹಯೋಗದಲ್ಲಿ ಎಂಐಟಿ ಫುಡ್‌ಕೋರ್ಟಿನಲ್ಲಿ ಮಾ.೧೮ರಂದು ಬೃಹತ್ ರಕ್ತದಾನ ಶಿಬಿರ ನಡೆಯಿತು.

ಮಣಿಪಾಲ ತಾಂತ್ರಿಕ ಮಹಾವಿದ್ಯಾಲಯ ನಿರ್ದೇಶಕ ಕ| ಡಾ| ಅನಿಲ್ ರಾಣಾ ಉದ್ಘಾಟಿಸಿ, ವಿದ್ಯಾರ್ಥಿಗಳಿಂದ ಮಾತ್ರ ರಕ್ತದ ಕೊರತೆ ನಿವಾರಿಸಲು ಸಾಧ್ಯ. ವಿದ್ಯಾರ್ಥಿಗಳು ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಿದಾಗ ಇತರರಿಗೂ ಮಾದರಿಯಾಗಿ ಪ್ರೇರಣೆ ನೀಡಿದಂತಾಗುತ್ತದೆ ಎಂದರು.

ಮಣಿಪಾಲ್ ರಕ್ತನಿಧಿಯ ಡಾ| ಶಮಿ ಶಾಸ್ತ್ರಿ, ದೂರದೂರುಗಳಿಂದ ಬರುವ ರೋಗಿಗಳಿಗೆ ಈ ರಕ್ತದಿಂದ ಸಹಾಯವಾಗಲಿದೆ ಎಂದರು. ರಕ್ತದಾನದ ಕೊಡುಗೆಗಾಗಿ ಸಮಾಜಸೇವಕ ರತ್ನಾಕರ್ ಸಾಮಂತ್ ಅವರನ್ನು ಸಮ್ಮಾನಿಸಲಾಯಿತು.
ಉಡುಪಿ ರಕ್ತದ ಆಪದ್ಬಾಂಧವ ಅಭಯ ಹಸ್ತ ಚಾರಿಟೆಬಲ್ ಟ್ರಸ್ಟ್‌ನ ಸತೀಶ್ ಸಾಲಿಯಾನ್ ಅವರಿಗೆ ಗೌರವ ಪುರಸ್ಕಾರ ನೀಡಲಾಯಿತು.

ಎಂಐಟಿಯ ಎನ್ನೆಸ್ಸೆಸ್ ಕಾರ್ಯಕ್ರಮಾಧಿಕಾರಿಗಳಾದ ಡಾ| ಬಾಲಕೃಷ್ಣ ಮದ್ದೋಡಿ, ಡಾ| ಪೂರ್ಣಿಮಾ ಭಾಗವತ್, ಡಾ| ಲಕ್ಷ್ಮಣ ರಾವ್, ಡಾ| ಆಶಾ ಸಿ.ಎಸ್. ಉಪಸ್ಥಿತರಿದ್ದರು. ಸಚಿ ನಿರ್ವಹಿಸಿ, ಡಾ| ಬಾಲಕೃಷ್ಣ ಮದ್ದೋಡಿ ಸ್ವಾಗತಿಸಿ, ಮಹೇಶ್ ವಂದಿಸಿದರು.
ರಾಷ್ಟ್ರೀಯ ಸೇವಾ ಯೋಜನೆ ವಿದ್ಯಾರ್ಥಿಗಳು 180 ಯುನಿಟ್ ರಕ್ತ ಸಂಗ್ರಹಿಸುವಲ್ಲಿ ನೆರವಾದರು.

 
 
 
 
 
 
 
 
 
 
 

Leave a Reply